Saturday, May 2, 2026
Homeಜಿಲ್ಲಾ ಸುದ್ದಿಗಳುಚಿಕ್ಕಮಗಳೂರಲ್ಲಿ ನಾಗಲ್ಯಾಂಡ್‌ ಮೂಲದ ಯುವತಿ ಆತ್ಮಹತ್ಯೆ

ಚಿಕ್ಕಮಗಳೂರಲ್ಲಿ ನಾಗಲ್ಯಾಂಡ್‌ ಮೂಲದ ಯುವತಿ ಆತ್ಮಹತ್ಯೆ

Nagaland woman commits suicide in Chikkamagaluru

ಚಿಕ್ಕಮಗಳೂರು,ಮಾ.25- ನಗರದ ಅರವಿಂದ ನಗರ ಬಡಾವಣೆಯಲ್ಲಿ ನಾಗಾಲ್ಯಾಂಡ್‌ ಮೂಲದ ಯುವತಿಯೊಬ್ಬರು ತಮ ವಾಸದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತಳನ್ನು ಲುನ್ಸುಲಾ(22) ಎಂದು ಗುರುತಿಸಲಾಗಿದ್ದು, ಈಕೆ ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಉದ್ಯೋಗಿಯಾಗಿದ್ದರು.ಲುನ್ಸುಲಾ ತಮ ವಾಸದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಾವಿನ ಹಿಂದೆ ರಾಜೇಶ್‌ ಹಾಗೂ ತೇಜಸ್‌‍ ಎಂಬುವವರ ಕೈವಾಡವಿರಬಹುದು ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ.

ಮೃತ ಯುವತಿಯು ತನ್ನ ಡೈರಿಯಲ್ಲಿ ಈ ಇಬ್ಬರ ಹೆಸರನ್ನು ಉಲ್ಲೇಖಿಸಿದ್ದು, ಇವರು ತನಗೆ ತೀವ್ರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಬರೆದಿಟ್ಟಿದ್ದಾರೆ.ಘಟನೆಗೂ ಮುನ್ನ ಲುನ್ಸುಲಾ ಅವರು ಕಿವಿಶೆ ಕಿನಿಮಿ ಎಂಬುವವರ ಜೊತೆ ಸುಮಾರು ಅರ್ಧ ಗಂಟೆಗಳ ಕಾಲ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಲಶಿಲಾ ಇಂಚುಗರ್‌ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಡೈರಿಯಲ್ಲಿನ ಅಂಶಗಳು ಹಾಗೂ ಮೃತರ ಮೊಬೈಲ್‌ ಕರೆಗಳ ವಿವರಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಯುವತಿಯ ಆತಹತ್ಯೆಗೆ ನಿಖರವಾದ ಕಾರಣವೇನು ಮತ್ತು ಆ ಇಬ್ಬರು ವ್ಯಕ್ತಿಗಳು ನೀಡುತ್ತಿದ್ದರೆನ್ನಲಾದ ಹಿಂಸೆಯ ಸ್ವರೂಪ ತನಿಖೆಯಿಂದ ತಿಳಿದುಬರಲಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News