Homeರಾಜ್ಯಮೈಸೂರು ದಸರಾದಲ್ಲಿ ಕಂಬಳ : ಸಾಂಸ್ಕೃತಿಕ ಸಮಿಲನವೋ.. ಅಸಿತೆಯ ಸಂಘರ್ಷವೋ?

ಮೈಸೂರು ದಸರಾದಲ್ಲಿ ಕಂಬಳ : ಸಾಂಸ್ಕೃತಿಕ ಸಮಿಲನವೋ.. ಅಸಿತೆಯ ಸಂಘರ್ಷವೋ?

ಬೆಂಗಳೂರು, ಜು. 12- ನಾಡಹಬ್ಬ ಮೈಸೂರು ದಸರಾದಲ್ಲಿ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಆಯೋಜಿಸುವ ಪ್ರಸ್ತಾಪವು ರಾಜ್ಯದ ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.ಕರಾವಳಿ ಮತ್ತು ಮೈಸೂರು ಭಾಗದ ಸಂಸ್ಕೃತಿಯ ನಡುವಿನ ಈ ಹೊಸ ಸಮೀಕರಣವು ಹಲವು ಪರ-ವಿರೋಧದ ಆಯಾಮಗಳನ್ನು ತೆರೆದಿಟ್ಟಿದೆ.

ಕಂಬಳವು ಕೇವಲ ಕರಾವಳಿಯ ಕ್ರೀಡೆಯಲ್ಲ, ಅದು ತುಳುನಾಡಿನ ಸಾಂಸ್ಕೃತಿಕ ಅಸಿತೆ. ಮೈಸೂರು ದಸರಾದಂತಹ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕಂಬಳವನ್ನು ಪ್ರದರ್ಶಿಸುವುದರಿಂದ ರಾಜ್ಯದ ಸಾಂಸ್ಕೃತಿಕ ವೈವಿಧ್ಯ ಜಾಗತಿಕ ಮಟ್ಟದಲ್ಲಿ ಬಿಂಬಿತವಾಗುತ್ತದೆ. ಇದನ್ನು ಸಾಂಸ್ಕೃತಿಕ ವಿನಿಮಯವಾಗಿ ನೋಡಬೇಕೇ ಹೊರತು ವಿಭಜನೆಯಾಗಿ ಅಲ್ಲ ಎನ್ನುವುದು ದಕ್ಷಿಣ ಕನ್ನಡದ ಪ್ರತಿನಿಧಿಗಳ ವಾದವಾಗಿದೆ.

ಮೈಸೂರಿನ ಸಂಸ್ಕೃತಿ, ಆಚಾರ-ವಿಚಾರಗಳು ಶತಮಾನಗಳ ಇತಿಹಾಸ ಹೊಂದಿವೆ. ದಸರಾದಲ್ಲಿ ಸ್ಥಳೀಯ ಕಲೆಗಳಿಗೆ ಮೊದಲ ಆದ್ಯತೆ ಸಿಗಬೇಕು. ಕಂಬಳದಂತಹ ಕ್ರೀಡೆಗಳನ್ನು ದಸರಾ ವ್ಯಾಪ್ತಿಯಲ್ಲಿ ತರುವುದರಿಂದ ಸ್ಥಳೀಯ ಸಂಸ್ಕೃತಿಯ ಮಹತ್ವ ಕಡಿಮೆಯಾಗುತ್ತದೆ ಮತ್ತು ಮೈಸೂರಿನ ಮೂಲ ಕ್ರೀಡೆಗಳಾದ ಜಟ್ಟಿ ಕಾಳಗ, ಕಬಡ್ಡಿ ಮುಂತಾದವುಗಳಿಗೆ ಹಿನ್ನಡೆಯಾಗುತ್ತದೆ ಎಂಬುದು ಮೈಸೂರು ಭಾಗದ ಪ್ರತಿನಿಧಿಗಳ ಆತಂಕವಾಗಿದೆ.

ಸಾಂಸ್ಕೃತಿಕ ಅಸಿತೆಯ ರಕ್ಷಣೆ: ಮೈಸೂರು ಭಾಗದ ನಾಯಕರು ತಮ ಪ್ರಾದೇಶಿಕ ಸಾಂಸ್ಕೃತಿಕ ಹಿರಿಮೆಯನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ದಸರಾ ಆಚರಣೆಗಳು ಮೈಸೂರಿನ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸಬೇಕು ಎಂಬುದು ಅವರ ಬಲವಾದ ವಾದ. ಮೈಸೂರು ಭಾಗದ ಗ್ರಾಮೀಣ ಕ್ರೀಡೆಗಳು ಈಗಾಗಲೇ ಸೂಕ್ತ ಪ್ರೋತ್ಸಾಹದ ಕೊರತೆಯನ್ನು ಎದುರಿಸುತ್ತಿವೆ.

ಕಂಬಳದಂತಹ ದೊಡ್ಡಮಟ್ಟದ ಆಯೋಜನೆಗೆ ಸರ್ಕಾರ ಹೆಚ್ಚಿನ ಆರ್ಥಿಕ ಮತ್ತು ಆಡಳಿತಾತಕ ಒತ್ತು ನೀಡಿದಾಗ, ಸ್ಥಳೀಯ ಕ್ರೀಡೆಗಳು ಕಡೆಗಣಿಸಲ್ಪಡುತ್ತವೆ ಎಂಬುದು ಮುಖ್ಯ ಕಾಳಜಿ.
ಮೈಸೂರಿನ ದಸರಾ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದ್ದು, ಹೊರಗಿನ ಸಂಸ್ಕೃತಿಯನ್ನು ಆಮದು ಮಾಡಿಕೊಳ್ಳುವ ಮೂಲಕ ದಸರಾದ ಮೂಲ ಸ್ವರೂಪಕ್ಕೆ ಧಕ್ಕೆ ಬರುತ್ತದೆ ಎಂಬ ಭಾವನೆ ಸ್ಥಳೀಯರಲ್ಲಿ ಪ್ರಬಲವಾಗಿದೆ.

ಕ್ರೀಡಾ ಮೂಲಸೌಕರ್ಯ: ಕಂಬಳಕ್ಕೆ ಬೇಕಾದ ಭೌಗೋಳಿಕ ಪರಿಸರ ಮತ್ತು ನಿರ್ವಹಣಾ ಸವಾಲುಗಳನ್ನು ಮೈಸೂರಿನಲ್ಲಿ ಸೃಷ್ಟಿಸುವುದು ಕಷ್ಟಕರ ಹಾಗೂ ದುಬಾರಿ ಎಂಬುದು ಕೆಲವರ ವಾದ. ದಸರಾ ಮೈಸೂರು ಜನರ ಹೆಮೆ. ಇಂತಹ ಸಮಯದಲ್ಲಿ ಬೇರೆ ಪ್ರಾದೇಶಿಕ ಕ್ರೀಡೆಗೆ ಮಹತ್ವ ನೀಡುವುದು ಮೈಸೂರಿನ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಕಡಿಮೆ ಮಾಡುತ್ತದೆ ಎಂಬುದು ರಾಜಕೀಯ ಹಾಗೂ ಸಾಮಾಜಿಕ ಮುಖಂಡರ ಮುಖ್ಯ ಅಭಿಮತವಾಗಿದೆ.

ಸರ್ಕಾರಿ ಅನುದಾನ ಮತ್ತು ಆಡಳಿತಾತಕ ಗಮನವು ಕಂಬಳದ ಮೇಲೆ ಕೇಂದ್ರೀಕೃತವಾದರೆ, ಮೈಸೂರಿನ ಸ್ಥಳೀಯ ಗ್ರಾಮೀಣ ಕ್ರೀಡೆಗಳು ನಿರ್ಲಕ್ಷ್ಯಕ್ಕೆ ಒಳಗಾಗುವ ಅಪಾಯವಿದೆ. ಈ ವಿವಾದವು ಪ್ರಾದೇಶಿಕ ಅಸಿತೆಯ ರಾಜಕೀಯ ರೂಪವನ್ನು ಪಡೆದುಕೊಂಡಿದೆ.

ಸಾಂಪ್ರದಾಯಿಕ ಹಿನ್ನೆಲೆ: ದಸರಾ ಮೈಸೂರಿನ ಅಸಿತೆ ಮತ್ತು ರಾಜವಂಶಸ್ಥರ ಪರಂಪರೆಯನ್ನು ಪ್ರತಿಬಿಂಬಿಸುವ ಹಬ್ಬ. ಕಂಬಳವು ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯುಳ್ಳ ಆಚರಣೆಯಾಗಿದ್ದು, ಅದನ್ನು ದಸರಾದೊಂದಿಗೆ ಬೆರೆಸುವುದು ಸೂಕ್ತವಲ್ಲ. ವಾಣಿಜ್ಯೀಕರಣಗೊಳಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯದಲ್ಲಿ ಬರ ಪರಿಸ್ಥಿತಿಯಿರುವಾಗ ಮತ್ತು ಆಡಳಿತಾತಕ ಸವಾಲುಗಳಿರುವಾಗ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಂಬಳ ಆಯೋಜಿಸುವ ಅಗತ್ಯವಿಲ್ಲ ಎಂಬುದು ಮುಖ್ಯ ಆಕ್ಷೇಪಣೆ. ಕೆಲವು ದಲಿತ ಮತ್ತು ರೈತ ಸಂಘಟನೆಗಳು, ಕಂಬಳವು ಅಸಮಾನ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ ಎಂದು ಟೀಕಿಸಿದ್ದು, ದಸರಾದಲ್ಲಿ ಇದನ್ನು ತುರುಕಬಾರದು ಎಂದು ಆಗ್ರಹಿಸಿವೆ.

ಸರ್ಕಾರವು ಕಂಬಳವನ್ನು ಕೇವಲ ಪ್ರತ್ಯೇಕ ಆಯೋಜನೆಯಾಗಿ ನೋಡುವ ಬದಲು, ದಸರಾದಲ್ಲಿ ರಾಜ್ಯದ ಸಾಂಸ್ಕೃತಿಕ ಕ್ರೀಡಾಕೂಟ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕು. ಇದರಲ್ಲಿ ಕರಾವಳಿಯ ಕಂಬಳದೊಂದಿಗೆ, ಮೈಸೂರು ಭಾಗದ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳಿಗೂ ಸಮಾನ ವೇದಿಕೆ ಮತ್ತು ಪ್ರೋತ್ಸಾಹ ನೀಡಿದಾಗ ಮಾತ್ರ ವಿವಾದಗಳಿಗೆ ತೆರೆ ಬೀಳಲು ಸಾಧ್ಯ. ಪ್ರಾದೇಶಿಕತೆಯನ್ನು ಗೌರವಿಸುತ್ತಲೇ ರಾಜ್ಯದ ಸಮಗ್ರತೆಯನ್ನು ಸಾರುವ ಸಮತೋಲಿತ ನಿಲುವು ಇಂದು ತುರ್ತಾಗಿ ಅಗತ್ಯವಿದೆ.

RELATED ARTICLES

Latest News