Sunday, April 12, 2026
Homeರಾಷ್ಟ್ರೀಯಅಬುಧಾಬಿ, ರಾಸ್‌‍ ಅಲ್‌ ಖೈಮಾ ಮತ್ತು ಶಾರ್ಜಾ ಸಂಪರ್ಕಿಸುವ ಏರ್‌ ಇಂಡಿಯಾ ಸೇವೆ ರದ್ದು

ಅಬುಧಾಬಿ, ರಾಸ್‌‍ ಅಲ್‌ ಖೈಮಾ ಮತ್ತು ಶಾರ್ಜಾ ಸಂಪರ್ಕಿಸುವ ಏರ್‌ ಇಂಡಿಯಾ ಸೇವೆ ರದ್ದು

UAE travel update: Air India, Air India Express reduce Dubai flights, Abu Dhabi services cancelled

ನವದೆಹಲಿ, ಮಾ.15- ಯುನೈಟೆಡ್‌ ಅರಬ್‌ ಎಮಿರೇಟ್ಸ್ ವಿಮಾನ ನಿಲ್ದಾಣ ಅಧಿಕಾರಿಗಳ ಸೂಚನೆಯ ಹಿನ್ನೆಲೆ ಏರ್‌ ಇಂಡಿಯಾ ಎಕ್ಸ್ ಪ್ರೆಸ್‌‍ ಭಾನುವಾರ ಅಬುಧಾಬಿ, ರಾಸ್‌‍ ಅಲ್‌ ಖೈಮಾ ಮತ್ತು ಶಾರ್ಜಾ ಸಂಪರ್ಕಿಸುವ ಯೋಜಿತ ವಿಮಾನಗಳನ್ನು ರದ್ದುಪಡಿಸಿದೆ.

ಆದರೆ ಪರಿಸ್ಥಿತಿ ಮತ್ತು ಸ್ಲಾಟ್‌ ಲಭ್ಯತೆಯನ್ನು ಅವಲಂಬಿಸಿ ದೆಹಲಿದುಬೈ ಮಾರ್ಗದಲ್ಲಿ ಒಂದು ರೌಂಡ್‌ ಟ್ರಿಪ್‌ ವಿಮಾನ ಸೇವೆಯನ್ನು ಮುಂದುವರಿಸಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ವಿಮಾನಯಾನ ಸಂಸ್ಥೆ ಪ್ರಕಟಿಸಿದ ಹೇಳಿಕೆಯಲ್ಲಿ, ಯುಎಇ ವಿಮಾನ ನಿಲ್ದಾಣ ಅಧಿಕಾರಿಗಳ ನಿರ್ದೇಶನದಂತೆ ಇಂದು ಅಬುಧಾಬಿ, ರಾಸ್‌‍ ಅಲ್‌ ಖೈಮಾ ಮತ್ತು ಶಾರ್ಜಾ ನಗರಗಳಿಗೆ ಹಾಗೂ ಅಲ್ಲಿಂದ ನಡೆಯಬೇಕಿದ್ದ ತಾತ್ಕಾಲಿಕ (-) ವಿಮಾನ ಕಾರ್ಯಾಚರಣೆಗಳನ್ನು ಕಡಿತಗೊಳಿಸುವ ಅಗತ್ಯ ಉಂಟಾಗಿದೆ ಎಂದು ತಿಳಿಸಿದೆ.

ಪಶ್ಚಿಮ ಏಷ್ಯಾ ಉದ್ವಿಗ್ನತೆ ಪರಿಣಾಮ
ಅಮೆರಿಕಾ-ಇಸ್ರೇಲ್‌ ಮತ್ತು ಇರಾನ್‌ ನಡುವಿನ ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ವಾಯುಪ್ರದೇಶ ನಿರ್ಬಂಧಗಳು ಜಾರಿಯಾಗಿದ್ದು, ಹಲವು ವಿಮಾನ ಸಂಸ್ಥೆಗಳು ಸೇವೆಗಳನ್ನು ಕಡಿತಗೊಳಿಸಿವೆ.

ನಿನ್ನೆ ಏರ್‌ ಇಂಡಿಯಾ ಹಾಗೂ ಏರ್‌ ಇಂಡಿಯಾ ಎಕ್‌್ಸಪ್ರೆಸ್‌‍ ಸಂಸ್ಥೆಗಳು ಮಧ್ಯಪ್ರಾಚ್ಯ ಪ್ರದೇಶಕ್ಕೆ ಮತ್ತು ಅಲ್ಲಿಂದ ಇಂದು 72 ನಿಯಮಿತ ಹಾಗೂ ವಿಶೇಷ ವಿಮಾನಗಳನ್ನು ಸಂಚರಿಸುವುದಾಗಿ ಘೋಷಿಸಿದ್ದವು.

RELATED ARTICLES

Latest News