Tuesday, April 14, 2026
Homeರಾಷ್ಟ್ರೀಯಫಾರ್ಮ್‌ಹೌಸ್‌‍ನಲ್ಲಿ ಡ್ರಗ್ಸ್ ಪಾರ್ಟಿ : ಟಿಡಿಪಿ ಸಂಸದ, ಮಾಜಿ ಬಿಆರ್‌ಎಸ್‌‍ ಶಾಸಕ ಸೇರಿ 11 ಮಂದಿ...

ಫಾರ್ಮ್‌ಹೌಸ್‌‍ನಲ್ಲಿ ಡ್ರಗ್ಸ್ ಪಾರ್ಟಿ : ಟಿಡಿಪಿ ಸಂಸದ, ಮಾಜಿ ಬಿಆರ್‌ಎಸ್‌‍ ಶಾಸಕ ಸೇರಿ 11 ಮಂದಿ ಅರೆಸ್ಟ್

Andhra Pradesh TDP MP, BRS leader Rohit Reddy among 10 detained after cocaine bust at Hyderabad farmhouse

ಹೈದರಾಬಾದ್‌, ಮಾ.15 ಫಾರ್ಮ್‌ಹೌಸ್‌‍ನಲ್ಲಿ ನಡೆದ ಪಾರ್ಟಿ ವೇಳೆ ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಆಂಧ್ರಪ್ರದೇಶದ ಟಿಡಿಪಿ ಸಂಸದ ಪುಟ್ಟ ಮಹೇಶ್‌ ಯಾದವ್‌,ಮಾಜಿ ಬಿಆರ್‌ಎಸ್‌‍ ಶಾಸಕ ಪೈಲಟ್‌ ರೋಹಿತ್‌ ರೆಡ್ಡಿ ಸೇರಿದಂತೆ ಹನ್ನೊಂದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌ ಸಮೀಪದ ಮೊಯಿನಾಬಾದ್‌ನಲ್ಲಿರುವ ಫಾರ್ಮ್‌ಹೌಸ್‌‍ ಮೇಲೆ ಕಳೆದ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ.ಈ ವೇಲೆ ಗುಂಡಿನ ಹಾರಾಟದ ಸದ್ದು ಕೇಳಿದೆ .ಪಾರ್ಟಿಯಲ್ಲಿ ಬಾಗಿಯಾಗಿದ್ದ ಹಲವರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎಮದು ಪೊಲೀಸ್‌‍ ಅಧೕಕಾರಿಯೊಬ್ಬರು ತಿಳಿಸಿದ್ದಾರೆ.

ಫಾರ್ಮ್‌ಹೌಸ್‌‍ ರೋಹಿತ್‌ ರೆಡ್ಡಿಗೆ ಎಂಬುವವರಿಗೆ ಸೇರಿದೆ.ಇಲ್ಲಿ ಮಾದಕ ದ್ರವ್ಯ ಪಾರ್ಟಿ ನಡೆಯುತ್ತಿದೆ ಎಂಬ ವಿಶ್ವಾಸಾರ್ಹ ಮಾಹಿತಿಯ ಮೇರೆಗೆ, ಎಲೈಟ್‌ ಆಕ್ಷನ್‌ ಗ್ರೂಪ್‌ ಫಾರ್‌ ಡ್ರಗ್‌ ಲಾ ಎನ್‌ಫೋರ್ಸ್‌ಮೆಂಟ್‌‍ (ಈಗಲ್‌‍) ಫೋರ್ಸ್‌ ಮತ್ತು ಪೊಲೀಸ್‌‍ ತಂಡ ರಾತ್ರಿ ದಾಳಿ ನಡೆಸಿದೆ.

ಪಾರ್ಟಿಯಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳು, ಉದ್ಯಮಿಗಳು ಮತ್ತು ರಾಜಕೀಯ ವ್ಯಕ್ತಿಗಳು ಭಾಗವಹಿಸಿತ್ತು ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಭಾಗವಹಿಸಿದವರಲ್ಲಿ ಒಬ್ಬ ಮಹಿಳೆ ಕೂಡ ಇದ್ದರು.

ಸ್ಥಳದಲ್ಲಿ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆಮ ಮತ್ತು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಲಾಗಿದೆ. ರೋಹಿತ್‌ ರೆಡ್ಡಿ,ಟಿಡಿಪಿ ಸಂಸದ ಸೇರಿ ಹಲವರಿಗೆ ರಕ್ತ ಪರೀಕ್ಷೆ ನಡೆಸಲಾಗಿದ್ದು ಅಧರಲ್ಲಿ ಕೆಲವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಇದು ರಾಜಕೀಯ ಪ್ರೇರಿತ ಎಂದು ಟೀಕಿಗಳು ಶುರುವಾಗಿದೆ. ಪ್ರಸ್ತುತ ಸಂಸದರನ್ನು ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಗೊತ್ತಾಗಿದೆ.

RELATED ARTICLES

Latest News