Wednesday, April 29, 2026
Homeಬೆಂಗಳೂರುಬೆಂಗಳೂರಲ್ಲಿ ಧಮ್ ಹೊಡೆಯುವವರಿಗೆ ಶಾಕ್ ಕೊಟ್ಟ ಪೊಲೀಸರು, 295 ಮಂದಿಗೆ ದಂಡ

ಬೆಂಗಳೂರಲ್ಲಿ ಧಮ್ ಹೊಡೆಯುವವರಿಗೆ ಶಾಕ್ ಕೊಟ್ಟ ಪೊಲೀಸರು, 295 ಮಂದಿಗೆ ದಂಡ

295 people fined for smoking in public

ಬೆಂಗಳೂರು,ಮಾ.7-ನಿಷೇಧಿಸಲಾದ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದ 295 ಮಂದಿಗೆ ದಂಡ ವಿಧಿಸಲಾಗಿದೆ.ಉತ್ತರ ವಿಭಾಗದ ಪೊಲೀಸರು ನಿನ್ನೆ ಸಂಜೆಯಿಂದ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಕೋಟ್ಫಾ ಕಾಯ್ದೆಯಡಿ 40 ಪ್ರಕರಣಗಳನ್ನು ದಾಖಲಿಸಿದ್ದಾರೆ.

ವಿಭಾಗದ 13 ಪೊಲೀಸ್‌‍ ಠಾಣೆಗಳ ಸರಹದ್ದಿನಲ್ಲಿ ಸಾರ್ವಜನಿಕವಾಗಿ ಧೂಮಪಾನ ಮಾಡುವವರ ವಿರುದ್ಧ ಮತ್ತು ಅಂಗಡಿಗಳ ಪ್ರವೇಶ ದ್ವಾರದಲ್ಲಿ ಸಿಗರೇಟುಗಳ ಅಥವಾ ಬೀಡಿಗಳ ಜಾಹಿರಾತನ್ನು ಕಾನೂನು ಬಾಹಿರವಾಗಿ ಪ್ರಕಟಣೆ ಮಾಡಿರುವ ಅಂಗಡಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕೋಟ್ಫಾ ಕಾಯ್ದೆ ಉಲ್ಲಂಘನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಸೇವನೆ ಮಾಡುವವರಿಗೆ ದಂಡ ವಿಧಿಸಲಾಗಿದೆ. ಉತ್ತರವಿಭಾಗದ ಡಿಸಿಪಿ ಬಿ.ಎಸ್‌‍ ನೇಮೆಗೌಡ ಅವರ ನೇತೃತ್ವದಲ್ಲಿ ಮೂರು ಉಪ ವಿಭಾಗದ ಎಸಿಪಿಗಳು, 13 ಠಾಣೆಗಳ ಇನ್‌್ಸಪೆಕ್ಟರ್‌ಗಳು, ಸಬ್‌ಇನ್‌್ಸಪೆಕ್ಟರ್‌ಗಳು ಮತ್ತು ಅವರ ಸಿಬ್ಬಂದಿಗಳು ಈ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.

RELATED ARTICLES

Latest News