Homeರಾಜ್ಯತನ್ವೀರ್‌ ಸೇಠ್‌ಗೆ ತಪ್ಪಿದ ಸಚಿವ ಸ್ಥಾನ : ರೊಚ್ಚಿಗೆದ್ದ ಕಾರ್ಯಕರ್ತರಿಂದ ಪ್ರತಿಭಟನೆ

ತನ್ವೀರ್‌ ಸೇಠ್‌ಗೆ ತಪ್ಪಿದ ಸಚಿವ ಸ್ಥಾನ : ರೊಚ್ಚಿಗೆದ್ದ ಕಾರ್ಯಕರ್ತರಿಂದ ಪ್ರತಿಭಟನೆ

ಮೈಸೂರು,ಆ.3- ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ತನ್ವೀರ್‌ ಸೇಠ್‌ ಅವರ ನಿವಾಸದ ಬಳಿ ಬೆಂಬಲಿಗರು ಹಾಗೂ ಯೂತ್‌ ಕಾಂಗ್ರೆಸ್‌‍ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಘೋಷಣೆ ಕೂಗಿದ ಕಾರ್ಯಕರ್ತರು ಸರ್‌, ಪಕ್ಷವಿರೋಧಿಗಳಿಗೆ ಸಚಿವ ಸ್ಥಾನ ನೀಡುತ್ತಾರೆ, ನಿಮಗೇಕೆ ನ್ಯಾಯ ಇಲ್ಲ?, ನಿಷ್ಠಾವಂತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಬೆಂಬಲಿಗರ ಆಗ್ರಹ :
ನೀವೇನೂ ತಪ್ಪು ಮಾಡಿಲ್ಲ. ನೆನ್ನೆ-ಮೊನ್ನೆ ಬಂದವರಿಗೆ, ಪಕ್ಷಕ್ಕೆ ಮೋಸ ಮಾಡಿದವರಿಗೆ ಸ್ಥಾನ ಕೊಡುತ್ತಾರೆ. ಇಂತಹ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಅರ್ಥವೇ ಇಲ್ಲ ಎಂದು ಬೆಂಬಲಿಗರು ತನ್ವೀರ್‌ ಸೇಠ್‌ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಹೈಕಮಾಂಡ್‌ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, ಅನ್ಯಾಯದ ವಿರುದ್ಧ ಕಠಿಣ ನಿಲುವು ತಾಳಬೇಕು. ಅಗತ್ಯವಿದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಹೋರಾಟ ನಡೆಸಿ ಎಂದು ಒತ್ತಾಯಿಸಿದರು.

ರಾಜಕೀಯ ಚರ್ಚೆಗೆ ಕಾರಣಈ ಬೆಳವಣಿಗೆ ಕಾಂಗ್ರೆಸ್‌‍ ವಲಯದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ತನ್ವೀರ್‌ ಸೇಠ್‌ ಅವರ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES
spot_img

Latest News