Homeರಾಷ್ಟ್ರೀಯಜಾರ್ಖಂಡ್‌ : ಭೀಕರ ರಸ್ತೆ ಅಪಘಾತದಲ್ಲಿ ನೇಪಾಳ ಮೂಲದ ಮೂವರು ಕನ್ವಾರಿಯಾಗಳ ಸಾವು

ಜಾರ್ಖಂಡ್‌ : ಭೀಕರ ರಸ್ತೆ ಅಪಘಾತದಲ್ಲಿ ನೇಪಾಳ ಮೂಲದ ಮೂವರು ಕನ್ವಾರಿಯಾಗಳ ಸಾವು

Three Kanwariyas killed, one injured in Punjab road accident

ಕೋಡರ್ಮಾ(ಜಾರ್ಖಂಡ್‌),ಆ.14- ಜಾರ್ಖಂಡ್‌ನ ಕೋಡರ್ಮಾ ಜಿಲ್ಲೆಯಲ್ಲಿ ಇಂದು ಬೆಳಂಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ನೇಪಾಳ ಮೂಲದ ಮೂವರು ಕನ್ವಾರಿಯಾಗಳು (ಶಿವಭಕ್ತರು) ಸ್ಥಳದಲ್ಲೇ ಮೃತಪಟ್ಟಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ.

ಸತ್ಗವಾನ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯ ಪೋಖ್ರಾದಿಹ್‌ ಪ್ರದೇಶದಲ್ಲಿ ಬೆಳಿಗ್ಗೆ 4:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್‌‍ ರಸ್ತೆ ಬದಿ ನಿಂತಿದ್ದ ಮತ್ತೊಂದು ವಾಹನಕ್ಕೆ ಹಿಂದಿನಿಂದ ವೇಗವಾಗಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್‌‍ ಠಾಣಾ ಉಸ್ತುವಾರಿ ಬಬ್ಲು ಕುಮಾರ್‌ ಅವರ ಮಾಹಿತಿ ಪ್ರಕಾರ, ನೇಪಾಳದಿಂದ ಬಂದಿದ್ದ ಒಟ್ಟು 45 ಯಾತ್ರಾರ್ಥಿಗಳು ಜಾರ್ಖಂಡ್‌ನ ಪ್ರಸಿದ್ಧ ದೇವಘರ್‌ ಜಿಲ್ಲೆಯ ಬಾಬಾ ಬೈದ್ಯನಾಥ ಧಾಮದಲ್ಲಿ ಜಲ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದರು. ನಂತರ ಡುವ್ಕಾದ ಬಸುಕಿನಾಥ ಧಾಮಕ್ಕೂ ಭೇಟಿ ನೀಡಿ ತಮ ಧಾರ್ಮಿಕ ಯಾತ್ರೆಯನ್ನು ಮುಗಿಸಿ ಬಸ್‌‍ನಲ್ಲಿ ವಾಪಸ್‌‍ ನೇಪಾಳಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ದುರಂತ ಸಂಭವಿಸಿದೆ.

ಗಾಯಾಳುಗಳ ಚಿಕಿತ್ಸೆ :
ಅಪಘಾತದ ತೀವ್ರತೆಗೆ ಬಸ್‌‍ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಗೊಂಡ 10 ಜನರನ್ನು ಚಿಕಿತ್ಸೆಗಾಗಿ ಸಮೀಪದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಸ್ತುತ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ದೇಶಾದ್ಯಂತ ಕನ್ವಾರಿಯಾ ಯಾತ್ರೆಗಳು ಜೋರಾಗಿ ನಡೆಯುತ್ತಿದ್ದು, ಭಕ್ತರ ಸುರಕ್ಷತೆಗೆ ಸಂಚಾರ ದಟ್ಟಣೆ ಹಾಗೂ ವಾಹನ ಚಾಲನೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವನ್ನು ಈ ಘಟನೆ ಮತ್ತೊಮೆ ನೆನಪಿಸಿದೆ.

RELATED ARTICLES
spot_img

Latest News