Thursday, April 16, 2026
Homeಬೆಂಗಳೂರುತನ್ನಿಂದ ದೂರವಾದ ಹುಡುಗಿಗೆ ಕೊನೆಯ ವಿಡಿಯೋ ಕಾಲ್ ಮಾಡಿ ಪ್ರಿಯಕರ ಆತ್ಮಹತ್ಯೆ

ತನ್ನಿಂದ ದೂರವಾದ ಹುಡುಗಿಗೆ ಕೊನೆಯ ವಿಡಿಯೋ ಕಾಲ್ ಮಾಡಿ ಪ್ರಿಯಕರ ಆತ್ಮಹತ್ಯೆ

Boyfriend commits suicide after making last video call to girl who had distanced himself

ಬೆಂಗಳೂರು,ಏ.12- ಪ್ರೀತಿಸುತ್ತಿದ್ದ ಹುಡುಗಿ ನನ್ನಿಂದ ದೂರವಾಗುತ್ತಿದ್ದಾಳೆ ಎಂದು ಯುವಕನೊಬ್ಬ ಆಕೆಗೆ ವಿಡಿಯೋ ಕಾಲ್‌ ಮಾಡಿ ನಂತರ ಆತಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ನ್ಯೂ ಟೌನ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿಕಾಂ ಪದವೀದರ ಅಭಿಷೇಕ್‌(23) ಆತಹತ್ಯೆ ಮಾಡಿಕೊಂಡ ಯುವಕ. ಯಲಹಂಕ ನ್ಯೂಟೌನ್‌ನ ಅಟ್ಟೂರು ಲೇಔಟ್‌ನಲ್ಲಿ ವಾಸವಾಗಿದ್ದ ಈತ ಖಾಸಗಿ ಕಂಪನಿಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ.

ಅಭಿಷೇಕ್‌ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆಯ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.ನಂತರ ಪೊಲೀಸರು ಆತನನ್ನು ಠಾಣೆಗೆ ಕರೆಸಿ ಬುದ್ಧಿ ಮಾತು ಹೇಳಿ ಆಕೆಯ ತಂಟೆಗೆ ಹೋಗದಂತೆ ಎಚ್ಚರಿಕೆ ಸಹ ನೀಡಿದ್ದರು.

ನಂತರ ಯುವತಿ ಅಭಿಷೇಕ್‌ನಿಂದ ದೂರಾಗಿ ಮಾತುಕತೆ ನಿಲ್ಲಿಸಿದ್ದಳು. ಇದರಿಂದ ನೊಂದ ಅಭಿಷೇಕ್‌ ಯುವತಿಗೆ ವಿಡಿಯೋ ಕಾಲ್‌ ಮಾಡಿ ತಾನು ಸಾಯುತ್ತಿರುವುದಾಗಿ ತಿಳಿಸಿದ್ದ. ನಂತರ ಮೆಸೇಜ್‌ ಸಹ ಮಾಡಿ, ಡೆತ್‌ನೋಟ್‌‍ ಬರೆದಿಟ್ಟು ಮನೆಯ ಕಿಟಕಿಯ ಗ್ರಿಲ್‌ಗೆ ವೈರ್‌ನಿಂದ ನೇಣು ಹಾಕಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ.

ಮನೆಯವರಿಗೆ ಗೊತ್ತಿಲ್ಲದೆ ಮದುವೆಯಾಗಿದ್ದಾಗಿ ಅಭಿಷೇಕ್‌ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ ಎಂದು ತಿಳಿದುಬಂದಿದೆ.ಈ ಬಗ್ಗೆ ಯಲಹಂಕ ನ್ಯೂಟೌನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News