Wednesday, May 13, 2026
Homeರಾಷ್ಟ್ರೀಯತೀವ್ರ ವಿರೋಧದ ಬೆನ್ನಲ್ಲೇ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಿಂದ ರಿಕಿ ರಾಧನ್‌ ತೆಗೆದು ಹಾಕಿದ ವಿಜಯ್

ತೀವ್ರ ವಿರೋಧದ ಬೆನ್ನಲ್ಲೇ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಿಂದ ರಿಕಿ ರಾಧನ್‌ ತೆಗೆದು ಹಾಕಿದ ವಿಜಯ್

TN govt revokes appointment of Vijay's astrologer as OSD amid criticism

ಚೆನ್ನೈ,ಮೇ13-ಸಾರ್ವಜನಿಕ ವಲಯ ಮತ್ತು ಮೈತ್ರಿ ಪಕ್ಷಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ಕಾರಣ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಜೋಸೆಫ್‌ ಅವರು ತಮ್ಮ ವಿಶೇಷ ಕರ್ತವ್ಯಾಧಿಕಾರಿ ರಿಕಿ ರಾಧನ್‌ ಪಂಡಿತ್‌ ವೆಟ್ರಿವೆಲ್‌ ಅವರನ್ನು ಹುದ್ದೆಯಿಂದ ತೆಗೆದು ಹಾಕಿದ್ದಾರೆ.

ವಿಜಯ್‌ ಅವರ ಜ್ಯೋತಿಷ್ಯಕಾರನಾಗಿದ್ದ ರಿಕಿ ರಾಧನ್‌ ಪಂಡಿತ್‌ ವೆಟ್ರಿವೆಲ್‌ ಅವರನ್ನು ನಿನ್ನೆಯಷ್ಟೇ ಒಎಸ್‌‍ಡಿಯಾಗಿ ನೇಮಕ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ ಟಿವಿಕೆಗೆ ಬೆಂಬಲ ನೀಡಿದ್ದ ಮೈತ್ರಿ ಪಕ್ಷಗಳೇ ಅಪಸ್ವರ ತೆಗೆದಿದ್ದವು. ಈ ಹಿನ್ನೆಲೆಯಲ್ಲಿ ವಿಜಯ್‌ ಅವರು ತಮ ಒಎಸ್‌‍ಡಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹುದ್ದೆಯಿಂದ ತೆಗೆದು ಹಾಕಿದ್ದಾರೆ.

RELATED ARTICLES

Latest News