Homeರಾಷ್ಟ್ರೀಯಚಿನ್ನ ಖರೀದಿಸಬೇಡಿ ಎಂಬ ಮೋದಿ ಹೇಳಿಕೆ ಬೆನ್ನಲ್ಲೇ ಬಂಗಾರದ ಬೆಲೆ ಕುಸಿತ

ಚಿನ್ನ ಖರೀದಿಸಬೇಡಿ ಎಂಬ ಮೋದಿ ಹೇಳಿಕೆ ಬೆನ್ನಲ್ಲೇ ಬಂಗಾರದ ಬೆಲೆ ಕುಸಿತ

Gold prices fall after Modi's statement not to buy gold

ಮುಂಬೈ, ಮೇ. 11- ದೇಶದ ಆರ್ಥಿಕ ಹಿತದೃಷ್ಟಿ ಯಿಂದ ಭಾರತೀಯರು ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂಬ ಪ್ರಧಾನಿ ಮೋದಿ ಹೇಳಿಕೆ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ.

ಮಲ್ಟಿ ಕಮಾಡಿಟಿ ಎಕ್‌್ಸಚೇಂಜ್‌ನಲ್ಲಿ ಚಿನ್ನದ ದರದಲ್ಲಿ ಗಣನೀಯ ಕುಸಿತ ಕಂಡುಬಂದಿದೆ.
ಬೆಳಗ್ಗೆ 9:40ರ ವೇಳೆಗೆ ಜೂನ್‌ ತಿಂಗಳ ಚಿನ್ನದ ಫ್ಯೂಚರ್‌ ಕಾಂಟ್ರಾಕ್ಟ್‌ 574 ರೂ. (38%) ರೂ. ಇಳಿಕೆಯಾಗಿದ್ದು, 1,53,669 ರೂ.ನಲ್ಲಿ ವ್ಯವಹಾರ ನಡೆಸುತ್ತಿದೆ.

ಆದರೆ ಬೆಳ್ಳಿಯ ದರ ಏರಿಕೆಯಾಗಿದೆ. ಜೂನ್‌ ಫ್ಯೂಚರ್‌ 698 ರೂ. (26%) ಏರಿಕೆಯಾಗಿದ್ದು 2,65,957 ರೂ.ನಲ್ಲಿ ವ್ಯವಹಾರ ನಡೆಸುತ್ತಿದೆ. ಈ ದರ ಇಂದು ಸಂಜೆ ಮಾರುಕಟ್ಟೆ ಕೊನೆಯಾಗುವ 3:30ರ ವೇಳೆಗೆ ಮತ್ತಷ್ಟು ಏರಿಳಿತವಾಗುವ ಸಾಧ್ಯತೆಯಿದೆ.ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತಿದೆ.

ಈ ಸವಾಲುಗಳನ್ನು ಎದುರಿಸಲು ಭಾರತೀಯರು ಸಿದ್ಧರಾಗಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.ಭಾರತವು ತನ್ನ ಹೆಚ್ಚಿನ ಚಿನ್ನದ ಅಗತ್ಯವನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುತ್ತದೆ.

ಇದರಿಂದ ದೇಶದ ಅಮೂಲ್ಯವಾದ ವಿದೇಶಿ ವಿನಿಮಯ ದೊಡ್ಡ ಪ್ರಮಾಣದಲ್ಲಿ ಹೊರಹೋಗುತ್ತಿದೆ. ಆಮದು ವೆಚ್ಚವನ್ನು ತಗ್ಗಿಸುವ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸು ಉದ್ದೇಶದಿಂದ ಮೋದಿ ಅವರು ಈ ಮಾತನ್ನು ಹೇಳಿದ್ದರು.

RELATED ARTICLES
spot_img

Latest News