Tuesday, April 21, 2026
Homeಜಿಲ್ಲಾ ಸುದ್ದಿಗಳುಮೋಟಾರ್‌ ವಾಹನ ಸೆಸ್‌‍ ಜಾರಿ ನಿರ್ಧಾರ ಕೈಬಿಟ್ಟ ಮೈಸೂರು ಮಹಾನಗರಪಾಲಿಕೆ

ಮೋಟಾರ್‌ ವಾಹನ ಸೆಸ್‌‍ ಜಾರಿ ನಿರ್ಧಾರ ಕೈಬಿಟ್ಟ ಮೈಸೂರು ಮಹಾನಗರಪಾಲಿಕೆ

Mysore Metropolitan Corporation drops decision to implement motor vehicle cess

ಮೈಸೂರು,ಏ.4- ಮೈಸೂರು ಮಹಾನಗರಪಾಲಿಕೆ 2026-27ನೇ ಹಣಕಾಸು ವರ್ಷಕ್ಕೆ ಜಾರಿಗೊಳಿಸಲು ಘೋಷಿಸಿದ್ದ ಮೋಟಾರ್‌ ವಾಹನ ಸೆಸ್‌‍ ಅನ್ನು ರದ್ದುಗೊಳಿಸಿದೆ. ಇತ್ತೀಚಿಗೆ ಮೈಸೂರು ಮಹಾನಗರಪಾಲಿಕೆಯು ಆಸ್ತಿ ತೆರಿಗೆಯಲ್ಲಿ ಶೇ. 3 ರಷ್ಟು ಹೆಚ್ಚಳ ಮಾಡುವುದರ ಜೊತೆಗೆ, ನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳ ಜೊತೆ ವಾಹನಗಳಿಗೆ ಸೆಸ್‌‍ ವಿಧಿಸುವುದಾಗಿ ಪ್ರಕಟಿಸಿತ್ತು.

ಈ ಪ್ರಕಾರ ಎರಡು ಚಕ್ರದ ವಾಹನಗಳಿಗೆ 100 ರೂ., ಮೂರು ಚಕ್ರದ ವಾಹನಗಳಿಗೆ 200 ರೂ.ಮತ್ತು ನಾಲ್ಕು ಚಕ್ರದ ವಾಹನಗಳಿಗೆ 500 ರೂ. ಸೆಸ್‌‍ ವಿಧಿಸಲು ಯೋಜಿಸಲಾಗಿತ್ತು.

ಈ ಸೆಸ್‌‍ ಅನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡುವ ಉದ್ದೇಶವಿತ್ತು. ಆದರೆ, ಈ ನಿರ್ಧಾರಕ್ಕೆ ವ್‌ಯಾಪಕ ವಿರೋಧ ವ್ಯಕ್ತವಾಗಿದ್ದ ಕಾರಣ ಮಹಾನಗರಪಾಲಿಕೆ ಈಗ ಸೆಸ್‌‍ ವಿಧಿಸುವ ನಿರ್ಧಾರವನ್ನು ಕೈಬಿಟ್ಟಿದೆ ಎಂದು ಪಾಲಿಕೆ ಆಯುಕ್ತ ಶೇಖ್‌ ತನ್ವೀರ್‌ ಆಸೀಫ್‌ ತಿಳಿಸಿದ್ದಾರೆ.

RELATED ARTICLES

Latest News