Homeರಾಷ್ಟ್ರೀಯಬಸ್‌‍ ಓಡಿಸುಸುತ್ತಿರುವಾಗಲೇ ಹೃದಯಾಘಾತ ಚಾಲಕ ಸಾವು, ತಪ್ಪಿದ ಬಸ್ ದುರಂತ, ಪ್ರಯಾಣಿಕರು ಸೇಫ್

ಬಸ್‌‍ ಓಡಿಸುಸುತ್ತಿರುವಾಗಲೇ ಹೃದಯಾಘಾತ ಚಾಲಕ ಸಾವು, ತಪ್ಪಿದ ಬಸ್ ದುರಂತ, ಪ್ರಯಾಣಿಕರು ಸೇಫ್

Bus driver dies of heart attack while driving

ಮಡಿಕೇರಿ,ಮೇ 8- ಬಸ್‌‍ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ತಾಳತ್‌ ಮನೆ ಬಳಿಯ ರಾಷ್ಟ್ರೀಯ ಹೆದ್ದಾರಿ 272 ರಲ್ಲಿ ನಡೆದಿದೆ.

ಮಡಿಕೇರಿ-ಮಂಗಳೂರು ನಡುವೆ ಈ ದುರಂತ ನಡೆದಿದ್ದು, ಚಾಲಕನಿಗೆ ಹೃದಯಾಘಾತವಾದ ನಂತರ ಬಸ್ಸು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿ ಹೊಡೆದಿದೆಯಾದರೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಪೂರ್ಣಿಮಾ ಟ್ರಾವೆಲ್ಸ್ ನ ಬಸ್ಸು ಕಳೆದ ರಾತ್ರಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸ್ವಲ್ಪ ನಿಯಂತ್ರಣ ತಪ್ಪಿದ್ದರೂ ಪ್ರಪಾತಕ್ಕೆ ಬೀಳುತ್ತಿತ್ತು. ಆದರೆ ಚಾಲಕ ಸಾವಿನ ಮಧ್ಯದಲ್ಲೂ ಬಸ್ಸನ್ನು ಪಕ್ಕದ ದಿಬ್ಬಕ್ಕೆ ಡಿಕ್ಕಿ ಹೊಡೆದು ನಿಲ್ಲಿಸಿದ್ದಾನೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಿಗದಿತ ಸ್ಥಳಕ್ಕೆ ತೆರಳಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

RELATED ARTICLES

Latest News