Thursday, April 16, 2026
Homeರಾಷ್ಟ್ರೀಯಸಂಸತ್ ಅಧಿವೇಶನಕ್ಕೆ ಕಡ್ಡಯವಾಗಿ ಹಾಜರಾಗುವಂತೆ ಸಂಸದರಿಗೆ ಬಿಜೆಪಿ ವಿಪ್‌

ಸಂಸತ್ ಅಧಿವೇಶನಕ್ಕೆ ಕಡ್ಡಯವಾಗಿ ಹಾಜರಾಗುವಂತೆ ಸಂಸದರಿಗೆ ಬಿಜೆಪಿ ವಿಪ್‌

BJP whips MPs to make it mandatory to attend Parliament session

ನವದೆಹಲಿ,ಏ.12- ಗುರುವಾರದಿಂದ ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಸದನದಲ್ಲಿ ಸದಸ್ಯರು ಕಡ್ಡಯವಾಗಿ ಹಾಜರಿರಬೇಕು ಎಂದು ಬಿಜೆಪಿ ತನ್ನ ಎಲ್ಲಾ ಸಂಸದರಿಗೆ ಮೂರು ಸಾಲಿನ ವಿಪ್‌ ಜಾರಿ ಮಾಡಿದೆ.ತನ್ನ ಎಲ್ಲಾ ಸಂಸದರಿಗೆ ವಿಪ್‌ನಲ್ಲಿ ಬಿಜೆಪಿ, ಗುರುವಾರದಿಂದ ಶನಿವಾರದವರೆಗೆ, ಏ.16 ರಿಂದ 18 ರವರೆಗೆ, ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಬಿಜೆಪಿ ಸದಸ್ಯರಿಗೆ ಮೂರು ಸಾಲಿನ ವಿಪ್‌ ನೀಡಲಾಗುತ್ತಿದೆ ಎಂದು ಹೇಳಿದೆ.

ಎಲ್ಲಾ ಗೌರವಾನ್ವಿತ ಕೇಂದ್ರ ಸಚಿವರು ಮತ್ತು ಸದಸ್ಯರು ಮೇಲೆ ತಿಳಿಸಿದ ಮೂರು ದಿನಾಂಕಗಳಲ್ಲಿ ಸದನದಲ್ಲಿ ಹಾಜರಿರಬೇಕು. ಸದನದಲ್ಲಿ ಹಾಜರಿರುವುದು ಕಡ್ಡಾಯ. ಯಾವುದೇ ರಜೆ ನೀಡಲಾಗುವುದಿಲ್ಲ. ಸದಸ್ಯರು ವಿಪ್‌ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಸದನದಲ್ಲಿ ಅವರ ನಿರಂತರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಏಪ್ರಿಲ್‌ 16 ರಿಂದ 18 ರವರೆಗೆ ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆದಿದೆ. ಈ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಗಳನ್ನು ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಲಾಗುವುದು.

2029 ರ ಸಂಸತ್‌ ಚುನಾವಣೆಗೆ ಮುನ್ನ ಮಹಿಳಾ ಕೋಟಾವನ್ನು ಜಾರಿಗೆ ತರಲು ಮತ್ತು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 816 ಕ್ಕೆ ಹೆಚ್ಚಿಸಲು ಮತ್ತು 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಪ್ರಯತ್ನಿಸುವ ಕರಡು ಮಸೂದೆಗಳನ್ನು ಕೇಂದ್ರ ಸಚಿವ ಸಂಪುಟ ಬುಧವಾರ (ಏಪ್ರಿಲ್‌ 8) ಅಂಗೀಕರಿಸಿದೆ ಎಂದು ತಿಳಿದುಬಂದಿದೆ.

RELATED ARTICLES

Latest News