Homeಬೆಂಗಳೂರುಗೃಹಿಣಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಡೆಲಿವರಿ ಬಾಯ್‌ ಅರೆಸ್ಟ್

ಗೃಹಿಣಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಡೆಲಿವರಿ ಬಾಯ್‌ ಅರೆಸ್ಟ್

Delivery man forcefully enters Bengaluru woman's home arrested

ಬೆಂಗಳೂರು,ಜು.12- ಶೌಚಾಲಯ ಬಳಸುವ ನೆಪದಲ್ಲಿ ಗೃಹಿಣಿಯೊಬ್ಬರಿಗೆ ಕಿರುಕುಳ ನೀಡಿ ಪರಾರಿಯಾಗಿದ್ದ ಡಿಲವೆರಿ ಬಾಯ್‌ನನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬೆಳಗಾವಿಯ ನಿವಾಸಿ ಮಲ್ಲಿಕಾರ್ಜುನ ಕಾಮತ್‌(22) ಬಂಧಿತ ಫ್ಲಿಪ್‌ಕಾರ್ಟ್‌ನ ಡಿಲವೆರಿ ಬಾಯ್‌.

ನಿನ್ನೆ ಪಾರ್ಸಲ್‌ವೊಂದನ್ನು ತಲುಪಿಸಲು ಅಪಾರ್ಟ್‌ಮೆಂಟ್‌ಗೆ ಈ ಡಿಲವೆರಿ ಬಾಯ್‌ ಹೋಗಿದ್ದಾನೆ. ಆಗ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ಗೃಹಿಣಿಯೊಬ್ಬರೇ ಇದ್ದರು.
ತುರ್ತಾಗಿ ನಿಮ ಮನೆಯ ಶೌಚಾಲಯ ಬಳಸಬೇಕೆಂದು ಡೆಲಿವೆರಿ ಬಾಯ್‌ ಗೃಹಿಣಿ ಅವರನ್ನು ಕೇಳಿದ್ದಾನೆ. ಆಗ ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ತುರ್ತು ಪರಿಸ್ಥಿತಿ ಇದ್ದರೆ ಪುರುಷರಿರುವ ಪಕ್ಕದ ಫ್ಲಾಟ್‌ಗೆ ಹೋಗು ಎಂದು ಅವರು ಹೇಳಿದ್ದಾರೆ. ಅವರ ಮಾತನ್ನು ಲೆಕ್ಕಿಸದೆ, ಅನುಮತಿ ಇಲ್ಲದೆ ಶೌಚಾಲಯ ಬಳಸಿ ಹೊರಗೆ ಬಂದ ನಂತರ ಗೃಹಿಣಿಯ ಜೊತೆ ಅಸಭ್ಯ ಹಾಗೂ ವಿಕೃತವಾಗಿ ವರ್ತಿಸಿದ್ದಾನೆ.

ಆತನ ವರ್ತನೆಯಿಂದ ಆಘಾತಕ್ಕೊಳಗಾದ ಗೃಹಿಣಿ ಮೊಬೈಲ್‌ ಕ್ಯಾಮೆರಾ ಆನ್‌ ಮಾಡಿಕೊಂಡು ಫ್ಲಾಟ್‌ನ ಮುಂಬಾಗಿಲಿಗೆ ಬಂದು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಆಗ ಆತ ಅಲ್ಲಿಂದ ಓಡಿ ಹೋಗಿದ್ದಾನೆ.

ತನ್ನಗಾದ ಅನುಭವವನ್ನು ಗೃಹಿಣಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಮಾರತ್ತಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

RELATED ARTICLES
spot_img

Latest News