Thursday, April 30, 2026
Homeಅಂತಾರಾಷ್ಟ್ರೀಯಅಮೆರಿಕದ ಎಫ್‌-35 ಜೆಟ್‌ ಮೇಲೆ ಇರಾನ್‌ ದಾಳಿ

ಅಮೆರಿಕದ ಎಫ್‌-35 ಜೆಟ್‌ ಮೇಲೆ ಇರಾನ್‌ ದಾಳಿ

Iran claims direct hit on US F-35 stealth jet, video shows damage midair

ಟೆಹ್ರಾನ್‌, ಮಾ.20- ಅಮೆರಿಕದ ಐದನೇ ತಲೆಮಾರಿನ ಎಫ್‌-35 ಫೈಟರ್‌ ಜೆಟ್‌ ಮೇಲೆ ಇರಾನ್‌ ದಾಳಿ ನಡೆಸಿದೆ. ಇರಾನ್‌ ಮೇಲೆ ಯುದ್ಧ ಕಾರ್ಯಾಚರಣೆ ನಡೆಸಿದ ನಂತರ ಅಮೆರಿಕದ ಎಫ್‌-35 ಲೈಟ್ನಿಂಗ್‌ ವಿಮಾನವು ಮಧ್ಯಪ್ರಾಚ್ಯದ ಅಮೆರಿಕದ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಮೆರಿಕದ ಸೆಂಟ್ರಲ್‌ ಕಮಾಂಡ್‌ ತಿಳಿಸಿದೆ.

ಇರಾನ್‌ನ ಆಕಾಶದ ಮೇಲೆ ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ ಮೂಲಕ ಹೊಡೆದುರುಳಿಸಲಾಗಿದೆ ಎಂದು ಮಾಹಿತಿ ಇದೆ. ದಾಳಿಯ ಬಳಿಕ ಎಫ್‌-35 ಫೈಟರ್‌ ಜೆಟ್‌ ತುರ್ತು ಭೂ ಸ್ಪರ್ಶ ಮಾಡಿದೆ. ವಿಮಾನದಲ್ಲಿರವ ಫೈಲಟ್‌ ಕೂಡಾ ಸುರಕ್ಷಿತ ಎಂದು ಅಮೆರಿಕ ಮಾಹಿತಿ ನೀಡಿದೆ.

ವಿಮಾನ ಸುರಕ್ಷಿತವಾಗಿ ಮರಳಿದೆ ಎಂದು ಕ್ಯಾಪ್ಟನ್‌ ಟಿಮ್‌ ಹಾಕಿನ್ಸ್ ತಿಳಿಸಿದ್ದಾರೆ. ಏನು ತಪ್ಪಾಗಿದೆ ಎಂಬುದರ ಕುರಿತು ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ. ವಿಮಾನ ಸುರಕ್ಷಿತವಾಗಿ ಇಳಿಯಿತು. ಪೈಲಟ್‌ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಹಾಕಿನ್ಸ್ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಎಫ್‌-35 ಫೈಟರ್‌ ಜೆಟ್‌ನ್ನು ಇರಾನ್‌ ಹಾನಿಗೊಳಿಸಿರುವುದು ದೃಢಪಟ್ಟರೆ, ಫೆಬ್ರವರಿಯಲ್ಲಿ ಸಂಘರ್ಷ ಪ್ರಾರಂಭವಾದ ನಂತರ ಅಮೆರಿಕದ ಇಂತಹ ಮುಂದುವರಿದ ವಿಮಾನವನ್ನು ಇರಾನ್‌ ಹೊಡೆದುರುಳಿಸಿದ ಮೊದಲ ಘಟನೆ ಇದಾಗಲಿದೆ.

ಸೇವೆಯಲ್ಲಿರುವ ಅತ್ಯಂತ ಮುಂದುವರಿದ ಯುದ್ಧ ವಿಮಾನಗಳಲ್ಲಿ ಒಂದಾದ ಎಫ್‌ -35, 100 ಮಿಲಿಯನ್‌ ಡಾಲರ್‌ಗಿಂತಲೂ (ಅಂದಾಜು 940 ಕೋಟಿ ರೂ.) ಹೆಚ್ಚು ಬೆಲೆ ಇದೆ. ಹೋರಾಟ ಮುಂದುವರೆದಂತೆ ಅಮೆರಿಕ ಮತ್ತು ಇಸ್ರೇಲ್‌ ಎರಡೂ ಎಫ್‌ -35 ಜೆಟ್‌ಗಳನ್ನು ನಿಯೋಜಿಸುತ್ತಿವೆ. ಇರಾನ್‌ ಯುದ್ಧ ಪ್ರಾರಂಭವಾದಾಗಿನಿಂದ ಕನಿಷ್ಠ 16 ಯುಎಸ್‌‍ ಮಿಲಿಟರಿ ವಿಮಾನಗಳು ನಾಶವಾಗಿವೆ. 10 ರೀಪರ್‌ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಇತರ 6 ವಿಮಾನಗಳು ದಾಳಿ ಅಥವಾ ಅಪಘಾತಗಳಲ್ಲಿ ಹಾನಿಗೊಳಗಾಗಿವೆ.

RELATED ARTICLES

Latest News