Tuesday, April 14, 2026
Homeಮನರಂಜನೆಕರ್ಣ ಧಾರಾವಾಹಿಯ ನಟಿಗೆ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಫಲಿತಾಂಶ

ಕರ್ಣ ಧಾರಾವಾಹಿಯ ನಟಿಗೆ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಫಲಿತಾಂಶ

Karna TV actress scores 97% in PUC exam

ಬೆಂಗಳೂರು, ಏ.10- ಕರ್ಣ ಧಾರಾವಾಹಿಯಲ್ಲಿ ರಿಯಾ ಪಾತ್ರದಲ್ಲಿ ನಟಿಸುತ್ತಿರುವ ಅಂಕಿತಾ ಜಯರಾಮ್‌ ದ್ವಿತೀಯ ಪಿಯು ಪರೀಕ್ಷೆಯ ವಾಣಿಜ್ಯವಿಭಾಗದಲ್ಲಿ 579 (ಶೇ.97) ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಸ್ಟ್ಯಾಟಿಸ್ಟಿಕ್‌ ಹಾಗೂ ಕಂಪ್ಯೂಟರ್‌ ಸೈನ್ಸ್ ನಲ್ಲಿ 100ಕ್ಕೆ 100 ಅಂಕ ಪಡೆದಿದ್ದರೆ, ಬ್ಯುಸಿನೆಸ್‌‍ ಸ್ಟಡೀಸ್‌‍ನಲ್ಲಿ 98, ಅಕೌಂಟೆನ್ಸಿಯಲ್ಲಿ 96, ಇಂಗ್ಲೀಷ್‌ನಲ್ಲಿ 94 ಹಾಗೂ ಕನ್ನಡದಲ್ಲಿ 98 ಅಂಕ ಪಡೆದಿದ್ದಾರೆ.

ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ನಟಿಸಿದ್ದ ಅಂಕಿತಾ ಜಯರಾಮ್‌, ಶ್ರೀಮುರಳಿ ನಟನೆಯ ಭರಾಟೆ, ಪುನೀತ್‌ರಾಜ್‌ಕುಮಾರ್‌ ಅಭಿನಯದ ಯುವರತ್ನ , ದರ್ಶನ್‌ ನಟನೆಯ ಕ್ರಾಂತಿ, ಡಾಲಿ ಧನಂಜಯ್‌ರೊಂದಿಗೆ ರತ್ನನ್‌ಪ್ರಪಂಚ, ಶಿವರಾಜ್‌ಕುಮಾರ್‌ ನಟನೆಯ ವೇದ ಚಿತ್ರಗಳಲ್ಲಿ ನಟಿಸಿದ್ದಾರೆ.

2024ರಲ್ಲಿ ತೆರೆಕಂಡ ಕಾಗದ ಸಿನಿಮಾದ ನಾಯಕನಟಿಯಾಗಿ ನಟಿಸಿರುವ ಅಂಕಿತಾ ಜಯರಾಮ್‌ ಅವರು, ಶೋಕಿವಾಲ, ಸಾರಾ ವಜ್ರ ಸಿನಿಮಾಗಳಲ್ಲೂ ಗಮನ ಸೆಳೆಯುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಂಕಿತಾ ಜಯರಾಮ್‌ ಅವರ ಈ ಸಾಧನೆಯನ್ನು ಕರ್ಣ ತಂಡದ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

RELATED ARTICLES

Latest News