Thursday, April 16, 2026
Homeಬೆಂಗಳೂರುಇಬ್ಬರು ಮಹಿಳೆಯರು ಸೇರಿ 16 ಪೆಡ್ಲರ್‌ಗಳ ಬಂಧನ : 5.24 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಇಬ್ಬರು ಮಹಿಳೆಯರು ಸೇರಿ 16 ಪೆಡ್ಲರ್‌ಗಳ ಬಂಧನ : 5.24 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

16 peddlers including two women arrested; drugs worth Rs 5.24 crore seized

ಬೆಂಗಳೂರು,ಫೆ.27- ವಿವಿಧ ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ನಗರ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ 16 ಆರೋಪಿಗಳನ್ನು ಬಂಧಿಸಿ 5.24 ಕೋಟಿ ಮೌಲ್ಯದ ಡ್ರಗ್‌್ಸ ವಶಪಡಿಸಿ ಕೊಂಡಿದ್ದಾರೆ.

ಮಾರತ್‌ಹಳ್ಳಿ, ವಿದ್ಯಾರಣ್ಯಪುರ, ಮಹದೇವಪುರ, ಗೋವಿಂದಪುರ, ಚಾಮರಾಜಪೇಟೆ, ಎಸ್‌‍ಆರ್‌ನಗರ ಮತ್ತು ನಂದಿನಿ ಬಡಾವಣೆ ಪೊಲೀಸ್‌‍ ಠಾಣೆಗಳ ಸರಹದ್ದಿನಲ್ಲಿ ಡ್ರಗ್‌್ಸ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಗರದಲ್ಲಿ ನಡೆಸಲಾಗುತ್ತಿದ್ದ ಮಾದಕ ದ್ರವ್ಯ ಜಾಲವನ್ನು ಪತ್ತೆ ಹಚ್ಚಿದ್ದಾರೆಂದು ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದವರು 3 ಸಾವಿರ ಎಂಡಿಎಂಎ ಮಾತ್ರೆಗಳು ಹಾಗೂ 200 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ಗಳನ್ನು ವಶಪಡಿಕೊಂಡಿದ್ದು, ಇವುಗಳ ಮಾರುಕಟ್ಟೆ ಮೌಲ್ಯ 4.50 ಕೋಟಿ ರೂ.ಗಳೆಂದು ಅವರು ತಿಳಿಸಿದರು.

ಮಾರತ್‌ಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ 15 ಲಕ್ಷ ಮೌಲ್ಯದ 15 ಕೆಜಿ ಗಾಂಜಾ, ವಿದ್ಯಾರಣ್ಯಪುರದಲ್ಲಿ 12 ಲಕ್ಷ ರೂ. ಮೌಲ್ಯದ 12.8 ಕೆಜಿ ಗಾಂಜಾ, ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿ 31 ಲಕ್ಷ ಮೌಲ್ಯದ 306 ಗ್ರಾಂ ಹೈಡ್ರೋ ಗಾಂಜಾ ಮತ್ತು 10.9 ಕೆಜಿ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಗೋವಿಂದಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಅಂದಾಜು 6 ಕೆಜಿ ಗಾಂಜಾ, ಚಾಮರಾಜಪೇಟೆಯಲ್ಲಿ 300 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, ಎಸ್‌‍ಆರ್‌ನಗರದಲ್ಲಿ 4.5 ಕೆಜಿ ಗಾಂಜಾ, ನಂದಿನಿ ಬಡಾವಣೆಯಲ್ಲಿ 950 ಗ್ರಾಂ ಗಾಂಜಾ ಸೇರಿದಂತೆ ಒಟ್ಟಾರೆ 5.24 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ವಿವರಿಸಿದರು.

ಬಂಧಿತ 16 ಆರೋಪಿಗಳಲ್ಲಿ ಇಬ್ಬರು ಮಹಿಳೆಯರು ಹಾಗೂ ಹೊರರಾಜ್ಯದ 8 ಮಂದಿ ಇದ್ದು ಇವರು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶ ಹಾಗೂ ಹೊರರಾಜ್ಯಗಳಿಂದ ಅಪರಿಚಿತ ವ್ಯಕ್ತಿಗಳಿಂದ ಎಂಡಿಎಂಎ ಎಕ್‌್ಸಟೆಸಿ ಪಿಲ್‌್ಸಗಳು, ಕ್ರಿಸ್ಟಲ್‌, ಗಾಂಜಾ, ಹೈಡ್ರೋ ಗಾಂಜಾ ತರಿಸಿಕೊಂಡು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು.

ಬಂಧಿತರು ನೀಡಿದ ಮಾಹಿತಿ ಮೇರೆಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಅಪರಿಚಿತ ಪೆಡ್ಲರ್‌ಗಳ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಸೀಮಂತ್‌ಕುಮಾರ್‌ ಸಿಂಗ್‌ ಹೇಳಿದರು. ಇಂದಿನ ಯುವಜನಾಂಗಕ್ಕೆ ಮಾರಕವಾಗಿ ಪರಿಣಮಿಸಿರುವ ಡ್ರಗ್ಸ್ ದಂಧೆಯನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿರುವ ಡಿಸಿಪಿ ರಾಜ ಇಮಾಮ್‌ ಖಾಸೀಮ್‌, ಬಿ.ಎಸ್‌‍ ನೇಮಗೌಡ,ಅಕ್ಷಯ್‌ ಎಂ.ಹಾಕೆ, ಡಾ. ವಿಕ್ರಮ್‌ ಅಮಟೆ,ಮಿಥುನ್‌ಕುಮಾರ್‌ , ಸೈದುಲ್ಲಾ ಅಡಾವತ್‌, ಯತೀಶ್‌ ಮತ್ತಿತರ ಪೊಲೀಸ್‌‍ ಅಧಿಕಾರಿಗಳು ಕಾರ್ಯವೈಖರಿಯನ್ನು ಆಯುಕ್ತರು ಶ್ಲಾಘಿಸಿದರು.

ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ವಿದೇಶಿ ಪ್ರಜೆಗಳು:
ನಗರದ ಬಾಗಲೂರು, ವೈಟ್‌ಫೀಲ್ಡ್ , ಪರಪ್ಪನ ಅಗ್ರಹಾರ ಮತ್ತು ಮಾದನಾಯಕನಹಳ್ಳಿಯಲ್ಲಿ ಅನಧಿಕೃತವಾಗಿ ನೆಲೆಸಿದ್ದ ಒಂಬತ್ತು ವಿದೇಶಿ ಪ್ರಜೆಗಳು ಈ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದರು.

ವಿವಿಧ ದೇಶಗಳ ಒಂಬತ್ತು ಪ್ರಜೆಗಳ ವೀಸಾ ಅವಧಿ ಪೂರ್ಣಗೊಂಡಿದ್ದರು ಅವರು ನಗರದಲ್ಲಿ ಅಕ್ರಮವಾಗಿ ನೆಲೆಸಿ ಡ್ರಗ್‌್ಸ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದರು. ಈ ಅಕ್ರಮ ವಿದೇಶಿಗರನ್ನು ಸಿಸಿಬಿ ಪೊಲೀಸರು ಬಂಧಿಸಿ ಫಾರಿನರ್‌ರ‍ಸ ಡಿಟೆಕ್ಷನ್‌ ಸೆಂಟರ್‌ಗೆ ಬಿಟ್ಟಿದ್ದು, ಅವರಲ್ಲಿ ಇಬ್ಬರನ್ನು ಅವರ ದೇಶಕ್ಕೆ ವಾಪಸ್‌‍ ಕಳುಹಿಸಲಾಗಿದೆ ಎಂದು ಸೀಮಂತ್‌ಕುಮಾರ್‌ ಸಿಂಗ್‌ ವಿವರಣೆ ನೀಡಿದರು.

RELATED ARTICLES

Latest News