Homeರಾಷ್ಟ್ರೀಯಏಪ್ರಿಲ್‌ ತಿಂಗಳಲ್ಲಿ ರಾಜ್ಯದಲ್ಲಿ ದಾಖಲೆಯ 11,428.98 ಕೋಟಿ ರೂ.ವಾಣಿಜ್ಯ ತೆರಿಗೆ ಸಂಗ್ರಹ

ಏಪ್ರಿಲ್‌ ತಿಂಗಳಲ್ಲಿ ರಾಜ್ಯದಲ್ಲಿ ದಾಖಲೆಯ 11,428.98 ಕೋಟಿ ರೂ.ವಾಣಿಜ್ಯ ತೆರಿಗೆ ಸಂಗ್ರಹ

Record Rs 11,428.98 crore commercial tax collection in the state in April

ಬೆಂಗಳೂರು, ಮೇ 6-ಪ್ರಸಕ್ತ ಆರ್ಥಿಕ ಸಾಲಿನ ಮೊದಲ ತಿಂಗಳಲ್ಲಿ ದಾಖಲೆ ಪ್ರಮಾಣದ ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ. ಕಳೆದ ಏಪ್ರಿಲ್‌ ತಿಂಗಳಲ್ಲಿ 11,428.98 ಕೋಟಿ ರೂ. ಸಂಗ್ರಹವಾಗಿದೆ.

ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ ಏಪ್ರಿಲ್‌ನಲ್ಲಿ 8,947.72 ಕೋಟಿ ರೂ. ಸರಕು ಸೇವಾ ತೆರಿಗೆ, 2,262.72 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 218.54 ಕೋಟಿ ರೂ. ವೃತ್ತಿ ತೆರಿಗೆ ಸೇರಿದಂತೆ ಒಟ್ಟು 11,428.98 ಕೋಟಿ ರೂ. ಸಂಗ್ರಹಿಸಲಾಗಿದೆ.

2025ರ ಏಪ್ರಿಲ್‌ನಲ್ಲಿ ಈ ಮೂರು ತೆರಿಗೆಗಳು ಸೇರಿ 8552.38 ಕೋಟಿ ರೂ. ಮಾತ್ರ ಸಂಗ್ರಹಿಸಲಾಗಿತ್ತು. ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಒಂದೇ ತಿಂಗಳಲ್ಲಿ 2,876.594 ಕೋಟಿ ರೂ. ಹೆಚ್ಚಿಗೆ ಸಂಗ್ರಹ ಮಾಡಲಾಗಿದೆ.

ಕಳೆದ ಆರ್ಥಿಕ ಸಾಲಿನ ಯಾವ ತಿಂಗಳಲ್ಲೂ ಈ ಪ್ರಮಾಣ ತೆರಿಗೆಯ ಸಂಗ್ರಹವಾಗಿರಲಿಲ್ಲ. ಕಳೆದ ಫೆಬ್ರವರಿಯಲ್ಲಿ 10,261.32 ಕೋಟಿ ರೂ. ಮತ್ತು ಮಾರ್ಚ್‌ನಲ್ಲಿ 10,322.40 ಕೋಟಿ ರೂ. ಸಂಗ್ರಹವಾಗಿತ್ತು. ಏಪ್ರಿಲ್‌ನಲ್ಲಿ ಅದಕ್ಕಿಂತಲೂ ಹೆಚ್ಚು ಸಂಗ್ರಹವಾಗಿದೆ. ಬಹುಶಃ ಇದು ಇದುವರೆಗಿನ ದಾಖಲೆ ಪ್ರಮಾಣದ ತೆರಿಗೆಯ ಸಂಗ್ರಹವಾದಂತಾಗಿದೆ.

2025-26 ಸಾಲಿನಲ್ಲಿ ಒಟ್ಟಾರೆ 1,10,813.30 ಕೋಟಿ ರೂ. ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿತ್ತು. 2026-207ನೇ ಆರ್ಥಿಕ ಸಾಲಿನ ಮೊದಲ ತಿಂಗಳಲ್ಲಿ ದಾಖಲಾರ್ಹ ಪ್ರಮಾಣದಲ್ಲಿ ತೆರಿಗೆಗಳ ಸಂಗ್ರಹವಾಗಿದ್ದು, ಇದೇ ರೀತಿ ಮುಂದುವರೆದರೆ, ಆರ್ಥಿಕ ವರ್ಷಾಂತ್ಯಕ್ಕೆ ಕಳೆದ ಸಾಲಿಗಿಂತಲೂ ಅಧಿಕ ಪ್ರಮಾಣದಲ್ಲಿ ತೆರಿಗೆಗಳ ಸಂಗ್ರಹವಾಗಲಿದೆ.

RELATED ARTICLES
spot_img

Latest News