ಬೆಂಗಳೂರು, ಏ.8- ಇರಾನ್ ಮತ್ತು ಅಮೆರಿಕಾ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಚಿನಿವಾರ ಪೇಟೆಯಲ್ಲಿ ಚೇತರಿಕೆ ಕಂಡುಬಂದಿದ್ದುಘಿ, ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಏರಿಕೆಯಾಗಿದೆ.
ಬೆಳ್ಳಿ ಒಂದು ಕೆ.ಜಿ.ಗೆ ಹತ್ತು ಸಾವಿರ ರೂ. ಏರಿಕೆಯಾಗಿದ್ದರೆ, 24 ಕ್ಯಾರೆಟ್ ಚಿನ್ನ ಗ್ರಾಂಗೆ 398 ರೂ. ಹೆಚ್ಚಳ ಕಂಡಿದೆ. ಹತ್ತು ಗ್ರಾಂಗೆ 3980 ರೂ. ನಷ್ಟು ಏರಿಕೆಯಾಗಿದೆ. ಅದೇ ರೀತಿ 22 ಕ್ಯಾರೆಟ್ ಚಿನ್ನ ಗ್ರಾಂಗೆ 365 ರೂ. ಹಾಗೂ 18 ಕ್ಯಾರೆಟ್ ಚಿನ್ನ 299 ರೂ. ನಷ್ಟು ಭಾರಿ ಏರಿಕೆಯಾಗಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಬೆಲೆ ಏರಿಕೆಯಿಂದಾಗಿ , 24 ಕ್ಯಾರೆಟ್ ಚಿನ್ನ ಗ್ರಾಂಗೆ 15,382 ರೂ. ಹೆಚ್ಚಳ ಕಂಡಿದೆ. 22 ಕ್ಯಾರೆಟ್ ಚಿನ್ನ ಗ್ರಾಂಗೆ 14,100 ರೂ. ಏರಿಕೆಯಾಗಿದೆ ಹಾಗೂ 18 ಕ್ಯಾರೆಟ್ ಚಿನ್ನ 11,537 ರೂ.ಗೆ ತಲುಪಿದೆ.
ಏಪ್ರಿಲ್ 3ರ ನಂತರ ಚಿನ್ನದ ದರಲ್ಲಿ ಏರಿಕೆಯಾಗಿರಲಿಲ್ಲ ಅನಂತರ ಎರಡು ದಿನಗಳ ಕಾಲ ಸ್ಥಿರವಾಗಿದ್ದ ಚಿನ್ನದ ದರವು ಕ್ರಮವಾಗಿ ಏ.6 ಮತ್ತು 7ರಂದು ಇಳಿಕೆಯಾಗಿತ್ತು. ನಿನ್ನೆ ಅಲ್ಪ ಪ್ರಮಾಣದ ಕುಸಿತ ಕಂಡಿತ್ತು. ಇಂದು ಮತ್ತೆ ಏರುಗತಿಯಲ್ಲಿ ಸಾಗಿದೆ.
ಕಳೆದ ಒಂದು ವಾರದಿಂದ ಸ್ಥಿರವಾಗಿದ್ದ ಬೆಳ್ಳಿ ದರದಲ್ಲಿ ದಿಢೀರ್ ಏರಿಕೆಯಾಗಿದೆ. ಒಂದು ಕೆ.ಜಿ.ಬೆಳ್ಳಿಗೆ 10 ಸಾವಿರ ರೂ.ನಷ್ಟು ಏರಿಕೆಯಾಗಿದ್ದು, 2.60 ಲಕ್ಷ ರೂ.ಗೆ ತಲುಪಿದೆ. ಮೇ.2ರಿಂದ ನಿನ್ನೆಯವರೆಗೆ ದರ ಸ್ಥಿರವಾಗಿತ್ತು. ಪ್ರತಿ ಕೆ.ಜಿ. ಬೆಳ್ಳಿ 2.50 ಲಕ್ಷ ರೂ.ನಷ್ಟು ಇತ್ತು. ಮತ್ತೆ ಚಿನ್ನ-ಬೆಳ್ಳಿ ದರಗಳು ಏರುಗತಿಯಲ್ಲಿ ಸಾಗುವ ಆತಂಕ ಗ್ರಾಹಕರು ಹಾಗೂ ಆಭರಣ ಪ್ರಿಯರಲ್ಲಿ ಕಂಡುಬಂದಿದೆ.
ಹೂಡಿಕೆದಾರರಿಗೆ ಬೆಲೆ ಏರಿಕೆ ಸಮಾಧಾನ ತಂದಿದೆ.ಇರಾನ್-ಇಸ್ರೇಲ್ ಹಾಗೂ ಅಮೆರಿಕಾ ನಡುವಿನ ಯುದ್ಧದ ಪರಿಣಾದಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರಿ ಇಳಿಕೆಯಾಗಿತ್ತು. ಅಲ್ಲದೆ, ಚಿನಿವಾರಪೇಟೆಯಲ್ಲಿ ಆಗಾಗ್ಗೆ ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತಿತ್ತು.
