Homeಜಿಲ್ಲಾ ಸುದ್ದಿಗಳುಮೈಸೂರು : ಮಾನಸಿಕ ಖಿನ್ನತೆಯಿಂದ ಪೊಲೀಸ್‌‍ ಹೆಡ್‌ಕಾನ್‌ಸ್ಟೇಬಲ್‌ ಆತ್ಮಹತ್ಯೆ

ಮೈಸೂರು : ಮಾನಸಿಕ ಖಿನ್ನತೆಯಿಂದ ಪೊಲೀಸ್‌‍ ಹೆಡ್‌ಕಾನ್‌ಸ್ಟೇಬಲ್‌ ಆತ್ಮಹತ್ಯೆ

Mysore: Police head constable commits suicide due to mental depression

ಮೈಸೂರು, ಮೇ 5 -ಮಾನಸಿಕ ಖಿನ್ನತೆಯಿಂದ ದೇವರಾಜ ಪೊಲೀಸ್‌‍ ಠಾಣೆ ಮುಖ್ಯಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಪೊಲೀಸ್‌‍ ಲೇಔಟ್‌ನಲ್ಲಿ ನಡೆದಿದೆ.ಶ್ಯಾಂಪ್ರಸಾದ್‌ (46) ಮೃತ ದುರ್ದೈವಿ.

ಪೊಲೀಸ್‌‍ ಲೇಔಟ್‌ನಲ್ಲಿ ಸ್ವಂತ ಮನೆ ಹೊಂದಿರುವ ಶ್ಯಾಂಪ್ರಸಾದ್‌ ಅವರು ದೇವರಾಜ ಪೊಲೀಸ್‌‍ ಠಾಣೆಯಲ್ಲಿ ಕಳೆದ 5 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶ್ಯಾಂಪ್ರಸಾದ್‌ ಆತಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಬೆಳಿಗ್ಗೆ ಶುಭೋದಯ ಡ್ಯೂಟಿಗೆ ಶ್ಯಾಂಪ್ರಸಾದ್‌ ರವರನ್ನ ನಿಯೋಜಿಸಲಾಗಿತ್ತು. ಕರ್ತವ್ಯಕ್ಕೆ ಅವರು ಹಾಜರಾಗದ ಹಿನ್ನಲೆಯಲ್ಲಿ ಅವರ ಮನೆ ಬಳಿ ಹೋಗಿ ಪರಿಶೀಲನೆ ನಡೆಸಿದಾಗ ಆತಹತ್ಯೆಗೆ ಶರಣಾಗಿರುವ ಮಾಹಿತಿ ತಿಳಿದು ಬಂದಿದೆ.

ಸುದ್ದಿ ತಿಳಿದು ನಜರಬಾದ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಶ್ಯಾಂಪ್ರಸಾದ್‌ ಆತಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇವರು ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಹೇಳಲಾಗುತ್ತಿದೆ.

RELATED ARTICLES
spot_img

Latest News