Saturday, May 2, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-03-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-03-2026)

Today's Horoscope

ನಿತ್ಯ ನೀತಿ : ತಪ್ಪಿದ ಸೂರ್ಯೋದಯಕ್ಕಾಗಿ ಮರುಗುವ ಬದಲು ದಿಕ್ಕು ಬದಲಿಸಿಕೊಂಡು ಅಷ್ಟೇ ಮನೋಹರವಾದ ಸೂರ್ಯಾಸ್ತಕ್ಕಾಗಿ ಕಾಯುವುದು ಒಳಿತು..!

ಪಂಚಾಂಗ : ಭಾನುವಾರ, 29-03-2026

ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಶುಕ್ಲ / ತಿಥಿ: ಏಕಾದಶಿ / ನಕ್ಷತ್ರ: ಆಶ್ಲೇಷಾ / ಯೋಗ: ಧೃತಿ / ಕರಣ: ಭವ
ಸೂರ್ಯೋದಯ – 06.20
ಸೂರ್ಯಾಸ್ತ – 6.32
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :

ಮೇಷ: ಅನವಶ್ಯಕ ವಾದ-ವಿವಾದಗಳಿಗೆ ಸಿಲುಕಿ ತೊಂದರೆ ಅನುಭವಿಸುವಿರಿ.
ವೃಷಭ: ಮಕ್ಕಳ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸಿ.
ಮಿಥುನ: ಸರ್ಕಾರಿ ಕೆಲಸ-ಕಾರ್ಯಗಳಿಂದ ಅನುಕೂಲವಾಗಲಿದೆ. ಆತ್ಮಗೌರವ ಹೆಚ್ಚಾಗಲಿದೆ.

ಕಟಕ: ಕುಟುಂಬದೊಂದಿಗೆ ನಡೆದ ವೈಮನಸ್ಸು ಶೀಘ್ರ ಬಗೆಹರಿಸಿಕೊಳ್ಳುವುದು ಒಳಿತು.
ಸಿಂಹ: ವ್ಯವಹಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳು ವಲ್ಲಿ ವಿಫಲವಾದರೆ ತೊಂದರೆ ಅನುಭವಿಸುವಿರಿ.
ಕನ್ಯಾ: ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ.

ತುಲಾ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.
ವೃಶ್ಚಿಕ: ಖಾಸಗಿ ವಲಯ ದಲ್ಲಿದ್ದರೆ ಹೊಸ ಅವಕಾಶಗಳು ಸಿಗುತ್ತವೆ.
ಧನುಸ್ಸು: ಉದ್ಯೋಗದ ಕಡೆಗೆ ಹೆಚ್ಚಿನ ಗಮನಹರಿಸಿ.

ಮಕರ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ಕುಂಭ: ಮನೆಗೆ ಹೊಸ ಅತಿಥಿಯೊಬ್ಬರ ಸೇರ್ಪಡೆಯಾಗುವುದರಿಂದ ಸಂತೋಷವಾಗುತ್ತದೆ.
ಮೀನ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದು ಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.

RELATED ARTICLES

Latest News