ನವದೆಹಲಿ,ಮೇ2- ವಾಣಿಜ್ಯ ಸಿಲಿಂಡರ್ ಬೆಲೆ ಗಗನಕ್ಕೇರಿದ ಬೆನ್ನಲ್ಲೇ, ಇದೀಗ ಖಾಸಗಿ ಕಮರ್ಷಿಯಲ್ ಗ್ಯಾಸ್ ದರದಲ್ಲಿ ಭಾರೀ ಏರಿಕೆ ಆಗಿದೆ.ನಿನ್ನೆ ಸರ್ಕಾರಿ ಸ್ವಾಮ್ಯದ ಕಮರ್ಷಿಯಲ್ ಗ್ಯಾಸ್ ದರ 45% ಏರಿಕೆ ಆಗಿತ್ತು. ಇದೀಗ ಖಾಸಗಿ ಕಮರ್ಷಿಯಲ್ ಗ್ಯಾಸ್ ದರ ಶೇ.50ರಿಂದ ಶೇ.60ರಷ್ಟು ಏರಿಕೆ ಕಂಡಿದೆ. ಕಂಪನಿಗಳಿಗೆ ತಕ್ಕಂತೆ ಖಾಸಗಿ ಕಮರ್ಷಿಯಲ್ ಸಿಲಿಂಡರ್ ದರ ಇಂದಿನಿಂದಲೇ ಏರಿಕೆಯಾಗಲಿದೆ.
17ಕೆಜಿ ಖಾಸಗಿ ಕಮರ್ಷಿಯಲ್ ಗ್ಯಾಸ್ ಬೆಲೆ ಇಂದಿನಿಂದ 4,500 ರೂಪಾಯಿಗೆ ಏರಿಕೆ ಕಂಡಿದೆ.ಜ್ಯೋತಿ ಗ್ಯಾಸ್, ಟೋಟಲ್ ಎನರ್ಜೀಸ್, ಸೂಪರ್ ಗ್ಯಾಸ್ ಸೇರಿದಂತೆ ಬಹುತೇಕ ಎಲ್ಲಾ ಖಾಸಗಿ ಕಮರ್ಷಿಯಲ್ ಗ್ಯಾಸ್‌ಗಳ ಬೆಲೆಯೂ ಏರಿಕೆ ಕಂಡಿದೆ.
ನಿನ್ನೆವರೆಗೆ 2300 ಇದ್ದ ಖಾಸಗಿ ಕಮರ್ಷಿಯಲ್ ಸಿಲಿಂಡರ್ ದರ ಇಂದು ಏಕಾಏಕಿ ಶೇ.50 ಏರಿಕೆ ಆಗಿದೆ. ಖಾಸಗಿ ಕಂಪನಿಗಳ ಈ ದುಬಾರಿ ಏರಿಕೆ ಕಂಡು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.ಮೇ 1ರಂದು ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು 991 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಈ ಹಠಾತ್ ಬೆಲೆ ಏರಿಕೆಯು ಹೋಟೆಲ್ ಗಳು ಮತ್ತು ರೆಸ್ಟೋರೆಂಟ್‌ಗಳ ಬೆಲೆಗಳನ್ನು ಕೂಡ ಹೆಚ್ಚಿಸಿದೆ.
ಇನುಂದೆ ಹೊರಗೆ ಊಟ ಮಾಡುವುದು ದುಬಾರಿಯಾಗಿದೆ. ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ದುಬಾರಿ ಹಣ ಕೊಟ್ಟು ಊಟ ಮಾಡುವ ಸ್ಥಿತಿ ಎದುರಾಗಲಿದೆ.ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 40 ರಿಂದ 50 ರೂ.ಗಳಷ್ಟು ಹೆಚ್ಚಾಗಬಹುದು ಎನ್ನಲಾಗಿದೆ.
ಸಿಲಿಂಡರ್ ಗಳ ಬೆಲೆ ಈಗಾಗಲೇ 1000 ರೂ.ಗಳ ಹತ್ತಿರ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತಷ್ಟು ಹೆಚ್ಚಳವಾದರೆ, ಸಾಮಾನ್ಯ ಜನರ ಅಡುಗೆ ಬಜೆಟ್ ಕೂಡ ಹೆಚ್ಚಾಗಲಿದೆ. ದೇಶೀಯ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆ 40ರಿಂದ 50 ರೂ.ಗಳಷ್ಟು ಹೆಚ್ಚಾಗಬಹುದು ಎನ್ನಲಾಗುತ್ತಿದೆ.
ಅನಿಲ ಬೆಲೆ ಏರಿಕೆಯು ಗೃಹಿಣಿಯರ ಸಮಸ್ಯೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅನೇಕ ಕುಟುಂಬಗಳು ತಮ ಖರ್ಚುಗಳನ್ನು ನಿಯಂತ್ರಣದಲ್ಲಿಡಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಬಹುದು. ಕೆಲವು ಸ್ಥಳಗಳಲ್ಲಿ ಒಲೆಗಳ ಬಳಕೆಯನ್ನು ಹೆಚ್ಚುತ್ತಾ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.
ಇದು ನಗರದ ಫ್ಲಾಟ್ ಸಂಸ್ಕೃತಿಯ ಮೇಲೂ ಪರಿಣಾಮ ಬೀರಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಏರಿಳಿತಗೊಳ್ಳುತ್ತಿದೆ. ಇದು ಸ್ಥಳೀಯ ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇಲ್ಲಿಯವರೆಗೆ, ಸರ್ಕಾರವು ತೆರಿಗೆಗಳು ಮತ್ತು ಸೆಸ್‌ಗಳನ್ನು ಕಡಿಮೆ ಮಾಡುವ ಮೂಲಕ ಹಣದುಬ್ಬರದ ನೇರ ಪರಿಣಾಮವನ್ನು ಕಡಿಮೆ ಮಾಡಲು ಪ್ರಯತ್ನಿಸಿತ್ತು.
ಈಗ ಜಾಗತಿಕವಾಗಿ ಬೆಲೆಗಳು ಏರುತ್ತಿರುವುದರಿಂದ, ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಏರುವ ಸಾಧ್ಯತೆ ಹೆಚ್ಚಾಗಿದೆ. ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ಭಾರತದ ಹೋಟೆಲ್ ಉದ್ಯಮವನ್ನೇ ನಡುಗಿಸಿತ್ತು. ಸಿಲಿಂಡರ್ ಸಿಗದೆ ಸಾವಿರಾರು ಹೋಟೆಲ್‌ಗಳು ಬಂದ್ ಆಗಿತ್ತು. ಇದೀಗ ಕಮರ್ಷಿಯಲ್ ಸಿಲಿಂಡರ್‌ಗಳ ದಿಢೀರ್ ದರ ಏರಿಕೆಗೆ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ, ತಿಂಡಿ, ಊಟದ ಬೆಲೆಗಳನ್ನು ಏರಿಕೆ ಮಾಡಲು ಮುಂದಾಗಿದ್ದಾರೆ.
