ಬೆಂಗಳೂರು, ಏ.4- ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ಕಿಂಗ್‌್ಸ ತಂಡದ ವಿರುದ್ಧ ನಡೆದ 2026ರ ಐಪಿಎಲ್ ಪಂದ್ಯಾವಳಿಯ ಕ್ರಿಕೆಟ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಪಂಜಾಬ್‌ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ 24 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.
ಕಳೆದ ಋತುವಿನ ರನ್ನರ್‌ರಸ ಅಪ್ ಆಗಿರುವ ಪಂಜಾಬ್‌ಕಿಂಗ್‌್ಸ ನಿನ್ನೆ ನಡೆದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್‌ಕಿಂಗ್‌್ಸ ಅನ್ನು ಮಣಿಸಿ ಈ ಋತುವಿನ ಸತತ ಎರಡನೇ ಜಯ ದಾಖಲಿಸಿತು.
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಉಲ್ಲಂಘನೆ ಮಾಡಿದ ಕಾರಣ ಅಯ್ಯರ್ ಮತ್ತು ತಂಡಕ್ಕೆ ದಂಡ ವಿಧಿಸಲಾಗಿದ್ದು ಅಯ್ಯರ್ ಅವರ ದಂಡದ ಮೊತ್ತವನ್ನು 24 ಲಕ್ಷ ರೂ.ಗಳಿಗೇರಿಸಲಾಗಿದೆ ಎಂದು ಐಪಿಎಲ್ ಮೀಡಿಯಾ ಅಡ್ವೈಸರಿ ತಿಳಿಸಿದೆ.
ಇಂಪ್ಯಾಕ್ಟ್ ಆಟಗಾರ ಸೇರಿದಂತೆ ತಂಡಕ್ಕೆ ಆಡಿದ ಇತರ ಆಟಗಾರರಿಗೂ ತಲಾ ಆರು ಲಕ್ಷ ರೂ. ಅಥವಾ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗುವುದು ಎಂದು ಅದು ಹೇಳಿದೆ.
