Wednesday, April 29, 2026
Homeಕ್ರೀಡಾ ಸುದ್ದಿವಿಶ್ವಕಪ್‌ ಟ್ರೋಫಿಯೊಂದಿಗೆ ಹನುಮಾನ್‌ ಆರ್ಶೀವಾದ ಪಡೆದ ಟೀಮ್ ಇಂಡಿಯಾ

ವಿಶ್ವಕಪ್‌ ಟ್ರೋಫಿಯೊಂದಿಗೆ ಹನುಮಾನ್‌ ಆರ್ಶೀವಾದ ಪಡೆದ ಟೀಮ್ ಇಂಡಿಯಾ

Team India receives blessings of Hanuman with World Cup trophy

ಅಹಮದಾಬಾದ್‌, ಮಾ.9- ಕಳೆದ ರಾತ್ರಿ ನಡೆದ ಟಿ 20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಚೋಕರ್ಸ್‌ ಖ್ಯಾತಿಯ ನ್ಯೂಜಿಲೆಂಡ್‌ ವಿರುದ್ಧ 96 ರನ್‌ ಗಳ ಭರ್ಜರಿ ಗೆಲುವು ದಾಖಲಿಸಿದ ನಂತರ ಟೀಮ್‌ ಇಂಡಿಯಾ ನಾಯಕ ಸೂರ್ಯ ಕುಮಾರ್‌ ಯಾದವ್‌ ಇಲ್ಲಿನ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಅಂಜನಿಪುತ್ರನ ಆರ್ಶೀವಾದ ಪಡೆದಿದ್ದಾರೆ.

ದೇಗುಲಕ್ಕೆ ಆಗಮಿಸಿದ ಸೂರ್ಯ ಅವರು ತಮ ಕೈಯಲ್ಲಿ ಇಡೀ ದೇಶವೇ ಹೆಮೆ ಪಡುವಂತಹ ಟ್ರೋಫಿಯನ್ನು ಹಿಡಿದುಕೊಂಡಿದ್ದು ಹೆಮೆಯ ಭಾವನೆ ಮೂಡಿಸಿತ್ತು.ಈ ವೇಳೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಹಾಗೂ ಐಸಿಸಿ ಅಧ್ಯಕ್ಷ ಜಯ್‌ ಶಾ ಕೂಡ ಜೊತೆಯಲ್ಲಿದ್ದರು. ಈ ವೇಳೆ ದೇವಾಲಯದ ಮಂಡಳಿ ವತಿಯಿಂದ ಸೂರ್ಯಕುಮಾರ್‌ ಯಾದವ್‌, ಗಂಭೀರ್‌ ಹಾಗೂ ಜೈಶಾರನ್ನು ಸನಾನಿಸಲಾಯಿತು.

ಸಂಜು ಸ್ಯಾಮ್ಸನ್‌ ಸ್ವಾಗತಕ್ಕೆ ಕೇರಳ ಸಿದ್ಧತೆ
ತಿರುವನಂತಪುರಂ, ಮಾ.9 (ಪಿಟಿಐ)- ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಹಾಗೂ ಟೂರ್ನಿಯ ಶ್ರೇಷ್ಠ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕ್ರಿಕೆಟಿಗ ಸಂಜು ಸ್ಯಾಮ್ಸನ್‌ ಅವರಿಗೆ ಕೇರಳ ಸರ್ಕಾರ ಅಧಿಕೃತ ಸ್ವಾಗತ ನೀಡಲಿದೆ ಎಂದು ರಾಜ್ಯ ಸಾಮಾನ್ಯ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ ತಿಳಿಸಿದ್ದಾರೆ.

ವಿಝಿಂಜಂ ಕರಾವಳಿ ಪಟ್ಟಣದ ಮೂಲದ ಸ್ಯಾಮ್ಸನ್‌, ಪಂದ್ಯಾವಳಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕೇರಳಿಗರಿಗೆ ಅಪಾರ ಹೆಮ್ಮೆ ತಂದಿದ್ದಾರೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಭಾರತದ ಗೆಲುವಿಗೆ ನೀಡಿದ ಕೊಡುಗೆಗಾಗಿ ಕ್ರಿಕೆಟಿಗನನ್ನು ಗೌರವಿಸಲು ರಾಜ್ಯ ಸರ್ಕಾರವು ರಾಜಧಾನಿಯಲ್ಲಿ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಿದೆ ಎಂದು ಸಚಿವರು ಹೇಳಿದರು.ಆದರೆ, ಸ್ವಾಗತದ ದಿನಾಂಕವನ್ನು ಅವರು ಉಲ್ಲೇಖಿಸಲಿಲ್ಲ. ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್‌ ತಂಡವನ್ನು 96 ರನ್‌ಗಳಿಂದ ಮಣಿಸಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ಪ್ರದರ್ಶಿಸಿತು, ಭಾನುವಾರ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿತು.

ಕ್ವಾರ್ಟರ್‌ ಫೈನಲ್‌‍, ಸೆಮಿಫೈನಲ್‌ ಮತ್ತು ಫೈನಲ್‌ನಲ್ಲಿ ಸ್ಯಾಮ್ಸನ್‌ ಅವರ ಪ್ರದರ್ಶನಗಳು ಟೂರ್ನಿಯಲ್ಲಿ ಭಾರತದ ಗೆಲುವನ್ನು ಖಚಿತಪಡಿಸುವಲ್ಲಿ ನಿರ್ಣಾಯಕ ವೆಂದು ಸಾಬೀತಾಯಿತು.

ಟೀಮ್‌ ಇಂಡಿಯಾಗೆ ಮೋದಿ ಅಭಿನಂದನೆ
ನವದೆಹಲಿ, ಮಾ.9- ಟಿ20 ವಿಶ್ವಕಪ್‌ ಗೆದ್ದು ಬೀಗಿರುವ ಟೀಮ್‌ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್‌ ತಂಡವನ್ನು 96 ರನ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಗೆದ್ದಿರುವುದಕ್ಕೆ ಇಡೀ ತಂಡವನ್ನು ಮೋದಿ ಅಭಿನಂದಿಸಿದ್ದಾರೆ.

ಮಾತ್ರವಲ್ಲ, ಟೀಮ್‌ ಇಂಡಿಯಾದ ಪ್ರದರ್ಶನವನ್ನು ಹಾಡಿ ಹೊಗಳಿದಿದ್ದಾರೆ.ಚಾಂಪಿಯನ್ಸ್ ! ಐಸಿಸಿ ಪುರುಷರ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು! ಈ ಗಮನಾರ್ಹ ಗೆಲುವು ಅಸಾಧಾರಣ ಕೌಶಲ್ಯ, ದೃಢನಿಶ್ಚಯ ಮತ್ತು ತಂಡದ ಕೆಲಸವನ್ನು ಪ್ರತಿಬಿಂಬಿಸುತ್ತದೆ. ಟೀಮ್‌ ಇಂಡಿಯಾ ಟೂರ್ನಿಯುದ್ದಕ್ಕೂ ಅತ್ಯುತ್ತಮ ಧೈರ್ಯವನ್ನು ತೋರಿಸಿದ್ದಾರೆ. ಈ ಗೆಲುವು ಪ್ರತಿಯೊಬ್ಬ ಭಾರತೀಯನು ಸಂತಸ ಮತ್ತು ಹೆಮ್ಮೆ ಪಡುವಂತೆ ಮಾಡಿದೆ ಎಂದಿದ್ದಾರೆ.

ಅಭಿನಂದನೆಗಳು, ಟೀಮ್‌ ಇಂಡಿಯಾ! ಎಂದು ಪ್ರಧಾನಿ ಮೋದಿ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಇನ್ನು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಕೂಡ ಟೀಮ್‌ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದು, ಟೂರ್ನಮೆಂಟ್‌ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್‌ ಮತ್ತು ಜಸ್‌‍ಪ್ರೀತ್‌‍ ಬುಮ್ರಾ ಅವರನ್ನು ಶ್ಲಾಘಿಸಿದ್ದಾರೆ.

ಹಾಗೆಯೇ ಅದ್ಭುತ ಗೆಲುವಿನೊಂದಿಗೆ ತವರಿನಲ್ಲಿ ಟ್ರೋಫಿಯನ್ನು ಉಳಿಸಿಕೊಂಡು ಮತ್ತೊಮ್ಮೆ ಮರೆಯಲಾಗದ ಕ್ಷಣವನ್ನು ನೀಡಿದ ಟೀಮ್‌ ಇಂಡಿಯಾಗೆ ಅಭಿನಂದನೆಗಳು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Latest News