Wednesday, April 29, 2026
Homeರಾಷ್ಟ್ರೀಯ20 ಸಾವಿರ ಕೋಟಿ ಬಿಟ್‌ಕಾಯಿನ್‌ ಹಗರಣದ ಪ್ರಮುಖ ಆರೋಪಿ ಬಂಧನ

20 ಸಾವಿರ ಕೋಟಿ ಬಿಟ್‌ಕಾಯಿನ್‌ ಹಗರಣದ ಪ್ರಮುಖ ಆರೋಪಿ ಬಂಧನ

Key accused in Rs 20,000 crore Bitcoin scam arrested

ನವದೆಹಲಿ, ಮಾ 11- ಸುಮಾರು 20,000 ಕೋಟಿ ರೂ. ಗೇನ್‌ ಬಿಟ್‌ಕಾಯಿನ್‌‍ ಕರೆನ್ಸಿಹಗರಣ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಡಾರ್ವಿನ್‌ ಲ್ಯಾಬ್ಸ್ ಸಹ-ಸಂಸ್ಥಾಪಕ ಆಯುಷ್‌ ವರ್ಷ್ಣಿ ಅವರನ್ನು ಸಿಬಿಐ ಬಂಧಿಸಿದೆ.

ವರ್ಷ್ಣಿ ವಿರುದ್ಧ ಸಂಸ್ಥೆಯು ಲುಕ್‌ಔಟ್‌ ನೋಟಿಸ್‌‍ ಹೊರಡಿಸಲಾಗಿತ್ತು. ದೇಶದಿಂದ ಪಲಾಯನ ಮಾಡಲು ಅವರು ಯತ್ನಿಸಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಪ್ರಕಾರ, ಡಾರ್ವಿನ್‌ ಲ್ಯಾಬ್ಸ್ ಡಿಜಿಟಲ್‌ ಮೂಲಸೌಕರ್ಯವನ್ನು ವಿನ್ಯಾಸಗೊಳಿಸಿತು ಮತ್ತು ಅಭಿವೃದ್ಧಿಪಡಿಸಿತು, ಇದು ಆಪಾದಿತ ವಂಚನೆಯ ಉದ್ಯಮ ಗೇನ್‌ ಬಿಟ್‌ಕಾಯಿನ್‌ನ ಕಾರ್ಯಾಚರಣೆಯ ಬೆನ್ನೆಲುಬಾಗಿದೆ.

ಡಾರ್ವಿನ್‌ ಲ್ಯಾಬ್‌್ಸಪ್ರೈವೇಟ್‌ ಲಿಮಿಟೆಡ್‌ ಮತ್ತು ಅದರ ಸಹ-ಸಂಸ್ಥಾಪಕರಾದ ವರ್ಷ್ಣಿ, ಸಾಹಿಲ್‌ ಬಾಗ್ಲಾ ಮತ್ತು ವಾಯೋಮಿ ಎಐನ ಮುಖ್ಯ ಬಂಡವಾಳ ಅಧಿಕಾರಿ ಮತ್ತು ಸಂಸ್ಥಾಪಕ ನಿಕುಂಜ್‌ ಜೈನ್‌ ಅವರು, ಎಂಸಿಎಪಿ ಎಂದು ಕರೆಯಲ್ಪಡುವ ಕ್ರಿಪ್ಟೋಕರೆನ್ಸಿ ಟೋಕನ್‌ ಮತ್ತು ಅದರ ಸಂಬಂಧಿತ ಇಆರ್‌ಸಿ -20 ಸಾರ್ಟ್‌ ಕಾಂಟ್ರಾಕ್ಟ್‌ನ ವಿನ್ಯಾಸ, ಅಭಿವೃದ್ಧಿ ಮತ್ತು ನಿಯೋಜನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಪತ್ತೆಹಚ್ಚಿದೆ.

ಡಾರ್ವಿನ್‌ ಲ್ಯಾಬ್‌್ಸ ಪ್ರಮುಖ ಸೈಟ್‌ ಸೇರಿದಂತೆ ಹಲವಾರು ವೇದಿಕೆಗಳ ಮೂಲಕ ನಡೆಸಲಾದ ಕ್ರಿಪ್ಟೋಕರೆನ್ಸಿ ಪೊಂಜಿ ಹಗರಣಕ್ಕೆ ಆಧಾರವಾಗಿರುವ ತಾಂತ್ರಿಕ ಕಾರ್ಯ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದೆ.

ಅಮಿತ್‌ ಭಾರದ್ವಾಜ್‌ (ಈಗ ನಿಧನರಾಗಿದ್ದಾರೆ) ಮತ್ತು ಅವರ ಸಹೋದರ ಅಜಯ್‌ ಭಾರದ್ವಾಜ್‌ ಅವರು ಇದರ ಮಾಸ್ಟರ್‌ ಮೈಂಡ್‌ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಂಪನಿಯು ಬಿಟ್‌ಕಾಯಿನ್‌‍ ಮೈನಿಂಗ್‌ ಪೂಲ್‌ ಪ್ಲಾಟ್‌ಫಾರ್ಮ್‌, ಬಿಟ್‌ಕಾಯಿನ್‌‍ ಪಾವತಿ ಗೇಟ್‌ವೇ, ಕಾಯಿನ್‌ ಬ್ಯಾಂಕ್‌ ಬಿಟ್‌ಕಾಯಿನ್‌‍ ವ್ಯಾಲೆಟ್‌ ಮತ್ತು ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಲು ಬಳಸುವ ಗೇನ್‌ ಬಿಟ್‌ಕಾಯಿನ್‌‍ ವೆಬ್‌ಸೈಟ್‌‍ ಸೇರಿದಂತೆ ಹಲವಾರು ಪ್ರಮುಖ ಘಟಕಗಳನ್ನು ಅಭಿವೃದ್ಧಿಪಡಿಸಲಾಗಿತ್ತು. 2015ರಲ್ಲಿ ಪ್ರಾರಂಭಿಸಲಾದ ಗೇನ್‌ ಬಿಟ್‌ಕಾಯಿನ್‌‍ ಕಾರ್ಯಾಚರಣೆಯನ್ನು ವೇರಿಯಬಲ್‌ ಟೆಕ್‌‍ ಪ್ರೈವೇಟ್‌ ಲಿಮಿಟೆಡ್‌ ಹೆಸರಲ್ಲಿ ಮರೆಮಾಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆಯು ಹೂಡಿಕೆದಾರರನ್ನು 18 ತಿಂಗಳ ಅವಧಿಯಲ್ಲಿ ಬಿಟ್‌ಕಾಯಿನ್‌ನಲ್ಲಿ ತಿಂಗಳಿಗೆ 10 ಪ್ರತಿಶತದಷ್ಟು ಅಸಾಧಾರಣ ಆದಾಯವನ್ನು ನೀಡುವ ಮೂಲಕ ಆಕರ್ಷಿಸಿತು, ಬಾಹ್ಯ ವಿನಿಮಯ ಕೇಂದ್ರಗಳಿಂದ ಡಿಜಿಟಲ್‌ ಕರೆನ್ಸಿಯನ್ನು ಖರೀದಿಸಲು ಮತ್ತು ಅದನ್ನು ಕ್ಲೌಡ್‌ ಮೈನಿಂಗ್‌‍ ಒಪ್ಪಂದಗಳ ಮೂಲಕ ಗೇನ್‌ಬಿಟ್‌ಕಾಯಿನ್‌ನೊಂದಿಗೆ ಠೇವಣಿ ಮಾಡಲು ಆಮಿಷ ನೀಡಲಾಗಿತ್ತು. ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾದ್ದು ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಪರಿಣಾಮಗಳಿಂದಾಗಿ ಸುಪ್ರೀಂ ಕೋರ್ಟ್‌ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಿತ್ತು. ವಂಚನೆಯ ಚಟುವಟಿಕೆಗಳ ಸಂಪೂರ್ಣ ವ್ಯಾಪ್ತಿಯನ್ನು ಬಹಿರಂಗಪಡಿಸಲು, ಭಾಗಿಯಾಗಿರುವ ಎಲ್ಲಾ ಪಕ್ಷಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಸಂಸ್ಥೆ ತನಿಖೆ ಆರಂಭಿಸಿದೆ ಎಂದು ಹೇಳಿದ್ದಾರೆ.

RELATED ARTICLES

Latest News