ಬೆಂಗಳೂರು,ಏ.4- ನಾಳೆ ನಡೆಯಲಿರುವ ಹೈವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್್ಸ ಮುಖಾಮುಖಿಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ನಮ ಮೆಟ್ರೋ ಗುಡ್ನ್ಯೂಸ್ ನೀಡಿದೆ.
ಮೆಟ್ರೋ ಸೇವೆಯನ್ನು ವಿಶೇಷವಾಗಿ ವಿಸ್ತರಿಸಿ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆ ರಾತ್ರಿ 11 ಗಂಟೆಯಿಂದ ಮುಂಜಾನೆ 2 ಗಂಟೆವರೆಗೆ ವಿಸ್ತರಣೆ ಮಾಡಿ ಪಂದ್ಯ ವೀಕ್ಷಣೆಗಾಗಿ ಹೋಗುವ ಅಭಿಮಾನಿಗಳಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ಐಪಿಎಲ್ ಪಂದ್ಯದ ಟಿಕೆಟ್ಗಳಲ್ಲಿ ನಮ ಮೆಟ್ರೋ ಕ್ಯೂಆರ್ ಕೋಡ್ ಮುದ್ರಣ ಮಾಡಿದ್ದು ಪ್ರಯಾಣಿಕರಿಗೆ ಸುಲಭವಾಗಿ ಮತ್ತು ಬೇಗನೇ ಪ್ರವೇಶ ಪಡೆಯಬಹುದು.ಇನ್ನೂ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ.
ದ್ವಿಚಕ್ರ ವಾಹನಗಳಿಗೆ 30 ರೂ.ಕಾರುಗಳಿಗೆ 60 ರೂ ಪಾರ್ಕಿಂಗ್ ಶುಲ್ಕ ಪಿಕ್್ಸ ಮಾಡಿದೆ. ಮೆಟ್ರೋ ರೈಲು ನಾಲ್ಕು ದಿಕ್ಕಿನಲ್ಲಿ ಮಧ್ಯ ರಾತ್ರಿ 2 ಗಂಟೆಯವರೆಗೆ ಸಾರ್ವಜನಿಕರ ಪ್ರಯಾಣಕ್ಕೆ ಸೌಲಭ್ಯ ಒದಗಿಸಿದೆ.
ಪಂದ್ಯಕ್ಕಾಗಿ ಮೆಟ್ರೋ ಪ್ರಯಾಣಿಕರಿಗೆ ದೊಡ್ಡ ಸೌಲಭ್ಯ ಕಲ್ಪಿಸಲಾಗಿದೆ. ಸ್ಟೇಡಿಯಂಗೆ ಹೋಗುವವರು ಟ್ರಾಫಿಕ್ ಟೆನ್ಷನ್ ಇಲ್ಲದೇ ಸುಲಭವಾಗಿ ಮೆಟ್ರೋ ಬಳಸಿ ಪಂದ್ಯ ವೀಕ್ಷಿಸಬಹುದು.
