Friday, May 1, 2026
Homeಅಂತಾರಾಷ್ಟ್ರೀಯಇರಾಕ್‌ನಲ್ಲಿ ಅಮೆರಿಕ ಮಿಲಿಟರಿ ವಿಮಾನ ಪತನ

ಇರಾಕ್‌ನಲ್ಲಿ ಅಮೆರಿಕ ಮಿಲಿಟರಿ ವಿಮಾನ ಪತನ

Four crew dead after US refuelling plane crashes in Iraq, military says

ವಾಷಿಂಗ್ಟನ್‌, ಮಾ.13- ಇರಾನ್‌ ವಿರುದ್ಧದ ಯುದ್ದ ಕಾರ್ಯಾಚರಣೆ ಯಲ್ಲಿ ಭಾಗವಹಿಸುತ್ತಿದ್ದ ಅಮೆರಿಕ ಮಿಲಿಟರಿ ಇಂಧನ ತುಂಬುವ ವಿಮಾನ ಇರಾಕ್‌ನಲ್ಲಿ ಪತನಗೊಂಡಿದೆ.ರಕ್ಷಣಾ ಪ್ರಯತ್ನಗಳು ನಡೆಯು ತ್ತಿವೆ ಎಂದು ಅಮೆರಿಕ ಸೆಂಟ್ರಲ್‌ ಕಮಾಂಡ್‌ ತಿಳಿಸಿದೆ.ಯಾವುದೇ ಸಾವುನೋವುಗಳು ಸಂಭವಿಸಿವೆಯೇ ಎಂಬುದು ತಕ್ಷಣ ಸ್ಪಷ್ಟವಾಗಿಲ್ಲ.ಅಮೆರಿಕದ ಅಧಿಕಾರಿಯೊಬ್ಬರ ಪ್ರಕಾರ , ಅಪಘಾತಕ್ಕೀಡಾದ ಕೆಸಿ -135 ವಿಮಾನದಲ್ಲಿ ಕನಿಷ್ಠ ಐದು ಸಿಬ್ಬಂದಿ ಇದ್ದರು ಎಂದು ಹೇಳಿದರು.

ಅಪಘಾತವು ಪ್ರತಿಕೂಲ ಹವಾಮಾನ ಅಥವಾ ಗುಂಡಿನ ದಾಳಿಯಿಂದಾಗಿ ನಡೆದಿಲ್ಲ ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ,ಮಧ್ಯಪ್ರಾಚ್ಯವದಲ್ಲಿರುವ ಅಮೆರಿಕ ಸೆಂಟ್ರಲ್‌ ಕಮಾಂಡ್‌ ಪ್ರಕಾರ ಎರಡು ವಿಮಾನಗಳು ಬರುತ್ತಿತ್ತು ಮತ್ತು ಒಂದು ಸುರಕ್ಷಿತವಾಗಿ ಇಳಿಯಿತು ಮತ್ತು ಇನ್ನೊಂದು ಪಶ್ಚಿಮ ಇರಾಕ್‌ನಲ್ಲಿ ಪತನಗೊಂಡಿದೆ ಎಂದು ಹೇಳಿದೆ.

ಇದೇ ರೀತಿ ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ಅಮೆರಿಕದ ಅಧಿಕಾರಿ, ಭಾಗಿಯಾಗಿರುವ ಇನ್ನೊಂದು ವಿಮಾನ ಕೂಡ ಕೆಸಿ -135 ಟ್ಯಾಂಕರ್‌ ಎಂದು ಹೇಳಿದರು.ಸದ್ಯದಲ್ಲೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಇರಾನ್‌ ವಿರುದ್ಧದ ಯುಎಸ್‌‍ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ ಅಪಘಾತಕ್ಕೀಡಾದ ನಾಲ್ಕನೇ ಸಾರ್ವಜನಿಕವಾಗಿ ಗುರುತಿಸಲ್ಪಟ್ಟ ವಿಮಾನ ಟ್ಯಾಂಕರ್‌ ಇದಾಗಿದೆ.

ಕಳೆದ ವಾರ, ಕುವೈತ್‌ನಲ್ಲಿ ಗುಂಡಿನ ದಾಳಿಯಿಂದ ಮೂರು ಅಮೇರಿಕನ್‌ ಫೈಟರ್‌ ಜೆಟ್‌ಗಳನ್ನುಹೊಡೆದುರುಳಿಸಲಾಗಿತ್ತು .ಎಲ್ಲಾ ಆರು ಸೇನಾ ಪೈಲೆಟ್‌ ಸುರಕ್ಷಿತವಾಗಿ ಪರಾಗಿ ಚೇತರಿಸಿಕೊಂಡ ನಂತರ ಸ್ಥಿರ ಸ್ಥಿತಿಯಲ್ಲಿದ್ದರು ಎಂದು ಹೇಳಿದೆ.

ಇರಾನ್‌ ಯುದ್ಧದ ಸಮಯದಲ್ಲಿ ಇಲ್ಲಿಯವರೆಗೆ ಏಳು ಅಮೇರಿಕನ್‌ ಸೈನಿಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ, ಆದರೆ ಸುಮಾರು 140 ಅಮೇರಿಕನ್‌ ಸೇವಾ ಸದಸ್ಯರು ಗಾಯಗೊಂಡಿದ್ದಾರೆ, ಇದರಲ್ಲಿ ಎಂಟು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪೆಂಟಗನ್‌ ಈ ವಾರದ ಆರಂಭದಲ್ಲಿ ತಿಳಿಸಿದೆ.

ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್‌ ಹೆಗೆತ್‌ ಇಬ್ಬರೂ ಇರಾನ್‌ ಯುದ್ಧವು ಕೊನೆಗೊಳ್ಳುವ ಮೊದಲು ಹೆಚ್ಚಿನ ಅಮೆರಿಕನ್‌ ಜೀವಗಳನ್ನು ಬಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

RELATED ARTICLES

Latest News