Thursday, April 16, 2026
Homeರಾಷ್ಟ್ರೀಯಟಿಸಿಎಸ್‌‍ ಕಾರ್ಪೋರೇಟ್‌ ಜಿಹಾದ್‌ ಪ್ರಕರಣಕ್ಕೆ ಮಲೇಷ್ಯಾ ಲಿಂಕ್‌

ಟಿಸಿಎಸ್‌‍ ಕಾರ್ಪೋರೇಟ್‌ ಜಿಹಾದ್‌ ಪ್ರಕರಣಕ್ಕೆ ಮಲೇಷ್ಯಾ ಲಿಂಕ್‌

Malaysia linked to TCS corporate jihad case

ಮುಂಬೈ, ಏ.16- ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌‍ ಸಂಸ್ಥೆಯಲ್ಲಿ ನಡೆದ ಕಾರ್ಪೋರೇಟ್‌ ಜಿಹಾದ್‌ ಪ್ರಕರಣದಲ್ಲಿ ಮಲೇಷ್ಯಾ ಲಿಂಕ್‌ ಇರುವುದು ಇದೀಗ ದೃಢಪಟ್ಟಿದೆ. ತನಿಖೆಯ ವೇಳೆ ಆರೋಪಿಗಳ ವಾಟ್ಸಪ್‌ ಚಾಟ್‌ಗಳನ್ನು ವಿಶೇಷ ತನಿಖಾ ತಂಡ ಪರಿಶೀಲಿಸಿದಾಗ ಮಲೇಷ್ಯಾ ಮೂಲದ ಇರ್ಮನ್‌ ಎಂಬಾತನ ಜೊತೆ ಅವರು ಅವರು ಸಂಪರ್ಕದಲ್ಲಿದ್ದ ವಿಚಾರ ಬೆಳಕಿಗೆ ಬಂದಿದೆ.

ಮಹಿಳಾ ಉದ್ಯೋಗಿಗಳಿಗೆ ಮಲೇಷ್ಯಾದಲ್ಲಿ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ನಂಬಿಸಿ ಅವರ ಪಾಸ್‌‍ಪೋರ್ಟ್‌ ಮತ್ತು ಆಧಾರ್‌ ಕಾರ್ಡ್‌ಗಳನ್ನು ಪಡೆದುಕೊಳ್ಳಲಾಗಿತ್ತು ಎಂಬ ಗಂಭೀರ ಆರೋಪ ಈಗ ಕೇಳಿಬಂದಿದೆ.ತನಿಖೆ ವೇಳೆ ಇರ್ಮನ್‌ ಮಲೇಷ್ಯಾದಲ್ಲಿ ನೆಲೆಸಿರುವ ಒಬ್ಬ ಧಾರ್ಮಿಕ ಬೋಧಕ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.

ಈತ ಪ್ರಕರಣದ ಪ್ರಮುಖ ಆರೋಪಿಗಳ ಜೊತೆ ವಾಟ್ಸಪ್‌, ವಿಡಿಯೋ ಕಾಲ್‌ ಮೂಲಕ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಬಂಧಿತ ಆರೋಪಿಗಳಾದ ಡ್ಯಾನಿಶ್‌ ಶೇಖ್‌ ಮತ್ತು ಇತರರು ಈತನನ್ನು ಉದ್ಯೋಗಿಗಳಿಗೆ ವಿದೇಶಿ ಉದ್ಯೋಗದ ಮಾರ್ಗದರ್ಶಕ ಎಂಬಂತೆ ಪರಿಚಯಿಸುತ್ತಿದ್ದರು. ಈತನೊಂದಿಗೆ ನಡೆಸಿದ ವಾಟ್ಸಪ್‌ ಸಂಭಾಷಣೆಗಳನ್ನು ಎಸ್‌‍ಐಟಿ ವಶಪಡಿಸಿಕೊಂಡಿದೆ.

ಇರ್ಮನ್‌ ವಿಡಿಯೋ ಕಾಲ್‌ಗಳ ಮೂಲಕ ಮಹಿಳಾ ಉದ್ಯೋಗಿಗಳಿಗೆ ಮಲೇಷ್ಯಾದಲ್ಲಿ ಹೆಚ್ಚು ಸಂಬಳವಿರುವ ಕೆಲಸ ಮತ್ತು ಉತ್ತಮ ಜೀವನಶೈಲಿಯ ಆಮಿಷ ತೋರಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಅಲ್ಲದೆ ಮಹಿಳೆಯರ ಮೇಲೆ ಮಾನಸಿಕ ಒತ್ತಡ ಹೇರಿ ಧಾರ್ಮಿಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ.ಈತ ಕೇವಲ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದನೇ ಅಥವಾ ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ ಅಥವಾ ಸಂಘಟಿತ ಮತಾಂತರ ಜಾಲದ ಭಾಗವಾಗಿದ್ದನೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಹಗರಣವನ್ನು ಬಯಲಿಗೆಳೆಯಲು ಮಹಿಳಾ ಪೊಲೀಸರು ಸುಮಾರು 40 ದಿನಗಳ ಕಾಲ ಕಂಪನಿಯಲ್ಲಿ ಸ್ವಚ್ಛತಾ ಕಾರ್ಮಿಕರ ಸೋಗಿನಲ್ಲಿ ಗುಪ್ತಚರ ಕಾರ್ಯಾಚರಣೆ ನಡೆಸಿದ್ದರು.

RELATED ARTICLES

Latest News