Thursday, May 14, 2026
Homeರಾಜ್ಯಭದ್ರಾ ಮೇಲ್ದಂಡೆ ಯೋಜನೆಗೆ ಡಿ.ಸುಧಾಕರ್‌ ಹೆಸರು : ಡಿಕೆಶಿ

ಭದ್ರಾ ಮೇಲ್ದಂಡೆ ಯೋಜನೆಗೆ ಡಿ.ಸುಧಾಕರ್‌ ಹೆಸರು : ಡಿಕೆಶಿ

Bhadra Upper River Project named after D. Sudhakar: DK Shivakumar

ಬೆಂಗಳೂರು, ಮೇ 10- ಭದ್ರಾ ಮೇಲ್ದಂಡೆ ಯೋಜನೆಗೆ ಡಿ.ಸುಧಾಕರ್‌ ಅವರ ಹೆಸರನ್ನು ನಾಮಕರಣ ಮಾಡಲು ಕ್ರಮ ಕೈಗೊಳ್ಳುವುದಾಗಿ ಜಲ ಸಂಪನೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ತಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ, ಸುಧಾಕರ್‌ ಅವರು ಅಪಾರ ಕಾಳಜಿವಹಿಸಿದ್ದರು. ಕೆಲಸ ಮುಗಿದ ಬಳಿಕ ಅದರ ಉದ್ಘಾಟನೆಗೆ ತೀವ್ರ ಆಸಕ್ತಿವಹಿಸಿದ್ದರು. ಆದರೆ ಚಿಕ್ಕ ವಯಸ್ಸಿನಲ್ಲೇ ಅಕಾಲಿಕ ನಿಧನಕ್ಕೀಡಾಗಿದ್ದಾರೆ ಎಂದು ವಿಷಾದಿಸಿದರು.

ತಮ ಆತೀಯ ಸ್ನೇಹಿತ ಹಾಗೂ ಸಂಪುಟದ ಸಹೋದ್ಯೋಗಿ. ಸುಧಾಕರ್‌ ಮಂಡಿ ನೋವಿನ ಶಸ್ತ್ರ ಚಿಕಿತ್ಸೆಗೊಳಗಾದ ಬಳಿಕ ಚೇತರಿಸಿಕೊಳ್ಳಲಿಲ್ಲ ಎಂದು ಹೇಳಿದರು.ಅವರ ಆರೋಗ್ಯ ಸುಧಾರಿಸಿ ಮೊದಲಿನಂತಾಗುತ್ತಾರೆಂದು ನಾವು ಬಹಳ ನಿರೀಕ್ಷೆ ಹೊಂದಿದ್ದೆವು. ಆದರೆ ಅದು ಈಡೇರಲಿಲ್ಲ. ನಮ ಜೊತೆ ಹೆಚ್ಚು ಒಡನಾಟ ಹೊಂದಿದ್ದರು. ಎಸ್‌‍.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೇ ಅವರಿಗೆ ಹಿರಿಯೂರು ಕ್ಷೇತ್ರದಿಂದ ಟಿಕೆಟ್‌ ಕೊಡಿಸಲು ತಾವು ಪ್ರಯತ್ನಿಸಿದ್ದಾಗಿ ಡಿ.ಕೆ.ಶಿವಕುಮಾರ್‌ ಹೇಳಿದರು.

2023ರಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರಿಗೆ ಯೋಜನೆ ಮತ್ತು ಮುಜರಾಯಿ ಖಾತೆಗಳನ್ನು ನೀಡಲು ನಿರ್ಧರಿಸಲಾಗಿತ್ತು. ನಂತರ ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಖಾತೆ ನೀಡಿ, ಸುಧಾಕರ್‌ ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಗಳ ಜವಾಬ್ದಾರಿ ನೀಡಿದ್ದಾಗಿ ತಿಳಿಸಿದರು.

ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಯಲ್ಲಿ 5 ದಿನದ ಉಸ್ತುವಾರಿಯನ್ನು ಡಿ.ಸುಧಾಕರ್‌ ನಿರ್ವಹಿಸಿದ್ದರು. ಮಳೆ ಬಂದು ಅವ್ಯವಸ್ಥೆಗಳಾದಾಗ ಅದನ್ನು ಸರಿಪಡಿಸಲು ಡಿ.ಸುಧಾಕರ್‌ ಮತ್ತು ಅವರ ಬೆಂಬಲಿಗರು ಶ್ರಮಪಟ್ಟಿದ್ದನ್ನು ಕಣ್ಣಾರೆ ಕಂಡಿದ್ದನ್ನು ಸರಿಸಿಕೊಂಡರು. ಜೈನ ಸಮುದಾಯಕ್ಕೆ ಸೇರಿದ್ದರೂ ಎಲ್ಲರನ್ನು ಒಳಗೊಳ್ಳುವ ಮೂಲಕ ಜನಪ್ರಿಯ ನಾಯಕರಾಗಿದ್ದರು ಎಂದು ವಿವರಿಸಿದರು.

RELATED ARTICLES

Latest News