Saturday, May 2, 2026
Homeರಾಜ್ಯಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ದಿವಾಳಿ ಸರ್ಕಾರದ ಬಳಿ ದುಡ್ಡಿಲ್ಲ : ಅಶೋಕ್‌ ವಾಗ್ದಾಳಿ

ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ದಿವಾಳಿ ಸರ್ಕಾರದ ಬಳಿ ದುಡ್ಡಿಲ್ಲ : ಅಶೋಕ್‌ ವಾಗ್ದಾಳಿ

The bankrupt government does not have money to pay salaries to government employees: Ashok attacks

ಬೆಂಗಳೂರು, ಮಾ.15-ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ರಾಜ್ಯ ಕಾಂಗ್ರೆಸ್‌‍ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಈ ಸಂಬಂಧ ತಮ ಎಕ್‌್ಸ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 51,000 ಅತಿಥಿ ಶಿಕ್ಷಕರು ಕಳೆದ 4 ತಿಂಗಳಿಂದ ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಂಬಳ ಪಾವತಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಲು ಹೊರಟಿದ್ದಾರೆ. ಸ್ವ ಘೋಷಿತ ಆರ್ಥಿಕ ತಜ್ಞ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ. ದಿವಾಳಿ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮದಿ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Latest News