Friday, April 17, 2026
Homeರಾಜ್ಯಆಟೋ ಎಲ್‌ಪಿಜಿ ಪೂರೈಕೆಯಲ್ಲಿ ಗಣನೀಯ ಹೆಚ್ಚಳ

ಆಟೋ ಎಲ್‌ಪಿಜಿ ಪೂರೈಕೆಯಲ್ಲಿ ಗಣನೀಯ ಹೆಚ್ಚಳ

Significant increase in auto LPG supply

ಬೆಂಗಳೂರು,ಏ.3– ಮಧ್ಯ ಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಎದುರಾಗಿದ್ದ ಅನಿಲ ಬಿಕ್ಕಟ್ಟಿನಿಂದಾಗಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಆಟೋ ಎಲ್‌‍ಪಿಜಿ ಪೂರೈಕೆಯನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ ಎಂದು ಇಂಡಿಯನ್‌ ಆಯಿಲ್‌ ಕಾರ್ಪೋ ರೇಷನ್‌ ಲಿಮಿಟೆಡ್‌ ತಿಳಿಸಿದೆ.

ರಾಜಧಾನಿ ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಹಲವಾರು ಖಾಸಗಿ ಆಟೋ ಎಲ್‌‍ಪಿಜಿ ಔಟ್‌‍ಲೆಟ್‌‍ಗಳಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿ ಭಾಗಶಃ ಸ್ಥಗಿತಗೊಂಡ ಬೆನ್ನಲ್ಲೇ, ಇದನ್ನು ಪರಿಹರಿಸಲು ಐಒಸಿಎಲ್‌ ಮುಂದಾಗಿದೆ.ಈ ಕುರಿತು ಚೆನ್ನೈನ ದಕ್ಷಿಣ ಪ್ರಾದೇಶಿಕ ಕಚೇರಿಯ ಇಂಡಿಯನ್‌ ಆಯಿಲ್‌‍ನ ಮುಖ್ಯ ಮಹಾಪ್ರಬಂಧಕ ವಿ.ವೆಟ್ರಿಸೆಲ್ವಕ್‌ಕುಮಾರ್‌ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯ ಪ್ರಕಾರ, ತನ್ನ ಮೂಲಸೌಕರ್ಯದ ಮೇಲೆ ಹೆಚ್ಚಿದ ಕಾರ್ಯಾಚರಣೆಯ ಹೊರೆಯ ಹೊರತಾಗಿಯೂ ಈ ಸವಾಲಿನ ಅವಧಿಯಲ್ಲಿ ಎಲ್‌ಪಿಜಿ ಚಾಲಿತ ವಾಹನಗಳಿಗೆ ನಿರಂತರ ಪೂರೈಕೆ ಮತ್ತು ದಕ್ಷ ಸೇವಾ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಇಂಡಿಯನ್‌ ಆಯಿಲ್‌ ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಕರ್ನಾಟಕದಲ್ಲಿ ಇಂಡಿಯನ್‌ ಆಯಿಲ್‌‍ನ ಎಲ್‌ ಪಿಜಿ ಸರಾಸರಿ ದೈನಂದಿನ ಮಾರಾಟವು 59.53 ಮೆಟ್ರಿಕ್‌ ಟನ್‌ಗಳಿಗೆ ತೀವ್ರವಾಗಿ ಏರಿದ್ದು, ಇದು ಹಿಂದಿನ 3 ತಿಂಗಳ ಸರಾಸರಿ 43.4 ಕ್ಕೆ ಹೋಲಿಸಿದರೆ ಗ್ರಾಹಕರ ಬೇಡಿಕೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಪ್ರತಿಬಿಂಬಿಸುವಂತಿದೆ.

ಅಲ್ಲದೆ, ಸರ್ಕಾರಿ ನಿರ್ದೇಶನಗಳನ್ನು ಪಾಲಿಸುತ್ತಾ ಮತ್ತು ಎಲ್ಲಾ ವಲಯಗಳಲ್ಲಿ ಸಮಾನ ವಿತರಣೆಯನ್ನು ಕಾಯ್ದುಕೊಳ್ಳುವಾಗ, ಸುಗಮ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಇಂಡಿಯನ್‌ ಆಯಿಲ್‌ ತನ್ನ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿರುವ 55 ಇಂಡಿಯನ್‌ ಆಯಿಲ್‌ ಆಟೋ ಎಲ್‌‍ಪಿಜಿ ವಿತರಣಾ ಕೇಂದ್ರಗಳಿದೆ. 300 ಖಾಸಗಿ ಕೇಂದ್ರಗಳು ಮುಚ್ಚಲ್ಪಟ್ಟಿವೆ ಅಥವಾ ಭಾಗಶಃ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ.

ಖಾಸಗಿ ಕೇಂದ್ರಗಳು ತಾತ್ಕಾಲಿಕ ಸ್ಥಗಿತ ಆಗಿರುವ ಕಾರಣ ಸರ್ಕಾರಿ ಸ್ವಾಮ್ಯದ ಬಂಕ್‌ನತ್ತ ಆಟೋಗಳು ಮುಖ ಮಾಡುತ್ತಿವೆ. ಕರ್ನಾಟಕದ ಇಂಡಿಯನ್‌ ಆಯಿಲ್‌‍ನ ಆಟೋ ಎಲ್‌‍ಪಿಜಿ ಕೇಂದ್ರದಲ್ಲಿ ದೈನಂದಿನ ಮಾರಾಟ ಮೂರು ತಿಂಗಳ ಸರಾಸರಿ 43.4 ಮೆಟ್ರಿಕ್‌ ಟನ್‌ ಇದ್ದರೆ ಈಗ ಇದು 59.53 ಮೆಟ್ರಿಕ್‌ ಟನ್‌ಗಳಿಗೆ ಏರಿಕೆಯಾಗಿದೆ. ಸವಾಲಿನ ಪರಿಸ್ಥಿತಿಯಲ್ಲಿಯೂ ಎಲ್‌‍ಪಿಜಿ ವಿತರಣೆಗೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಐಒಸಿ ಭರವಸೆ ನೀಡಿದೆ.

ಖಾಸಗಿ ಸಂಸ್ಥೆಗಳು ನಿರ್ವಹಿಸುವ 300 ಕ್ಕೂ ಹೆಚ್ಚು ಮಳಿಗೆಗಳು ಬಹುತೇಕ ಮುಚ್ಚಲ್ಪಟ್ಟಿದೆ, ಇಲ್ಲವೇ ಭಾಗಶಃ ಕಾರ್ಯ ನಿರ್ವಹಿಸುತ್ತಿವೆ ಎಂದು ವರದಿಯಾಗಿದ್ದು, ಈ ಬೆನ್ನಲ್ಲೇ, ಬೇಡಿಕೆಯ ಗಣನೀಯ ಭಾಗವು ಸಾರ್ವಜನಿಕ ವಲಯದ ಉದ್ಯಮ ಮಳಿಗೆಗಳಿಗೆ ಸ್ಥಳಾಂತರಗೊಂಡಿದೆ ಎಂದು ತಿಳಿದುಬಂದಿದೆ.

RELATED ARTICLES

Latest News