Wednesday, April 29, 2026
Homeರಾಜ್ಯದಿಢೀರನೆ ಸುರಿದ ಬಿಡುಗಾಳಿ ಸಹಿತ ಭಾರಿ ಮಳೆಗೆ ಬೆಂಗಳೂರು ಅಲ್ಲೋಲ-ಕಲ್ಲೋಲ

ದಿಢೀರನೆ ಸುರಿದ ಬಿಡುಗಾಳಿ ಸಹಿತ ಭಾರಿ ಮಳೆಗೆ ಬೆಂಗಳೂರು ಅಲ್ಲೋಲ-ಕಲ್ಲೋಲ

ಬೆಂಗಳೂರು, ನಗರದಲ್ಲಿ ಇಂದು ಸಂಜೆ ಹಲವು ಭಾಗಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮೆಜೆಸ್ಟಿಕ್, ಶಾಂತಿನಗರ, ಕೋರಮಂಗಲ, ರಾಜಾಜಿನಗರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಭಾರೀ ಮಳೆಯ ಸುರಿಮಳೆಯಾಗಿ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪದಿಂದ ಬಳಲುತ್ತಿದ್ದ ನಗರ ನಿವಾಸಿಗಳಿಗೆ ಈ ಮಳೆ ಸ್ವಲ್ಪ ಮಟ್ಟಿಗೆ ತಂಪನ್ನು ತಂದಿದೆ. ಉಷ್ಣಾಂಶದಿಂದ ಕಂಗೆಟ್ಟಿದ್ದ ಜನರು ಮಳೆಯ ಸವಿಯನ್ನು ಅನುಭವಿಸಿದರೆ, ಕೆಲವರು ಮಳೆ ಕಾರಣದಿಂದ ದಿನನಿತ್ಯದ ಚಟುವಟಿಕೆಗಳಲ್ಲಿ ತೊಂದರೆ ಅನುಭವಿಸಿದರು.

ಇನ್ನೊಂದೆಡೆ, ಭಾರೀ ಗಾಳಿ ಮತ್ತು ಮಳೆಯಿಂದ ವಾಹನ ಸವಾರರು ಪರದಾಡಿದರು. ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳ ಸಂಚಾರ ನಿಧಾನಗೊಂಡಿತು. ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನಗಳ ಸರದಿ ಸಾಲುಗಳು ಕಂಡುಬಂದಿದ್ದು, ಕಚೇರಿ ಸಮಯದಲ್ಲಿ ಪ್ರಯಾಣಿಸುತ್ತಿದ್ದ ಜನರು ಹೆಚ್ಚು ತೊಂದರೆ ಅನುಭವಿಸಿದರು.

RELATED ARTICLES

Latest News