Thursday, April 16, 2026
Homeಬೆಂಗಳೂರು35 ಲಕ್ಷ ವೌಲ್ಯದ 1026 ಬಂಡಲ್‌ ವಿದೇಶಿ ಸಿಗರೇಟ್‌ವಶ

35 ಲಕ್ಷ ವೌಲ್ಯದ 1026 ಬಂಡಲ್‌ ವಿದೇಶಿ ಸಿಗರೇಟ್‌ವಶ

1026 bundles of foreign cigarettes worth Rs 35 lakh seized

ಬೆಂಗಳೂರು, ಏ.16- ನಿಷೇಧಿತ ವಿದೇಶಿ ಕಂಪನಿಯ ಸಿಗರೇಟ್‌ಗಳನ್ನು ಸಂಗ್ರಹಿಸಿಟ್ಟು ಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ಮೌಲ್ಯದ 1026 ಬಂಡಲ್‌ ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ.

ಈ ಆರೋಪಿಗಳು ಗಾಂಧಿನಗರ 5ನೇ ಮುಖ್ಯ ರಸ್ತೆಯ ತ್ರಿಭುವನ್‌ ಕಟ್ಟದಲ್ಲಿರುವ ಅಂಗಡಿ ಮತ್ತು ಗೋದಾಮಿನಲ್ಲಿ ವಿದೇಶಿ ಕಂಪನಿಯ ನಿಷೇಧಿತ ಸಿಗರೇಟ್‌ಗಳನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಈ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಅಂಗಡಿ ಮತ್ತು ಗೋದಾಮು ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ದೆಹಲಿ ಮೂಲದ ವ್ಯಕ್ತಿಯು ವಿದೇಶಿ ಸಿಗರೇಟ್‌ಗಳನ್ನು ಸರಬರಾಜು ಮಾಡುತ್ತಿದ್ದುದ್ದಾಗಿ ಹೇಳಿದ್ದಾರೆ.

ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಈ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದುದ್ದಾಗಿ ಬಾಯ್ಬಿಟ್ಟಿ ದ್ದಾರೆ.ಆರೋಪಿಗಳಿಂದ 35 ಲಕ್ಷ ಮೌಲ್ಯದ 1026 ಬಂಡಲ್‌ ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ ಪೆಕ್ಟರ್‌ ಸತೀಶ್‌ ಕುಮಾರ್‌ ಹಾಗೂ ಸಿಬ್ಬಂದಿ ತಂಡ ಯಶಸ್ವಿ ಯಾಗಿದೆ.ಈ ಇಬ್ಬರಿಗೆ ವಿದೇಶಿ ಸಿಗರೇಟ್‌ಗಳನ್ನು ಸರಬರಾಜು ಮಾಡುತ್ತಿದ್ದ ದೆಹಲಿ ಮೂಲದ ವ್ಯಕ್ತಿಯ ಪತ್ತೆಕಾರ್ಯ ಮುಂದುವರೆದಿದೆ.

35 ಲಕ್ಷ ವೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳ ವಶ
ಬೆಂಗಳೂರು,ಏ.16-ಬಾಗಿಲ ಚಿಲಕ ತೆಗೆದು ಮನೆಯೊಳಗೆ ನುಗ್ಗಿ ಹಣ, ಆಭರಣ ದೋಚಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ತಿಲಕನಗರ ಠಾಣೆ ಪೊಲೀಸರು ಬಂಽಸಿ 35 ಲಕ್ಷ ವೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಜಯನಗರ 4ನೇ ಟಿ ಬ್ಲಾಕ್‌ ನಿವಾಸಿಯೊಬ್ಬರು ಮನೆಯ ಬಾಗಿಲ ಚಿಲಕ ಹಾಕಿಕೊಂಡು ದಿನಸಿ ತರಲು ಸಮೀಪದ ಅಂಗಡಿಗೆ ಹೋಗಿದ್ದಾರೆ.

ಕೆಲ ಸಮಯದ ಬಳಿಕ ನಿವಾಸಿಯ ತಂದೆ ಮನೆಗೆ ಬಂದಾಗ ಗೇಟ್‌ ಹಾಗೂ ಮನೆ ಬಾಗಿಲು ತೆರೆದಿರುವುದು ಗಮನಿಸಿ ಒಳಗೆ ಹೋಗಿ ನೋಡಿದಾಗ ಬೀರುವಿನಲ್ಲಿಟ್ಟಿದ್ದ 423 ಗ್ರಾಂ ಚಿನ್ನಾಭರಣ, 110 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 50 ಸಾವಿರ ಹಣ ಕಳುವಾಗಿರುವುದು ಕಂಡು ಬಂದಿದ್ದು, ತಕ್ಷಣ ಅವರು ತಿಲಕನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಖಚಿತ ಮಾಹಿತಿಗಳನ್ನು ಕಲೆಹಾಕಿ ಬಾಣಸವಾಡಿಯ ಹೋಟೇಲ್‌ವೊಂದರ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ ಗಿರಿನಗರ ಹಾಗೂ ಕೆಆರ್‌ಪುರ ಜ್ಯೂವೆಲರಿ ಅಂಗಡಿಗಳಲ್ಲಿ ಗಿರವಿ ಇಟ್ಟಿದ್ದ ಸ್ವಲ್ಪ ಪ್ರಮಾಣದ ಚಿನ್ನಾಭರಣ ,ಬೆಳ್ಳಿ ವಸ್ತುಗಳು ಹಾಗೂ ರಾಮಮೂರ್ತಿನಗರದ ಪಾರ್ಕ್‌ವೊಂದರ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟಿದ್ದ ಆಭರಣಗಳು ಸೇರಿದಂತೆ ಒಟ್ಟು 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿ ವಸ್ತುಗಳು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿ 0ಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ವಿಶ್ವನಾಥ್‌ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಇ- ಸಿಗರೇಟ್‌ ಮಾರಾಟ: 10 ಲಕ್ಷ ಮೌಲ್ಯದ ಮಾಲು ವಶ
ಬೆಂಗಳೂರು,ಏ.16-ಅಕ್ರಮವಾಗಿ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ತಲಘಟ್ಟಪುರ ಠಾಣೆ ಪೊಲೀಸರು 10 ಲಕ್ಷ ರೂ ವೌಲ್ಯದ ಮಾಲು ವಶ ಪಡಿಸಿಕೊಂಡಿದ್ದಾರೆ.ಠಾಣಾ ಸರಹದ್ದಿನಲ್ಲಿರುವ ಕಾಲೇಜೊಂದರ ಹಿಂಭಾಗದ ಖಾಲಿ ಜಾಗದಲ್ಲಿ ಇ-ಸಿಗರೇಟ್‌ಗಳನ್ನು ಕಾರಿನಲ್ಲಿ ತಂದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಅನ್ವಯ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಕೃತ್ಯಕ್ಕೆ ಬಳಸಿದ 1ಕಾರು,4 ಸಾವಿರ ನಗದು ಇಲಬಾರ್‌ ಕಂಪನಿಯ 420 ಇ-ಸಿಗರೇಟ್‌ಗಳು, ಇಲವರ್ಡ್‌ ಕಂಪನಿಯ 20 ಇ-ಸಿಗರೇಟ್‌ಗಳು, 1 ಮೋಬೈಲ್‌ ಇ-ಸಿಗರೇಟ್‌ನ ರೀಫಿಲ್ಲಿಂಗ್‌ನ 80 ಲಿಕ್ವಿಡ್‌ ಬಾಟೆಲ್‌ಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಒಟ್ಟು ಇವುಗಳ ಒಟ್ಟು ಮೌಲ್ಯ ಹತ್ತು ಲಕ್ಷ ರೂ. ಎಂದು ತಲಘಟ್ಟಪುರ ಪೊಲೀಸರು ತಿಳಿಸಿದ್ದಾರೆ. ನೈಋತ್ಯ ವಿಭಾಗದ ಉಪ ಪೊಲೀಸ್‌ ಆಯುಕ್ತರಾದ ಅನಿತಾ ಬಿ. ಹದ್ದಣ್ಣನವರ ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪ-ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ಗಿರೀಶ್‌ ಎಸ್‌.ಬಿ ರವರ ನೇತೃತ್ವದಲ್ಲಿ, ತಲಘಟ್ಟಪುರ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌್ಸಪೆಕ್ಟರ್‌ ಆರ್‌.ಎಸ್‌ ಚೌಧರಿ ಹಾಗೂ ಇತರೆ ಅಽಕಾರಿ ಮತ್ತು ಸಿಬ್ಬಂದಿಯವರು ಆರೋಪಿಯನ್ನು ಯಶಸ್ವಿಯಾಗಿದ್ದು, ತನಿಖೆ ಮುಂದು ವರೆದಿದೆ.

RELATED ARTICLES

Latest News