Homeಬೆಂಗಳೂರುಬೆಂಗಳೂರು ಪೊಲೀಸರ ಕಾರ್ಯಾಚರಣೆ : 2 ಕೋಟಿ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು ಪೊಲೀಸರ ಕಾರ್ಯಾಚರಣೆ : 2 ಕೋಟಿ ಮೌಲ್ಯದ ಡ್ರಗ್ಸ್ ವಶ

Bangalore Police Operation: Drugs worth Rs 2 crore seized

ಬೆಂಗಳೂರು,ಫೆ.9- ನಗರ ಪೊಲೀಸರು ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ಕೈಗೊಂಡು 24 ಆರೋಪಿಗಳನ್ನು ಬಂಧಿಸಿ 2.8 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪೈಕಿ ಸಿಸಿಬಿ ಪೊಲೀಸರು ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿ 1.55 ಕೋಟಿ ಮೌಲ್ಯದ ಚರಸ್‌‍ ಮತ್ತು ಹೈಡ್ರೋ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಬಿ ಪೊಲೀಸರಿಗೆ ಹಾಗೂ ನಗರ ಪೊಲೀಸರಿಗೆ ಕುಮಾರಸ್ವಾಮಿ ಲೇಔಟ್‌,
ಹೆಬ್ಬಾಳ, ಜೆಸಿನಗರ, ಬಸವನಗುಡಿ, ಗೋವಿಂದರಾಜನಗರ, ಚಾಮರಾಜಪೇಟೆ ಪೊಲೀಸ್‌‍ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಲಭಿಸಿದೆ.

ಈ ಆಧಾರದ ಮೇಲೆ ಠಾಣೆಯಲ್ಲಿ ಎನ್‌ಡಿಪಿಎಸ್‌‍ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ಸ್ಥಳಗಳ ಮೇಲೆ ದಾಳಿ ಮಾಡಿ ಕೇರಳ ಹಾಗೂ ತೆಲಂಗಾಣದ ಇಬ್ಬರು ಡ್ರಗ್‌ ಪೆಡ್ಲರ್‌ಗಳು ಸೇರಿದಂತೆ 24 ಆರೋಪಿಗಳನ್ನು ಬಂಧಿಸಿದ್ದಾರೆ.

ಸಿಸಿಬಿ ಪೊಲೀಸರು ಕೇರಳದ ಆರೋಪಿಯನ್ನು ಬಂಧಿಸಿ 1 ಕೋಟಿ ಮೌಲ್ಯದ 1 ಕೆಜಿ 23 ಗ್ರಾಂ ಹೈಡ್ರೋ ಗಾಂಜಾ ಹಾಗೂ ತೆಲಂಗಾಣ ರಾಜ್ಯದ ಆರೋಪಿಯೊಬ್ಬನನ್ನು ಬಂಧಿಸಿ 55 ಲಕ್ಷ ಮೌಲ್ಯದ 11 ಕೆಜಿ 600 ಗ್ರಾಂ ಚರಸ್‌‍ ವಶಪಡಿಸಿಕೊಂಡಿದ್ದಾರೆ.

ಕೆಎಸ್‌‍ಲೇಔಟ್‌ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ 15 ಲಕ್ಷ ಮೌಲ್ಯದ 30 ಕೆಜಿ 220 ಗ್ರಾಂ ಗಾಂಜಾ, ಹೆಬ್ಬಾಳ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ 13.76 ಲಕ್ಷ ಮೌಲ್ಯದ 77 ಗ್ರಾಂ ಎಂಡಿಎಂಎ, 6ಕೆಜಿ 65 ಗ್ರಾಂ ಗಾಂಜಾ, ಜೆಸಿನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿ 2.40 ಲಕ್ಷ ಮೌಲ್ಯದ 24 ಗ್ರಾಂ ಎಂಡಿಎಂಎ, ಬಸವನಗುಡಿ ಠಾಣೆ ಪೊಲೀಸರು ಇಬ್ಬರು ಕೇರಳ ರಾಜ್ಯದ ಆರೋಪಿಗಳು ಸೇರಿದಂತೆ ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಿ 2.85 ಲಕ್ಷ ಮೌಲ್ಯದ 3 ಕೆಜಿ 790 ಗ್ರಾಂ ಗಾಂಜಾ,20 ಎಂಡಿಎಂಎ, ಚಾಮರಾಜಪೇಟೆ ಠಾಣೆ ಪೊಲೀಸರು ಆಂದ್ರಪ್ರದೇಶದ ವ್ಯಕ್ತಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿ 8 ಲಕ್ಷ ಮೌಲ್ಯದ 14 ಕೆಜಿ 831 ಗ್ರಾಂ ಗಾಂಜಾ ಮತ್ತು ಕಾರನ್ನು ವಶಪಡಿಸಿಕೊಂಡರೆ, ಗೋವಿಂದರಾಜನಗರ ಠಾಣೆ ಪೊಲೀಸರು ಒಬ್ಬಾತನನ್ನು ಬಂಧಿಸಿ 11 ಲಕ್ಷ ಮೌಲ್ಯದ 21 ಕೆಜಿ 60 ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇವರೆಲ್ಲರನ್ನೂ ವಿಚಾರಣೆಗೊಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳಿಂದ ಮಾದಕ ವಸ್ತು ಹೈಡ್ರೋ ಗಾಂಜಾ, ಗಾಂಜಾ, ಚರಸ್‌‍ ಮತ್ತು ಎಂಡಿಎಂಎ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ಹೇಳಿದ್ದಾರೆೆ.

ಈ ಆರೋಪಿಗಳಿಂದ ಸುಮಾರು 2.8 ಕೋಟಿ ಮೌಲ್ಯದ 1 ಕೆ.ಜಿ 23 ಗ್ರಾಂ ಹೈಡ್ರೋ ಗಾಂಜಾ, 76 ಕೆಜಿ ಗಾಂಜಾ, 11 ಕೆ.ಜಿ 600 ಗ್ರಾಂ ಚರಸ್‌‍ ಹಾಗೂ 121 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಗೆ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುತ್ತವೆ.

ಈ ಕಾರ್ಯಾಚರಣೆಯಲ್ಲಿ ಸಿಸಿಬಿ, ನೈಋತ್ಯ, ಉತ್ತರ, ದಕ್ಷಿಣ, ಪಶ್ಚಿಮ ವಿಭಾಗದ ಉಪ ಪೊಲೀಸ್‌‍ ಆಯುಕ್ತರುಗಳಾದ ಹರಿಬಾಬು, , ರಾಜಾ ಇಮಾಮ್‌ ಕಾಸಿಂ, ಅನಿತ ಬಿ ಹದ್ದಣ್ಣವರ್‌, ನೇಮಗೌಡ, ಲೋಕೇಶ್‌ ಬಿ ಜಗಲಾಸರ್‌,ಯತೀಶ್‌ ರವರುಗಳ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್‌‍ ಆಯುಕ್ತರು ಗಳಾದ ಮಹಾನಂದ, ಆನಂದ್‌, ಗಿರೀಶ್‌, ತನ್ವೀರ್‌, ನಾರಾಯಣಸ್ವಾಮಿ, ರಮೇಶ್‌, ಚಂದನ್‌ ಕುಮಾರ್‌ ರವರ ನೇತೃತ್ವದಲ್ಲಿ, ಇನ್‌್ಸಪೆಕ್ಟರ್‌ಗಳಾದ ಮಂಜಪ್ಪ, ಜಗದೀಶ್‌, ರಾಮಚಂದ್ರ ಚೌದರಿ, ಭೈರ, ಚೈತನ್ಯ, ಸವಿತ, ಸುಬ್ರಮಣಿ, ಸತೀಶ್‌ಕುಮಾರ್‌ಅವರನ್ನೊಳಗೊಂಡ ಸಿಬ್ಬಂದಿ ತಂಡ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News