Homeರಾಜ್ಯಸಂಪುಟದಲ್ಲಿ ಕಿರಿಯರಿಗಿಂತಲೂ ಹಿರಿಯರಿಗೆ ಹೆಚ್ಚಿನ ಮಾನ್ಯತೆ

ಸಂಪುಟದಲ್ಲಿ ಕಿರಿಯರಿಗಿಂತಲೂ ಹಿರಿಯರಿಗೆ ಹೆಚ್ಚಿನ ಮಾನ್ಯತೆ

Seniors get more recognition than juniors in the cabinet

ಬೆಂಗಳೂರು, ಆ.3- ಯುವ ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳುತ್ತಿದ್ದ ಕಾಂಗ್ರೆಸ್‌‍ ಹೈಕಮಾಂಡ್‌ ಮತ್ತೆ ಹಳೆಯ ಮುಖಗಳಿಗೆ ಮಣೆಹಾಕಿದ್ದು, ಮೂವರನ್ನು ಹೊರತುಪಡಿಸಿದರೆ ಬಹುತೇಕ ಉಳಿದ ಎಲ್ಲರೂ 50 ವರ್ಷ ದಾಟಿದವರಾಗಿದ್ದಾರೆ. ಕೆ.ಎಚ್‌.ಮುನಿಯಪ್ಪ 78ವರ್ಷ ದಾಟಿದ್ದು, ಸಂಪುಟದಲ್ಲೇ ಅತ್ಯಂತ ಹಿರಿಯರಾಗಿದ್ದಾರೆ. ಒಂಭತ್ತು ಬಾರಿ ಸಂಸದರಾಗಿದ್ದವರು ಇದೇ ಮೊದಲ ಬಾರಿ ದೇವನಹಳ್ಳಿ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕೆ.ಜೆ.ಜಾರ್ಜ್‌ ನಂತರದಲ್ಲಿ ಹಿರಿಯರಾಗಿದ್ದು ಅವರಿಗೆ 77ವರ್ಷವಾಗಿದೆ. ಉಪ ಮುಖ್ಯಮಂತ್ರಿಯಾಗಿರುವ ಪರಮೇಶ್ವರ್‌ 75ವರ್ಷ. ಸಚಿವರಾದ ರಾಮಲಿಂಗಾರೆಡ್ಡಿ-73, ಪುಟ್ಟರಂಗ ಶೆಟ್ಟಿ -72, ಬಸವರಾಜ ರಾಯರೆಡ್ಡಿ-70 ವರ್ಷದ ವಯೋಮಾನದವರಾಗಿದ್ದಾರೆ.

ಉಳಿದಂತೆ ಕೆ.ಎಂ.ಶಿವಲಿಂಗೇಗೌಡ (68), ರುದ್ರಪ್ಪ ಲಮಾಣಿ (67), ಈಶ್ವರ ಖಂಡ್ರೆ (64), ಸತೀಶ್‌ ಜಾರಕಿಹೊಳಿ (64), ಡಿ.ಕೆ.ಶಿವಕುಮಾರ್‌ (64), ಪಿ.ಎಂ.ನರೇಂದ್ರಸ್ವಾಮಿ (63), ಟಿ.ರಘುಮೂರ್ತಿ (63), ಗಾಯತ್ರಿ ಶಾಂತಗೌಡ (63), ಎಂ.ಬಿ.ಪಾಟೀಲ್‌ (62), ಎಚ್‌.ಸಿ.ಬಾಲಕೃಷ್ಣ (61), ಜಮೀರ್‌ ಅಹಮದ್‌ ಖಾನ್‌ (60), ಮಧುಬಂಗಾರಪ್ಪ 60 ವರ್ಷದವರಾಗಿದ್ದಾರೆ.

ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ (59), ಶರಣಪ್ರಕಾಶ್‌ ಪಾಟೀಲ್‌ (59), ಯು.ಟಿ.ಖಾದರ್‌ (57), ಕೆ.ಎಸ್‌‍.ಬಸಂತಪ್ಪ (57), ಲಕ್ಷ್ಮಣ ಸವದಿ (56), ಶಿವರಾಜ ತಂಗಡಗಿ (55), ಬಿ.ನಾಗೇಂದ್ರ (55), ವಿಜಯಾನಂದ ಕಾಶಪ್ಪನವರ್‌ (54), ಬೈರತಿ ಸುರೇಶ್‌ (54), ಮಂಕಾಳ ವೈದ್ಯ (54), ಕೃಷ್ಣಭೈರೇಗೌಡ (53), ಅಜಯ್‌ ಸಿಂಗ್‌ (52), ಸಂತೋಷ್‌ ಲಾಡ್‌ 51ವರ್ಷದವರು.
ಪ್ರಿಯಾಂಕ್‌ ಖರ್ಗೆ (48), ರಿಜ್ವಾನ್‌ ಅರ್ಷದ್‌ (47), ಯತೀಂದ್ರ ಸಿದ್ದರಾಮಯ್ಯ 46 ವರ್ಷದವರಾಗಿದ್ದು, ಸಂಪುಟದಲ್ಲಿ ಕಿರಿಯರು ಎನಿಸಿಕೊಂಡಿದ್ದಾರೆ.

ಸಚಿವರ ಆಯ್ಕೆ ಅವಧಿ:
ಇನ್ನು ಮೊದಲ ಬಾರಿ ಆಯ್ಕೆಯಾಗಿರುವ ಪೈಕಿ ಮೂವರಿಗೆ ಮಾತ್ರ ಅವಕಾಶ ಸಿಕ್ಕಿದೆ. ಪ್ರದೀಪ್‌ ಈಶ್ವರ್‌, ದರ್ಶನ್‌ ದೃವನಾರಾಯಣ್‌ ಮೊದಲ ಬಾರಿ ಆಯ್ಕೆಯಾಗಿದ್ದರೂ, ಸಂಪುಟ ಸೇರುವ ತವಕದಲ್ಲಿದ್ದರು.

ಎಂಟು ಬಾರಿ ಶಾಸಕರಾಗಿರುವ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಿದ್ದು, ರಾಮಲಿಂಗಾರೆಡ್ಡಿ ಸಚಿವರಾಗಿದ್ದಾರೆ. ಆರನೇ ಬಾರಿ ಶಾಸಕರಾಗಿರುವ ಪರಮೇಶ್ವರ್‌ ಉಪ ಮುಖ್ಯಮಂತ್ರಿಯಾಗಿದ್ದು, ಬಸವರಾಜರಾಯರೆಡ್ಡಿ, ಕೆ.ಜೆ.ಜಾರ್ಜ್‌, ಕೃಷ್ಣಭೈರೇಗೌಡ, ಎಂ.ಬಿ.ಪಾಟೀಲ್‌ ಸಚಿವರಾಗಿದ್ದಾರೆ.

ಐದನೇ ಅವಧಿಗೆ ಶಾಸಕರಾಗಿರುವ ಎಚ್‌.ಸಿ.ಬಾಲಕೃಷ್ಣ, ಯು.ಟಿ.ಖಾದರ್‌, ಜಮೀರ್‌ ಅಹಮದ್‌ ಖಾನ್‌, ನಾಲ್ಕನೇ ಬಾರಿ ಶಾಸಕರಾಗಿರುವ ಚೆಲುವರಾಯ ಸ್ವಾಮಿ, ಈಶ್ವರ್‌ ಖಂಡ್ರೆ, ಲಕ್ಷ್ಮಣ ಸವದಿ, ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌, ಬಿ.ನಾಗೇಂದ್ರ, ಪುಟ್ಟಣ್ಣ ಶೆಟ್ಟಿ, ಸಂತೋಷ್‌ ಲಾಡ್‌, ಸತೀಶ್‌ ಜಾರಕಿಹೊಳಿ, ಕೆ.ಎಂ.ಶಿವಲಿಂಗೇಗೌಡ, ಶರಣ ಪ್ರಕಾಶ್‌ ಪಾಟೀಲ್‌ ಸಂಪುಟದಲ್ಲಿದ್ದಾರೆ.

ಮೂರನೇ ಬಾರಿ ಶಾಸಕರಾಗಿರುವ ಅಜಯ್‌ ಧರ್ಮಸಿಂಗ್‌, ಪಿ.ಎಂ.ನರೇಂದ್ರಸ್ವಾಮಿ, ಪ್ರಿಯಾಂಕ ಖರ್ಗೆ, ರಘುಮೂರ್ತಿ, ಶಿವರಾಜ್‌ ತಂಗಡಗಿ, ಎರಡನೇ ಬಾರಿ ಶಾಸಕರಾಗಿರುವ ವಿಜಯಾನಂದ ಕಾಶಪ್ಪನವರ್‌, ಮಧುಬಂಗಾರಪ್ಪ, ರಿಜ್ವಾನ್‌ ಅರ್ಷದ್‌, ಬಿ.ಎಸ್‌‍.ಬೈರತಿ ಸುರೇಶ್‌, ಮೊದಲ ಬಾರಿ ಶಾಸಕರಾಗಿರುವ ಕೆ.ಎಸ್‌‍.ಬಸವಂತಪ್ಪ, ಕೆ.ಎಚ್‌.ಮುನಿಯಪ್ಪ, ಒಮೆ ಶಾಸಕರಾಗಿ ಈಗ ವಿಧಾನ ಪರಿಷತ್‌ ಸದಸ್ಯರಾಗಿರುವ ಡಾ. ಯತೀಂದ್ರ ಸಿದ್ದರಾಮಯ್ಯ, ಸಚಿವರಾಗಿದ್ದಾರೆ.

RELATED ARTICLES
spot_img

Latest News