Thursday, April 16, 2026
Homeರಾಷ್ಟ್ರೀಯಅತ್ತೆ-ಮಾವ ಬಯಸಿದರೆ ಸೊಸೆಯನ್ನು ಹೊರಹಾಕಬಹುದು : ದೆಹಲಿ ಹೈಕೋರ್ಟ್‌

ಅತ್ತೆ-ಮಾವ ಬಯಸಿದರೆ ಸೊಸೆಯನ್ನು ಹೊರಹಾಕಬಹುದು : ದೆಹಲಿ ಹೈಕೋರ್ಟ್‌

Domestic Violence | In -law's’ right to residence is not subordinate to that of daughter-in-law

ನವದೆಹಲಿ,ಏ.5- ಸೊಸೆಯಂದಿರು ತಮ ಅತ್ತೆ-ಮಾವಂದಿರನ್ನು ಮನೆಯಿಂದ ಹೊರಹಾಕುತ್ತಾರೆ ಎಂದು ಆಗಾಗ್ಗೆ ಕೇಳಿಬರುತ್ತಿದೆ. ವೃದ್ಧ ಅತ್ತೆ-ಮಾವಂದಿರು ಶಾಂತಿಯುತವಾಗಿ ಬದುಕಲು ಅರ್ಹರಾಗಿರುವುದರಿಂದ ಅವರು ಬಯಸಿದರೆ ಸೊಸೆಯನ್ನು ಮನೆಯಿಂದ ಹೊರಹಾಕಬಹುದು ಎಂದು ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ, ಸೊಸೆಗೆ ಜಂಟಿ ಕುಟುಂಬದ ಮನೆಯಲ್ಲಿ ವಾಸಿಸುವ ಹಕ್ಕಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ವೃದ್ಧ ಅತ್ತೆ-ಮಾವಂದಿರು ಶಾಂತಿಯುತವಾಗಿ ಬದುಕಲು ಅರ್ಹರಾಗಿರುವುದರಿಂದ ಅವರು ಬಯಸಿದರೆ ಸೊಸೆಯನ್ನು ಮನೆಯಿಂದ ಹೊರಹಾಕಬಹುದು ಎಂದಿದೆ.

ಹೈಕೋರ್ಟ್‌ ತೀರ್ಪು ಏನು?
ಸೊಸೆಯೊಬ್ಬರು ತನ್ನ ಅತ್ತೆ-ಮಾವನ ಮನೆಯಲ್ಲಿ ವಾಸಿಸುವ ಹಕ್ಕನ್ನು ನಿರಾಕರಿಸಿದ ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲನವಿ ಅರ್ಜಿ ವಿಚಾರಣೆಯಲ್ಲಿ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಯೋಗೇಶ್‌ ಖನ್ನಾ ಅವರು, ಅವಿಭಕ್ತ ಕುಟುಂಬದ ಸನ್ನಿವೇಶದಲ್ಲಿ, ಆಸ್ತಿ ಮಾಲೀಕರು ತಮ ಸೊಸೆಯನ್ನು ತಮ ಆಸ್ತಿಯಿಂದ ಹೊರಗಿರಿಸಲು ಹಕ್ಕು ಹೊಂದಿರುತ್ತಾರೆ ಎಂದು ಹೇಳಿದ್ದಾರೆ.

ಅತ್ತೆ-ಮಾವಂದಿರು ಕ್ರಮವಾಗಿ 74 ಮತ್ತು 69 ವರ್ಷ ವಯಸ್ಸಿನವರಾಗಿದ್ದು, ಅವರ ಮಗ ಮತ್ತು ಸೊಸೆಯ ನಡುವಿನ ವೈವಾಹಿಕ ಭಿನ್ನಾಭಿಪ್ರಾಯದಿಂದ ಪ್ರಭಾವಿತರಾಗದೆ ಶಾಂತಿಯುತವಾಗಿ ಬದುಕುವ ಹಕ್ಕನ್ನು ಹೊಂದಿದ್ದಾರೆ.

ಎರಡೂ ಪಕ್ಷಗಳ ನಡುವಿನ ಸಂಬಂಧವು ಹದಗೆಟ್ಟಿದೆ ಮತ್ತು ವಯಸ್ಸಾದ ಅತ್ತೆ-ಮಾವಂದಿರು ತಮ ಜೀವನದ ಈ ಹಂತದಲ್ಲಿ ಅರ್ಜಿದಾರಾಳದ ಸೊಸೆಯೊಂದಿಗೆ ವಾಸಿಸುವುದು ಸೂಕ್ತವಲ್ಲ . ವೃದ್ಧ ದಂಪತಿಗಳು ತಮ ಮನೆಯಲ್ಲಿಯೇ ಇರುತ್ತಾರೆ, ಆದರೆ ಮಗ ಮತ್ತು ಸೊಸೆ ಅನಾನುಕೂಲವಾಗಿದ್ದರೆ, ಅವರು ಬೇರೆಡೆ ವಾಸಿಸಲು ಆಯ್ಕೆ ಮಾಡಬಹುದು ಎಂದು ನ್ಯಾಯಾಧೀಶರು ಹೇಳಿದಾರೆ.

RELATED ARTICLES

Latest News