Homeರಾಜ್ಯಕೊನೆಯ ದಿನಗಳಲ್ಲಿ ಅಪಪ್ರಚಾರದಿಂದ ತೀವ್ರ ನೊಂದಿದ್ದ ಎಸ್‌‍.ಜಾನಕಿ

ಕೊನೆಯ ದಿನಗಳಲ್ಲಿ ಅಪಪ್ರಚಾರದಿಂದ ತೀವ್ರ ನೊಂದಿದ್ದ ಎಸ್‌‍.ಜಾನಕಿ

ಬೆಂಗಳೂರು, ಜು. 12- ಖ್ಯಾತ ಗಾಯಕಿ ಎಸ್‌‍.ಜಾನಕಿಯವರು ಕೊನೆಯ ದಿನಗಳಲ್ಲಿ ಅಪ ಪ್ರಚಾರದಿಂದ ತೀವ್ರ ಮನನೊಂದಿದ್ದರು ಎಂದು ಕೇರ್‌ ಟೇಕರ್‌ ಮೈಸೂರಿನ ನವೀನ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಬಂದ ಲಿಂಕ್‌ ಒಂದನ್ನು ಗಮನಿಸಿದ ಎಸ್‌‍.ಜಾನಕಿಯವರು, ಈ ಹಿಂದೆ ತಮ ಪುತ್ರ ಮುರಳಿಕೃಷ್ಣನ ಬಗ್ಗೆ ಕೂಡ ಇದೇ ರೀತಿಯ ಅಪ ಪ್ರಚಾರ ಮಾಡಿದ್ದು, ಈ ಜನರ ನಡುವೆ ಇರುವುದಕ್ಕಿಂತ ಕಾಡಿನಲ್ಲೇ ವಾಸಮಾಡಬೇಕು ಎನಿಸುತ್ತಿದೆ ಎಂದು ಹೇಳಿಕೊಂಡಿದ್ದಾಗಿ ತಿಳಿಸಿದ್ದಾರೆ.

ಎಸ್‌‍.ಜಾನಕಿಯವರ ಪುತ್ರ ಮೈಸೂರಿನಲ್ಲೇ ನಿಧನರಾಗಿದ್ದರು. ಅನಂತರ ಎಸ್‌‍.ಜಾನಕಿಯವರಿಗೆ ಮೈಸೂರಿನ ನಂಟು ಆಪ್ತವಾಗಿತ್ತು. ಇಲ್ಲಿಯೇ ಇರಲು ಬಯಸಿದ್ದರು. ಪವನ್‌, ಅನೀಲ್‌, ಕಿಶನ್‌, ಅರುಳ್‌, ಸತೀಶ್‌ ಎಂಬ ನಾಲ್ಕೈದು ಜನರೊಂದಿಗೆ ಅವರ ಒಡನಾಟ ಹೊಂದಿದ್ದೆವು. ಅವರ ಎಲ್ಲಾ ಆಗು-ಹೋಗುಗಳನ್ನು ನೋಡಿಕೊಳ್ಳುತ್ತಿದ್ದೆವು ಎಂದು ತಿಳಿಸಿದ್ದಾರೆ.

2018ರಲ್ಲಿ ಮೈಸೂರಿನಲ್ಲಿ ಕೊನೆಯ ಕಾರ್ಯಕ್ರಮ ಮಾಡಿ ನಂತರ ಇಲ್ಲಿಯೇ ಉಳಿದುಕೊಂಡರು. ನಾನು ಒಂದು ಕಾಲದಲ್ಲಿ ಅವರ ಮನೆಯ ಕಾರು ಚಾಲಕನಾದರೆ ಸಾಕು ಎಂದು ಪ್ರಯತ್ನ ಮಾಡುತ್ತಿದ್ದೆ. ಅವರು ನನಗೆ ಮಗನ ಸ್ಥಾನ ಕೊಟ್ಟರು. ನಾನು ಮೈಸೂರಿನಲ್ಲೇ ಇರುತ್ತೇನೆ, ಇಲ್ಲಿಯೇ ನನ್ನ ಅಂತ್ಯಕ್ರಿಯೆ ನಡೆಯಬೇಕು ಎಂದು ಹೇಳುತ್ತಿದ್ದರು ಎಂದಿದ್ದಾರೆ.

ಮೊನ್ನೆ ರಾತ್ರಿ ಅವರ ಆರೋಗ್ಯ ಸ್ಥಿತಿ ಸರಿಯಾಗಿಲ್ಲ ಎಂದು ಕಾಳಜಿವಹಿಸುತ್ತಿದ್ದ ಭಾಗ್ಯ, ತಮಗೆ ಕರೆ ಮಾಡಿ ತಿಳಿಸಿದ್ದರು. ನಾನು ವೈದ್ಯರೊಂದಿಗೆ ಮನೆಗೆ ಹೋಗಿ ನೋಡಿದಾಗ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿತ್ತು. ನನ್ನ ತಾಯಿ ಜಾನಕಿಯಮವರನ್ನು ನೋಡಿ ಆಸ್ಪತ್ರೆಗೆ ದಾಖಲಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಅವರ ಮೊಮಗಳು ಅಪ್ಸರ ಬೆಂಗಳೂರಿನಲ್ಲಿದ್ದರು. ಅವರಿಗೆ ಕರೆ ಮಾಡಿದಾಗ ನಾನು ಬರುತ್ತೇನೆ. ಆಸ್ಪತ್ರೆಗೆ ದಾಖಲು ಮಾಡಿ ಎಂದು ಹೇಳಿದ್ದರು.

12 ಗಂಟೆಯೊಳಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ಹೇಳಿದ್ದಾರೆ.ಜಾನಕಿ ಅಮನವರಿಗೆ ಸಾಮಾನ್ಯವಾಗಿ ರಕ್ತದೊತ್ತಡ, ಮಧುಮೇಹ ಹೊರತು ಪಡಿಸಿದರೆ ಉಳಿದ ಯಾವ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ನವೀನ್‌ ತಿಳಿಸಿದ್ದಾರೆ.

ತಮ ತೋಟದಲ್ಲಿ ಅಂತ್ಯಕ್ರಿಯೆ ನಡೆಯಬೇಕೆಂದು ಜಾನಕಿಯಮನವರ ಆಸೆಯಾಗಿತ್ತು. ಅದರಂತೆ ಎಲ್ಲಾ ಸಿದ್ಧತೆಗಳಾಗಿವೆ ಎಂದು ಹೇಳಿದ್ದಾರೆ.ಜಾನಕಿಯಮ ವಾಸ ಮಾಡುತ್ತಿದ್ದ ಮೈಸೂರಿನ ಬೋಗಾದಿ ಮನೆಯ ರಸ್ತೆಗೆ ಎಸ್‌‍.ಜಾನಕಿ ಮುಖ್ಯರಸ್ತೆ ಎಂದು ನಾಮಕರಣ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

RELATED ARTICLES

Latest News