Thursday, April 16, 2026
Homeರಾಷ್ಟ್ರೀಯವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ : ಅಣ್ಣಾಮಲೈ ಸ್ಪಷ್ಟನೆ

ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ : ಅಣ್ಣಾಮಲೈ ಸ್ಪಷ್ಟನೆ

K Annamalai clarifies he chose not to contest Tamil Nadu Assembly election

ಚೆನ್ನೈ,ಏ.4- ತಾವು ಈ ಬಾರಿ ತಮಿಳುನಾಡಿನ ವಿಧಾನಸಭಾ ಚುನಾವಣೆಯ ಸ್ಪರ್ಧೆಯಲ್ಲಿ ಇಲ್ಲ. ಇದರ ಬಗ್ಗೆ ಅನಗತ್ಯವಾಗಿ ಗೊಂದಲಗಳು ಬೇಡ ಎಂದು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ, ನಾನು ಸ್ಪರ್ಧೆಯಲ್ಲಿ ಅಥವಾ ಪಟ್ಟಿಯಲ್ಲಿಲ್ಲ. ಈ ಚುನಾವಣೆಯಲ್ಲಿ ನನ್ನ ಪಾತ್ರ ತಮಿಳುನಾಡಿನಾದ್ಯಂತ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು. ಇದೀಗ ಪಕ್ಷವು ಪುದುಚೇರಿ ಮತ್ತು ಕೇರಳದಲ್ಲಿ ಏಪ್ರಿಲ್‌ 7 ರವರೆಗೆ ಮತ್ತು ಅಂದಿನಿಂದ ಏಪ್ರಿಲ್‌ 23ರವರೆಗೆ ತಮಿಳುನಾಡಿನಲ್ಲಿ ಪ್ರಚಾರ ಮಾಡುವ ಜವಾಬ್ದಾರಿಯನ್ನು ನೀಡಿದೆ. ನಾನು ಆ ಜವಾಬ್ದಾರಿಯನ್ನು ಪೂರೈಸುತ್ತೇನೆ ಎಂದು ಹೇಳಿದರು.

ಹೈಕಮಾಂಡ್‌ಗೆ ಅನುಮೋದನೆಗಾಗಿ ಕಳುಹಿಸಲಾದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿಯೂ ನನ್ನ ಹೆಸರು ಇರಲಿಲ್ಲ. ನನಗೆ ಟಿಕೆಟ್‌ ನಿರಾಕರಿಸಲಾಗಿದೆ ಎಂದಲ್ಲ. ಸತ್ಯವೆಂದರೆ ನಾನು ಸ್ಪರ್ಧಿಸದಿರಲು ನಿರ್ಧರಿಸಿದ್ದೆ. ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಕೋರ್‌ ಸಮಿತಿಗೆ ಈಗಾಗಲೇ ಲಿಖಿತವಾಗಿ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ತಮಿಳುನಾಡು ಬಿಜೆಪಿ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರಿಗೂ ಅವರು ತಮ ನಿರ್ಧಾರವನ್ನು ತಿಳಿಸಿದ್ದರು. ಅಲ್ಲದೆ, ಅವರು ಇದನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಮತ್ತು ಬಿಜೆಪಿ ಮುಖ್ಯಸ್ಥ ನಿತಿನ್‌ ನಬಿನ್‌ ಅವರಿಗೆ ತಿಳಿಸಿದ್ದರು ಎಂದು ಅಣ್ಣಾಮಲೈ ಹೇಳಿದರು.

ತಮ ನಿರ್ಧಾರವನ್ನು ಗೌರವಿಸಿದ್ದಕ್ಕಾಗಿ ಮತ್ತು ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿ ಪ್ರಚಾರ ಮಾಡಲು ಅವಕಾಶ ನೀಡಿದ್ದಕ್ಕಾಗಿ ಬಿಜೆಪಿ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಅಣ್ಣಾಮಲೈ ತಿಳಿಸಿದರು. ಮೋದಿ ಅವರೊಂದಿಗಿನ ಭೇಟಿಯ ಕುರಿತು ಮಾತನಾಡಿದ ಅವರು, ಚುನಾವಣೆಯ ಸಮಯದಲ್ಲಿ ಇದು ಸಾಮಾನ್ಯ ಚರ್ಚೆಯಾಗಲಿದೆ. ಪ್ರಧಾನಿಯೊಂದಿಗೆ ಸಂವಹನ ನಡೆಸಲು ಇದನ್ನು ಒಂದು ಅವಕಾಶವೆಂದು ನಾನು ನೋಡುತ್ತೇನೆ ಎಂದು ಹೇಳಿದರು.

ಇದಕ್ಕೂ ಮೊದಲು, ಉತ್ತರ ಕೇರಳದಲ್ಲಿ ತಮ ಪ್ರಚಾರದ ಮಧ್ಯೆ, ಅಣ್ಣಾಮಲೈ ಎಕ್‌್ಸನಲ್ಲಿ ಮಾಡಿದ್ದ ಪೋಸ್ಟ್‌ನಲ್ಲಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 210 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ, ನಾನು ಕಾರ್ಯಕರ್ತರಾಗಿ ನಮ ಎಲ್ಲಾ ಗೆಲ್ಲುವ ಬಿಜೆಪಿ ಮತ್ತು ಇತರ ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಹೆಗಲಿಗೆ ಹೆಗಲು ಕೊಟ್ಟು ಪ್ರಚಾರ ಮಾಡುತ್ತೇನೆ ಎಂದು ಗೊಂದಲಗಳಿಗೆ ತೆರೆಎಳೆಯುವ ಪ್ರಯತ್ನ ಮಾಡಿದ್ದರು.

RELATED ARTICLES

Latest News