Homeಜಿಲ್ಲಾ ಸುದ್ದಿಗಳುನೆಲಮಂಗಲ : ತರಗತಿಯಲ್ಲೇ ಪ್ರಪೋಸ್‌‍ ಮಾಡಿದ ಪ್ರೊಫೆಸರ್‌ಗೆ ಚಪ್ಪಲಿ ಏಟು

ನೆಲಮಂಗಲ : ತರಗತಿಯಲ್ಲೇ ಪ್ರಪೋಸ್‌‍ ಮಾಡಿದ ಪ್ರೊಫೆಸರ್‌ಗೆ ಚಪ್ಪಲಿ ಏಟು

Nelamangala: Professor thrashed with slippers for proposing in class

ನೆಲಮಂಗಲ,ಮಾ.26- ಪ್ರತಿಷ್ಠಿತ ಮೆಡಿಕಲ್‌ ಕಾಲೇಜಿನ ಪ್ರೊಫೆಸರ್‌ರೊಬ್ಬರು ತರಗತಿಯೊಳಗೆ ವಿದ್ಯಾರ್ಥಿನಿಗೆ ಪ್ರೇಮನಿವೇದನೆ ಹೇಳಿಕೊಂಡು ಚಪ್ಪಲಿ ಏಟು ತಿಂದ ಘಟನೆ ನಡೆದಿದೆ.

ಗ್ರಾಮಾಂತರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಮೆಡಿಕಲ್‌ ಕಾಲೇಜಿನ ಪ್ರೊಫೆಸರ್‌ ಅಬ್ದುಲ್‌ ಎಂಬಾತ ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಚಾಕೊಲೇಟ್‌ ಕೊಟ್ಟು ಪ್ರಪೋಸ್‌‍ ಮಾಡಿದ್ದಾರೆ.

ಪ್ರೊಫೆಸರ್‌ರವರ ನಡವಳಿಕೆಯಿಂದ ವಿದ್ಯಾರ್ಥಿನಿ ಒಂದು ಕ್ಷಣ ತಬ್ಬಿಬ್ಬಾಗಿ ಅವರ ವಿರುದ್ಧ ಆಕ್ರೋಶಗೊಂಡು ತರಗತಿಯಲ್ಲೇ ಪ್ರಶ್ನಿಸಿದ್ದಾರೆ.ಅಬ್ದುಲ್‌ ಅವರ ಮಾತಿನಿಂದ ಕೋಪಗೊಂಡ ವಿದ್ಯಾರ್ಥಿನಿ ತನ್ನ ಚಪ್ಪಲಿಯಿಂದ ಥಳಿಸಿದ್ದಾರೆ. ಆ ಸಂದರ್ಭದಲ್ಲಿ ಸಹ ವಿದ್ಯಾರ್ಥಿಗಳು ವಿದ್ಯಾರ್ಥಿನಿಯನ್ನು ಸಮಾಧಾನಪಡಿಸಿ ಕರೆದುಕೊಂಡು ಹೋಗಿದ್ದಾರೆ.

ಪ್ರೊಫೆಸರ್‌ ವರ್ತನೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‌‍ನಲ್ಲೇ ಅಟ್ಟಾಡಿಸಿ ಹೊಡೆದಿದ್ದಾರೆ. ಆ ಸಂದರ್ಭದಲ್ಲಿ ಅಬ್ದುಲ್‌ ತಮ ಕಾರಿನ ಬಳಿ ಹೋಗುತ್ತಿದ್ದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಹೆದರಿದ ಪ್ರೊಫೆಸರ್‌ ವಿದ್ಯಾರ್ಥಿಗಳಿಂದ ತಪ್ಪಿಸಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾನೆೆ.

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯ ರೂಪಿಸುವ ಶಿಕ್ಷಕರೇ ಪ್ರೀತಿ-ಪ್ರೇಮ ಹೆಸರಿನಲ್ಲಿ ಅವರ ಭವಿಷ್ಯ ಹಾಳು ಮಾಡುತ್ತಿರುವುದು ವಿಷಾದಕರ.

RELATED ARTICLES
spot_img

Latest News