Thursday, May 14, 2026
Homeರಾಷ್ಟ್ರೀಯರೂಪಾಯಿ ಮೌಲ್ಯ ಸರ್ವಕಾಲಿಕ ಕುಸಿತ

ರೂಪಾಯಿ ಮೌಲ್ಯ ಸರ್ವಕಾಲಿಕ ಕುಸಿತ

Rupee hits all-time low of 95.50 against dollar

ಮುಂಬೈ, ಮೇ 12 (ಪಿಟಿಐ): ಅಮೆರಿಕ ಅಧ್ಯಕ್ಷ ಟಂಪ್‌ ಯುದ್ಧ ವಿರಾಮ ಒಪ್ಪಂದವು ಸಂಕಷ್ಟದಲ್ಲಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮ ಇಂದು ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಅಮೆರಿಕ ಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಅಂತರಬ್ಯಾಂಕ್‌ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಡಾಲರ್‌ ಎದುರು 95.57 ಮಟ್ಟದಲ್ಲಿ ವಹಿವಾಟು ಆರಂಭಿಸಿ, ಬಳಿಕ ಮತ್ತಷ್ಟು ಕುಸಿದು ಸಾರ್ವಕಾಲಿಕ ಕನಿಷ್ಠವಾದ 95.63ಕ್ಕೆ ತಲುಪಿತು. ಇದು ಹಿಂದಿನ ಮುಕ್ತಾಯದ ಹೋಲಿಕೆಯಲ್ಲಿ 35 ಪೈಸೆ ಇಳಿಕೆಯಾಗಿದೆ. ಸೋಮವಾರ ರೂಪಾಯಿ ಮೌಲ್ಯ 79 ಪೈಸೆ ಕುಸಿದು ಡಾಲರ್‌ ಎದುರು 95.28 ಮಟ್ಟದಲ್ಲಿ ಮುಕ್ತಾಯಗೊಂಡಿತ್ತು.

ಇರಾನ್‌ ಜೊತೆಗಿನ 10 ವಾರಗಳ ಸಂಘರ್ಷ ಜಾಗತಿಕ ತೈಲ ಪೂರೈಕೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಹೆಚ್ಚಾಗಿದೆ. ವಿಶೇಷವಾಗಿ, ಅಮೆರಿಕ ಬೆಂಬಲಿತ ಶಾಂತಿ ಪ್ರಸ್ತಾವನೆಗೆ ತೆಹ್ರಾನ್‌ ನೀಡಿದ ಪ್ರತಿಕ್ರಿಯೆಯನ್ನು ಟ್ರಂಪ್‌ ಸಂಪೂರ್ಣ ಅಸ್ವೀಕಾರಾರ್ಹಎಂದು ತಿರಸ್ಕರಿಸಿದ ಬಳಿಕ ಮಾರುಕಟ್ಟೆಯಲ್ಲಿ ಆತಂಕ ಮತ್ತಷ್ಟು ತೀವ್ರಗೊಂಡಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್‌ ಇರಾನ್‌ ಜೊತೆಗಿನ ಯುದ್ಧ ವಿರಾಮ ಲೈಫ್‌ ಸಪೋರ್ಟ್‌ ಮೇಲಿರುವಂತಾಗಿದೆ ಎಂದು ಹೇಳಿದ ನಂತರ, ತೈಲ ಬೆಲೆಗಳು ಏಷ್ಯನ್‌ ವಹಿವಾಟಿನಲ್ಲಿ ಸ್ಥಿರವಾಗಿದ್ದರೂ ಹಿಂದಿನ ಅವಧಿಯಲ್ಲಿ ಸುಮಾರು 3 ಶೇಕಡಾ ಏರಿಕೆ ಕಂಡಿವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಆರು ಪ್ರಮುಖ ಕರೆನ್ಸಿಗಳ ವಿರುದ್ಧ ಅಮೆರಿಕ ಡಾಲರ್‌ ಬಲವನ್ನು ಅಳೆಯುವ ಡಾಲರ್‌ ಸೂಚ್ಯಂಕವು 0.19 ಶೇಕಡಾ ಏರಿಕೆ ಕಂಡು 98.14 ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಫ್ಯೂಚರ್ಸ್‌ ವಹಿವಾಟಿನಲ್ಲಿ 0.85 ಶೇಕಡಾ ಏರಿಕೆ ಕಂಡು ಪ್ರತಿ ಬ್ಯಾರೆಲ್‌ಗೆ 105.10 ಅಮೆರಿಕ ಡಾಲರ್‌ಗೆ ತಲುಪಿದೆ.ದೇಶೀಯ ಷೇರುಪೇಟೆಯಲ್ಲೂ ಕುಸಿತ ಕಂಡುಬಂದಿದ್ದು, ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್‌್ಸ 525.44 ಅಂಕ ಕುಸಿದು 75,489.84ಕ್ಕೆ ತಲುಪಿತು. ನಿಫ್ಟಿ 164.5 ಅಂಕ ಇಳಿದು 23,651.35 ಮಟ್ಟದಲ್ಲಿ ವಹಿವಾಟು ನಡೆಸಿತು.

ವಿದೇಶಿ ಸಂಸ್ಥಾನಿಕ ಹೂಡಿಕೆದಾರರು (ಎಫ್‌ಐಐಗಳು) ಸೋಮವಾರ ರೂ.8,437.56 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ದತ್ತಾಂಶ ತಿಳಿಸಿದೆ.

RELATED ARTICLES

Latest News