Wednesday, May 13, 2026
Homeರಾಷ್ಟ್ರೀಯ144 ಶಾಸಕರ ಬೆಂಬಲದಿಂದ ವಿಶ್ವಾಸಮತ ಗೆದ್ದ ವಿಜಯ್‌ : ಎಐಎಡಿಎಂಕೆ ಇಬ್ಬಾಗ, ಡಿಎಂಕೆ ಸಭಾತ್ಯಾಗ

144 ಶಾಸಕರ ಬೆಂಬಲದಿಂದ ವಿಶ್ವಾಸಮತ ಗೆದ್ದ ವಿಜಯ್‌ : ಎಐಎಡಿಎಂಕೆ ಇಬ್ಬಾಗ, ಡಿಎಂಕೆ ಸಭಾತ್ಯಾಗ

Vijay Wins Floor Test With 144 Votes, 24 AIADMK MLAs Vote For Him

ಚೆನ್ನೈ, ಮೇ 13 – ಮುಖ್ಯಮಂತ್ರಿ ಸಿ ಜೋಸೆಫ್‌ ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರವು ಇಂದು ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತದಲ್ಲಿ ಗೆದ್ದು ಬೀಗಿದ್ದಾರೆ. ಸರ್ಕಾರಕ್ಕೆ 144 ಮಂದಿ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಟಿವಿಕೆ, ಕಾಂಗ್ರೆಸ್‌‍, ಸಿಪಿಎಂ, ಸಿಪಿಐ, ಮುಸ್ಲಿಮ್‌ ಲೀಗ್‌, ವಿಸಿಕೆ ಜೊತೆ ಎಐಎಡಿಎಂಕೆಯ ಬಂಡಾಯ ಎದ್ದಿರುವ 27 ಶಾಸಕರು
ವಿಜಯ್‌ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.

ಬಹುಮತ ಸಾಬೀತು ಪಡಿಸುವ ವೇಳೆ ಡಿಎಂಕೆ ಮತ್ತು ಪಿಎಂಕೆ ಶಾಸಕರು ಸಭಾತ್ಯಾಗ ಮಾಡಿದರು. ಒಬ್ಬ ಬಿಜೆಪಿ ಶಾಸಕರು ಮತದಾನದಿಂದ ದೂರ ಉಳಿದರು. ಅದರೆ ಸದನದಲ್ಲಿದ್ದ 22 ಎಐಡಿಎಂಕೆ ಶಾಸಕರು ವಿಶ್ವಾಸಮತದ ವಿರುದ್ಧ ಮತ ಹಾಕಿದರು. ವಿಶ್ವಾಸಮತದ ಮೂಲಕ ಅವರು ತಮ ಸರ್ಕಾರಕ್ಕೆ ಅಗತ್ಯವಾದ ಬಹುಮತವನ್ನು ಸ್ಪಷ್ಟವಾಗಿ ಸಾಬೀತುಪಡಿಸಿದ್ದಾರೆ.

ವಿಧಾನಸಭೆಯಲ್ಲಿ ನಡೆದ ಈ ಮಹತ್ವದ ತಲೆ ಎಣಿಕೆ ಮತದಾನದ ಫಲಿತಾಂಶ, ವಿಜಯ್‌ ಅವರ ರಾಜಕೀಯ ಭವಿಷ್ಯಕ್ಕೂ, ಅವರ ಸರ್ಕಾರದ ಸ್ಥಿರತೆಗೂ ಬಹಳ ಮುಖ್ಯವಾದ ಹಂತವಾಗಿದೆ. ವಿಶ್ವಾಸ ಮತದ ಪ್ರಕ್ರಿಯೆಯಲ್ಲಿ ತಲೆ ಎಣಿಕೆ ಮೂಲಕ ಮತ ಎಣಿಕೆ ಮಾಡಿ ಫಲಿತಾಂಶವನ್ನು ವಿಧಾನಸಭೆಯ ಸ್ಪೀಕರ್‌ ಅಧಿಕೃತವಾಗಿ ಘೋಷಣೆ ಮಾಡಿದರು.

ಈ 144 ಶಾಸಕರಲ್ಲಿ ಟಿವಿಕೆ ಮೈತ್ರಿಕೂಟದ 118 ಶಾಸಕರು ಸೇರಿದ್ದಾರೆ. ಇವರ ಜೊತೆಗೆ ಎಐಎಡಿಎಂಕೆಯ 26 ಬಂಡಾಯ ಶಾಸಕರು ಕೂಡ ವಿಜಯ್‌ ಪರವಾಗಿ ಮತ ಚಲಾಯಿಸಿದ್ದಾರೆ. ಅಲ್ಲದೆ ಮನ್ನಾರ್‌ಗುಡಿಯ ಮೂಲದ ಎಎಂಎಂಕೆ ಪಕ್ಷದ 1 ಶಾಸಕರು ಕೂಡ ವಿಜಯ್‌ ಅವರಿಗೆ ಬೆಂಬಲ ನೀಡಿದ್ದಾರೆ. ಈ ಮೂರು ವಿಭಿನ್ನ ರಾಜಕೀಯ ಶಕ್ತಿಗಳ ಬೆಂಬಲದಿಂದ ವಿಜಯ್‌ ಅವರ ಸಂಖ್ಯಾಬಲ ಇನ್ನಷ್ಟು ಗಟ್ಟಿಯಾದಂತಾಗಿದೆ.

ಸದನ ಸಮಾವೇಶಗೊಂಡ ತಕ್ಷಣ, ಮುಖ್ಯಮಂತ್ರಿ ವಿಜಯ್‌ ವಿಶ್ವಾಸ ಮತ ನಿರ್ಣಯವನ್ನು ಮಂಡಿಸಿದರು ಮತ್ತು ಎಲ್ಲಾ ಪಕ್ಷಗಳಿಗೆ ಸೇರಿದ ಶಾಸಕರು ಈ ನಿರ್ಣಯದ ಕುರಿತು ಮಾತನಾಡಿದರು.

ವಿಭಾಗವಾರು ಮತದಾನ ನಡೆಸಿದ ನಂತರ, ಸ್ಪೀಕರ್‌ ಜೆಸಿಡಿ ಪ್ರಭಾಕರ್‌, ಮುಖ್ಯಮಂತ್ರಿ ವಿಧಾನಸಭೆಯ ವಿಶ್ವಾಸ ಮತ ಯಾಚನೆಗಾಗಿ ಮಂಡಿಸಿದ ನಿರ್ಣಯವು ಗೆದ್ದಿದೆ ಎಂದು ಘೋಷಿಸಿದರು. 144 ಶಾಸಕರು ಸರ್ಕಾರಕ್ಕೆ ಮತ ಚಲಾಯಿಸಿದರು, 22 ಶಾಸಕರು ವಿರೋಧಿಸಿದರು ಮತ್ತು ಪಿಎಂಕೆ ಮತ್ತು ಬಿಜೆಪಿ ಸೇರಿದಂತೆ ಐದು ಮಂದಿ ತಟಸ್ಥ ನಿಲುವು ತೆಗೆದುಕೊಂಡರು.

ಪ್ರಧಾನ ವಿರೋಧ ಪಕ್ಷ ಡಿಎಂಕೆ ನಿರ್ಣಯದ ಮೇಲೆ ಮತ ಚಲಾಯಿಸುವ ಮೊದಲು ಸದನದಿಂದ ಹೊರನಡೆದರು. ಎಎಂಎಂಕೆಯಿಂದ ಹೊರಹಾಕಲ್ಪಟ್ಟ ಶಾಸಕ ಎಸ್‌‍.ಕಾಮರಾಜ್‌ ಅವರು ಸರ್ಕಾರದ ಪರವಾಗಿ ಮತ ಚಲಾಯಿಸಿದವರಲ್ಲಿ ಸೇರಿದ್ದಾರೆ. ಒಂದೇ ಮತದ ಅಂತರದಿಂದ ಗೆದ್ದ ಒಬ್ಬ ಶಾಸಕನನ್ನು ಹೊರತುಪಡಿಸಿ ಮತ್ತು ಇಂದು ವಿಶ್ವಾಸ ಮತಯಾಚನೆಯಲ್ಲಿ ಭಾಗವಹಿಸದಂತೆ ಮದ್ರಾಸ್‌‍ ಹೈಕೋರ್ಟ್‌ ಅವರನ್ನು ನಿರ್ಬಂಧಿಸಿತ್ತು.

234 ಶಾಸಕರನ್ನು ಹೊಂದಿರುವ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಅಗತ್ಯವಿದೆ. ವಿಜಯ್‌ ತಿರುಚಿ ಪಶ್ಚಿಮ ಮತ್ತು ಪೆರಂಬೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಹಿನ್ನೆಲೆ ಅದನ್ನು ಒಂದು ಎಂದು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ತಿರುಪತ್ತೂರು ಟಿವಿಕೆ ಶಾಸಕ ಶ್ರೀನಿವಾಸ್‌‍ ಸೇತುಪತಿ ಅವರಿಗೆ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಭಾಗಿಯಾಗದಂತೆ ಮದ್ರಾಸ್‌‍ ಹೈಕೋರ್ಟ್‌ ಸೂಚನೆ ನೀಡಿರುವ ಹಿನ್ನೆಲೆ ವಿಧಾನಸಭೆಯ ಬಲ 232ಕ್ಕೆ ಇಳಿದಿದ್ದು, ಬಹುಮತಕ್ಕೆ 116 ಶಾಸಕರ ಬೆಂಬಲ ಅಗತ್ಯವಿತ್ತು.

ವಿಶ್ವಾಸಮತ ಗೆದ್ದ ನಂತರ ಮಾತನಾಡಿದ ಸಿಎಂ ವಿಜಯ್‌, ನಮ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಎಲ್ಲಾ ಶಾಸಕರಿಗೂ ಧನ್ಯವಾದ. ನಮದು ಮೈತ್ರಿಕೂಟ ಸರ್ಕಾರ. ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ನಾವು ಬದ್ಧ. ನಮ ಸರ್ಕಾರ ಯಾವಾಗಲೂ ಜನಪರವಾಗಿರುತ್ತದೆ. ನಮಗೆ ಯಾರ ಮೇಲೂ ದ್ವೇಷವಿಲ್ಲ, ದ್ವೇಷ ರಾಜಕಾರಣ ಮಾಡಲ್ಲ. ಮತ ಹಾಕಿದವರು, ಹಾಕದೇ ಇರುವವರು ಎಂಬ ಭೇದ-ಭಾವ ಮಾಡಲ್ಲ. ಪೆರಿಯಾರ್‌, ಕಾಮರಾಜ್‌, ಅಂಬೇಡ್ಕರ್‌ ತತ್ವದಡಿ ಕೆಲಸ ಮಾಡುತ್ತೇವೆ ಎಂದರು.

ಜಾತಿ, ಧರ್ಮ ಎಂದು ಪರಿಗಣಿಸದೆ ಜನರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ತಮಿಳುನಾಡು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದು ವಿಜಯ್‌ ಹೇಳಿದರು.

ಟಿವಿಕೆ ಸರ್ಕಾರದ ವಿರುದ್ಧ ಉದಯನಿಧಿ ಆಕ್ರೋಶ :
ವಿಶ್ವಾಸಮತ ಯಾಚನೆಗೂ ಮುನ್ನ ನಡೆದ ಚರ್ಚೆಯಲ್ಲಿ ಪ್ರತಿಪಕ್ಷ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ ಟಿವಿಕೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂದು, ವಿಶ್ವಾಸಮತ ಯಾಚನೆ ನಡೆಯುತ್ತಿದೆ. ರಾಜ್ಯದ ಎಲ್ಲಾ ಜನರು ಟಿವಿಕೆಗೆ ಮತ ಹಾಕಿಲ್ಲ. ಒಟ್ಟು 4.93 ಕೋಟಿ ಮತಗಳಲ್ಲಿ, ಕೇವಲ 1.72 ಕೋಟಿ ಜನರು ಟಿವಿಕೆಗೆ ಮತ ಹಾಕಿದ್ದಾರೆ. ಉಳಿದ ಶೇ 65 ಜನರು ಟಿವಿಕೆ ವಿರುದ್ಧ ಮತ ಹಾಕಿದ್ದಾರೆ. ಟಿವಿಕೆಗೆ ಮತ ಹಾಕಿದ ಜನರಿಗೂ ಈಗ ಜ್ಞಾನೋದಯವಾಗುತ್ತಿದೆ ಎಂದು ಹೇಳಿದರು.

RELATED ARTICLES

Latest News