Thursday, May 14, 2026
Homeರಾಜಕೀಯರಾಜಕಾರಣದಲ್ಲಿ ಪಾಪ್ಯುಲಾರಿಟಿ ಯಾರಿಗೂ ಶಾಶ್ವತವಲ್ಲ : ಕೆ.ಎನ್‌. ರಾಜಣ್ಣ

ರಾಜಕಾರಣದಲ್ಲಿ ಪಾಪ್ಯುಲಾರಿಟಿ ಯಾರಿಗೂ ಶಾಶ್ವತವಲ್ಲ : ಕೆ.ಎನ್‌. ರಾಜಣ್ಣ

Popularity is not permanent in politics: K.N. Rajanna

ಮಧುಗಿರಿ,ಮೇ 14-ಸಿಎಂ ಕುರ್ಚಿ ಅಲುಗಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದಾಗ ಹೇಳಿಕೆ ನೀಡಿದ್ದು, ನಮ್ಮ ಪಕ್ಷದ ಆಂತರಿಕ ವಿಚಾರ ಅವರಿಗೇಕೆ ಎಂದು ಮಾಜಿ ಸಚಿವ ಶಾಸಕ ಕೆ.ಎನ್‌. ರಾಜಣ್ಣ ತಿರುಗೇಟು ನೀಡಿದರು.

ಸಿಎಂ ಸಿದ್ದರಾಮಯ್ಯನವರು ತುಮಕೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಹಮಿಕೊಂಡಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಅಲುಗಾಡುತ್ತಿದೆಯೋ ಇಲ್ಲವೋ ಎಂಬುದು ಪಕ್ಷದ ಆಂತರಿಕ ವಿಚಾರ. ನಮ ಪಕ್ಷದ ವಿಚಾರ ಅವರಿಗೇಕೆ..? ಅವರಿಗೂ ಇದಕ್ಕೂ ಏನು ಸಂಬಂದ..?ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ಪಶ್ಚಿಮ ಬಂಗಾಳದಲ್ಲಿ ಅವರು ಚುನಾವಣೆ ಗೆದ್ದಿದ್ದು, ಆದರೂ ಜನಾದೇಶಕ್ಕೆ ತಲೆ ಬಾಗಲೇಬೇಕು ಎಂದರು.

ಈ ಹಿಂದೆ ದಿವಂಗತ ಪ್ರಧಾನಿ ಇಂದಿರಾಗಾಂಧಿಯವರ ಹೆಸರು ಹೇಳಿಕೊಂಡೇ 200 ಜನ ಎಂಪಿಗಳು ಗೆಲ್ಲುತ್ತಿದ್ದರು. ಅಂತವರೇ ಪರಿಸ್ಥಿತಿಯ ಒತ್ತಡಗಳಿಗೆ ಸಿಲುಕಿ ಸ್ವಯಂ ಸೋಲು ಅನುಭವಿಸಬೇಕಾಯಿತು. ರಾಜಕಾರಣದಲ್ಲಿ ಪಾಪ್ಯುಲಾರಿಟಿ ಯಾರಿಗೂ ಶಾಶ್ವತ ಅಲ್ಲ. ಆ್‌‍ ಕೋರ್ಸ್‌. ಇಂದಿರಾ ಗಾಂಧೀಯವರ ನಂತರ ಮಾಸ್‌‍ ಲೀಡರ್‌ ಯಾರಾದರೂ ಇದ್ದರೆ ಅದು ಮೋದಿನೇ. ಹಾಗೆಂದು ನಾನು ಮೋದಿಯವರನ್ನು ಹೊಗಳುತ್ತಿಲ್ಲ.ವಾಸ್ತವಾಂಶ ಹೇಳುತ್ತಿದ್ದೇನೆ. ರಾಜಕಾರಣದಲ್ಲಿ ಪಾಪ್ಯುಲಾರಿಟಿ ಯಾರಿಗೂ ಶಾಶ್ವತ ಅಲ್ಲ. ಇದನ್ನು ಮೊದಲು ಅವರು ಅರಿಯಬೇಕು ಎಂದು ತಿಳಿಸಿದರು.

ಪ್ರಧಾನಿ ಮೋದಿಯವರು ಬಂಗಾರ ಖರೀದಿಸಬೇಡಿ ಎಂದು ಹೇಳಿಕೆ ನೀಡಿರುವ ವಿಚಾರದ ಬಗ್ಗೆ ಮಾತನಾಡಿ ಅವರು, ಭೂಮಿಯ ಮೇಲಿಲ್ಲ ಆಕಾಶದಲ್ಲಿದ್ದು, ಆಕಾಶದಿಂದ ಮಾತನಾಡುವ ಗಾಳಿ ಮಾತುಗಳಿಗೆ ಅರ್ಥವಿಲ್ಲ. ಮೊದಲು ಅವರು ಆಕಾಶದಿಂದ ಕೆಳಗಿಳಿದು ನಂತರ ಮಾತನಾಡಲಿ ಎಂದರು.

ತಮಿಳು ನಾಡಿನ ನೂತನ ಸಿಎಂ ವಿಜಯ್‌ ರವರಿಗೆ ರಾಹುಲ್‌ ಗಾಂಧಿಯವರು ಅಭಿನಂದನೆ ಸಲ್ಲಿಸಿದ್ದು, ಅವರು ಅಭಿನಂದನೆ ಸಲ್ಲಿಸಿದರೆ ದೇಶದ ಎಲ್ಲ ಕಾಂಗ್ರೆಸ್‌‍ ನಾಯಕರು ಅಭಿನಂದನೆ ಸಲ್ಲಿಸಿದಂತೆ..ಆದರೆ ಅವರ(ವಿಜಯ್‌‍) ದಾರಿ ಮುಳ್ಳಿನೇಲಿನ ನಡಿಗೆಯಂತೆ…ಕೆಲ ಕಾರಣಗಳನ್ನು ನೀಡಿ 700 ಮದ್ಯದಂಗಡಿಗಳನ್ನು ಮುಚ್ಚುವ ತೀರ್ಮಾನ ಕೈಗೊಂಡಿದ್ದು, ರಾಜ್ಯಕ್ಕೆ ಆದಾಯ ತರುವ ದಾರಿಗಳನ್ನೆಲ್ಲ ಮುಂಚಿಕೊಂಡು ಹೋದರೆ ಫ್ರೆ ಬೇಸ್‌‍ ಗಳಿಗೆ ಹಣ ಹೊಂದಿಸುವ ದಾರಿ ಹೇಗೆ..? ಇದು ಅವರಿಗೆ ಅನುಭವದ ಕೊರತೆ ಇದೆ ಎಂಬುದನ್ನು ತೋರಿಸುತ್ತದೆ ಎಂದರು.

RELATED ARTICLES

Latest News