ಇಸ್ಲಾಮಬಾದ್,ಏ.12- ಉಭಯ ರಾಷ್ಟ್ರಗಳು ತಮ ತಮ ಪಟ್ಟಿನಿಂದ ಹಿಂದೆ ಸರಿಯದ ಕಾರಣ ಇಡೀ ವಿಶ್ವವೇ ಚಾತಕ ಪಕ್ಷಿಯಂತೆ ಕಾತುರದಿಂದ ಎದುರು ನೋಡುತ್ತಿದ್ದ ಅಮೆರಿಕ- ಇರಾನ್ ನಡುವಿನ ಶಾಂತಿ ಮಾತುಕತೆ ಸಂಧಾನ ಮುರಿದು ಬಿದ್ದಿದೆ.
ಈ ದಿಢೀರ್ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷದ ವಾತಾವರಣ ಏರ್ಪಟ್ಟಿದ್ದು ಅಮೆರಿಕ ಇರಾನ್ ಮೇಲೆ ದಾಳಿಯನ್ನು ಮುಂದುವರಿಸುವ ಸಾಧ್ಯತೆಗಳು ನಿಚ್ಚಳವಾಗಿದೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿನಲ್ಲಿ 21 ಗಂಟೆಗೂ ಹೆಚ್ಚು ಕಾಲ ನಡೆದ ಸಂಧಾನ ಮಾತುಕತೆಯಲ್ಲಿ ಅಮೆರಿಕ ಮುಂದಿಟ್ಟ ಬೇಡಿಕೆಯನ್ನು ಒಪ್ಪಲಿಲ್ಲ. ಅಲ್ಲದೆ ಬಹುನಿರೀಕ್ಷಿತ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸಬೇಕು ಎಂಬ ದೊಡ್ಡಣ್ಣನ ಬೇಡಿಕೆಗೆ ಇರಾನ್ ಸೊಪ್ಪು ಹಾಕಲಿಲ್ಲ. ಇದರಿಂದ ಮಾತುಕತೆ ಮುರಿದು ಬಿದ್ದಿದೆ.
ಇರಾನ್ ಜೊತೆ ಒಪ್ಪಂದವಿಲ್ಲದೆಯೇ ವಾಷಿಂಗ್ಟನ್ಗೆ ಹಿಂತಿರುಗುವುದಾಗಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಇಂದು ಮುಂಜಾನೆ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.ಇಸ್ಲಾಮಾಬಾದ್ನಲ್ಲಿ ಸುಮಾರು 21 ಗಂಟೆಗಳ ಕಾಲ ಅಮೆರಿಕ ಮತ್ತು ಇರಾನ್ ಮಧ್ಯೆ ಸಂಧಾನದ ಮಾತುಕತೆ ನಡೆದಿದ್ದು, ಆದರೆ ವಿಫಲವಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಬರಿಗೈಯಲ್ಲಿ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್್ಸಹಿಂತಿರುಗಿದರು.
ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಬಾರದು ಎಂಬ ಅಮೆರಿಕದ ಷರತ್ತುಗಳನ್ನು ಇರಾನಿಯನ್ನರು ಒಪ್ಪಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಭಾನುವಾರ ಮುಂಜಾನೆ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ಶಾಂತಿ ಒಪ್ಪಂದವಿಲ್ಲದೆ ಕೊನೆಗೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಇರಾನ್ ಜೊತೆ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಎರಡೂ ಕಡೆಯವರಿಗೆ ಸ್ವೀಕಾರಾರ್ಹವಾದ ಫಲಿತಾಂಶ ಸಿಕ್ಕಿಲ್ಲ. ಆದ್ದರಿಂದ ನಾವು ವಾಷಿಂಗ್ಟನ್ಗೆ ಹಿಂತಿರುಗುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಲವು ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ವ್ಯಾನ್್ಸ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇರಾನ್ ನಮ ಪ್ರಸ್ತಾಪಗಳನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ನಾವು ಸಾಧ್ಯವಾದಷ್ಟು ಸ್ಪಷ್ಟವಾಗಿ ನಮ ನಿಲುವನ್ನು ತಿಳಿಸಿದ್ದೇವೆ. ಯಾವ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬಹುದು ಮತ್ತು ಯಾವುದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ಆದರೆ ಇರಾನ್ ನಮ ಷರತ್ತುಗಳನ್ನು ಒಪ್ಪಿಕೊಳ್ಳದಿರಲು ಆಯ್ಕೆ ಮಾಡಿಕೊಂಡಿದೆ ಎಂದು ಘೋಷಿಸಿದ್ದಾರೆ.
ಜೆಡಿ ವ್ಯಾನ್್ಸ ನಾವು ಉತ್ತಮ ನಂಬಿಕೆಯಿಂದ ಮಾತುಕತೆ ನಡೆಸಿದ್ದೇವೆ. ಇರಾನಿಯನ್ನರಿಗೆ ಸಾಧ್ಯವಾದಷ್ಟು ಉತ್ತಮ ಪ್ರಸ್ತಾಪ ನೀಡಿದ್ದೇವೆ. ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ ಎಂದಿದ್ದಾರೆ. ಜೊತೆಗೆ ಇದು ಅಮೆರಿಕ ಇರಾನ್ ಅಷ್ಟೇ ಅಲ್ಲ ಇಡೀ ಜಗತ್ತಿಗೆ ಹೆಚ್ಚು ಕೆಟ್ಟ ಸುದ್ದಿಯಾಗಿದೆ. ನಮ ಷರತ್ತುಗಳನ್ನು ಒಪ್ಪಿಕೊಂಡಿಲ್ಲ. ಡೊನಾಲ್ಡ್ ಟ್ರಂಪ್ ಅವರು, ನಾವು ಉತ್ತಮ ನಂಬಿಕೆಯಿಂದ ಬಂದು ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದ್ದರು. ದುರದೃಷ್ಟವಶಾತ್ ಯಾವುದೇ ಪ್ರಗತಿಯಾಗಲಿಲ್ಲ ಎಂದು ತಿಳಿಸಿದ್ದಾರೆ.
ಮಾತುಕತೆಯ ಫಲಿತಾಂಶ ಏನೇ ಇರಲಿ, ಅಮೆರಿಕ ಗೆದ್ದಿದೆ. ನಾವು ಆ ದೇಶವನ್ನು ಸಂಪೂರ್ಣವಾಗಿ ಸೋಲಿಸಿದ್ದೇವೆ. ಬಹುಶಃ ಅವರು ಒಪ್ಪಂದ ಮಾಡಿಕೊಳ್ಳಬಹುದು ಅಥವಾ ಮಾಡಿಕೊಳ್ಳದಿರಬಹುದು. ಅಮೆರಿಕದ ದೃಷ್ಟಿಕೋನದಿಂದ ನನಗೆ ಅದು ಮುಖ್ಯವಲ್ಲ. ಅಮೆರಿಕವು ಇರಾನ್ ಅನ್ನು ಮಿಲಿಟರಿಯಾಗಿ ಸೋಲಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇರಾನ್ನ ಮಿಲಿಟರಿ ಸಾಮರ್ಥ್ಯಗಳಿಗೆ ವ್ಯಾಪಕ ಹಾನಿಯಾಗಿದೆ. ಅದರ ನೌಕಾ ಮತ್ತು ವಾಯು ಸ್ವತ್ತುಗಳನ್ನು ತಟಸ್ಥಗೊಳಿಸಲಾಗಿದೆ. ನಾವು ಅವರ ನೌಕಾಪಡೆಯನ್ನು ಸೋಲಿಸಿದ್ದೇವೆ. ನಾವು ಅವರ ವಾಯುಪಡೆಯನ್ನು ಸೋಲಿಸಿದ್ದೇವೆ. ನಾವು ಅವರ ವಿಮಾನ ವಿರೋಧಿಗಳನ್ನು ಸೋಲಿಸಿದ್ದೇವೆ. ನಾವು ಅವರ ರಾಡಾರ್ ಅನ್ನು ಸೋಲಿಸಿದ್ದೇವೆ. ಅವರ ನಾಯಕರೆಲ್ಲರೂ ಸತ್ತಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದರು.
ಇರಾನ್ ಪರಮಾಣು :
ಇರಾನ್ ಪರಮಾಣು ಕಾರ್ಯಕ್ರಮವೇ ಈ ಚರ್ಚೆಯ ಮುಖ್ಯ ವಿಷಯವಾಗಿತ್ತು. ಅಮೆರಿಕ ಇರಾನ್ನಿಂದ ಸ್ಪಷ್ಟ ಮತ್ತು ಶಾಶ್ವತ ಬದ್ಧತೆಯನ್ನು ಬಯಸುತ್ತಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುವುದಿಲ್ಲ ಎಂಬ ದೃಢವಾದ ಇಚ್ಛಾಶಕ್ತಿ ತೋರಿಸಬೇಕು. ಇದು ಕೇವಲ ಈಗಲ್ಲ, ದೀರ್ಘಕಾಲದವರೆಗೆ ಇರಬೇಕು ಎಂದು ವ್ಯಾನ್ಸ್ ಹೇಳಿದರು.
ಅಮೆರಿಕ ಇರಾನ್ಗೆ ತನ್ನ ಅಂತಿಮ ಮತ್ತು ಅತ್ಯುತ್ತಮ ಕೊಡುಗೆಯನ್ನು ನೀಡಿದೆ ಎಂದು ವ್ಯಾನ್್ಸ ತಿಳಿಸಿದರು. ಇರಾನ್ ಅದನ್ನು ಒಪ್ಪಿಕೊಳ್ಳುತ್ತಾ ಎಂಬುದರ ಮೇಲೆ ನಿಂತಿದೆ. ಆದರೆ ಇನ್ನೂ ಸ್ವಲ್ಪ ಸಮಯ ನೀಡುವುದಾಗಿ ಅಮೆರಿಕ ಸೂಚಿಸಿದೆ.
ಸರಳ ಸಂಗತಿಯೆಂದರೆ, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹುಡುಕುವುದಿಲ್ಲ. ತ್ವರಿತವಾಗಿ ಪರಮಾಣು ಶಸ್ತ್ರಾಸ್ತ್ರ ಹೊಂದಲು ಅನುವು ಮಾಡಿಕೊಡುವ ಸಾಧನಗಳನ್ನು ಹುಡುಕುವುದಿಲ್ಲ ಎಂಬ ದೃಢವಾದ ಬದ್ಧತೆಯನ್ನು ನಾವು ಕಾಣಬೇಕಾಗಿದೆ. ಇದು ಯುನೈಟೆಡ್ ಸ್ಟೇಟ್್ಸಅಧ್ಯಕ್ಷರ ಪ್ರಮುಖ ಗುರಿಯಾಗಿದೆ. ಈ ಮಾತುಕತೆಗಳ ಮೂಲಕ ನಾವು ಅದನ್ನು ಸಾಧಿಸಲು ಪ್ರಯತ್ನಿಸಿದ್ದೇವೆ ಎಂದು ವ್ಯಾನ್್ಸ ವರದಿಗಾರರಿಗೆ ತಿಳಿಸಿದರು.
