ನವದೆಹಲಿ,ಮೇ 14- ಕೇರಳಂ ಸಿಎಂ ಹುದ್ದೆಯ ರೇಸ್ನಲ್ಲಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಗಾಂಧಿ ಕುಟುಂಬದ ಆಪ್ತ ಕೆ.ಸಿ.ವೇಣುಗೋಪಾಲ್ಗೆ ಭಾರೀ ಮುಖಭಂಗವಾಗಿದೆ. ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ಗಾಂಧಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ವೇಣುಗೋಪಾಲ್ ಇನ್ನೇನು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ ಎಂದೇ ಹೇಳಲಾಗಿತ್ತು.
ಜೊತೆಗೆ ಕೇರಳಂನಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ಬಹುತೇಕ ಶಾಸಕರ ಬೆಂಬಲವೂ ಅವರಿಗೆ ಇತ್ತು ಎನ್ನಲಾಗಿದೆ. ಪಕ್ಷದ ಪ್ರಮುಖ ನೀತಿಗಳು ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಅವರನ್ನೇ ಮುಖ್ಯಮಂತ್ರಿ ಮಾಡಬಹುದು ಎಂದು ಬಹುತೇಕರು ಭಾವಿಸಿದ್ದರು.
ಆದರೆ ಕೇರಳಂನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಶಾಸಕರು ವೇಣುಗೋಪಾಲ್ ಬದಲಿಗೆ ವಿ.ಡಿ.ಸತೀಶನ್ರಿಗೆ ಬೆಂಬಲ ನೀಡಿದ್ದರು.ತಿರುವನಂತಾಪುರ ಸೇರಿದಂತೆ ಮತ್ತಿತರ ಕಡೆ ವೇಣುಗೋಪಾಲ್ ಬೆಂಬಲಿಗರು ಮತ್ತು ಶಾಸಕರಿಗೂ ಶಕ್ತಿ ಪ್ರದರ್ಶನ ನಡೆಸಿದರೂ ಸಿಎಂ ಹುದ್ದೆಗೆ ಏರುವಲ್ಲಿ ವಿಫಲರಾದರು. ಜನ ಬೆಂಬಲ ಸತೀಶನ್ ಪರವಾಗಿ ಇದ್ದ ಪರಿಣಾಮ ಸಹಜವಾಗಿ ಸಿಎಂ ಹುದ್ದೆ ಒಲಿದು ಬಂದಿತು.
