ಬೆಂಗಳೂರು, ಆ.22- ಕೆಪಿಟಿಸಿಎಲ್ ವತಿಯಿಂದ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 23ರಂದು ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಖೋಡೇಸ್ ಗ್ಲಾಸ್ ಫ್ಯಾಕ್ಟರಿ ವಿ.ವಿ. ಕೇಂದ್ರದ 66/11 ಕೆ.ವಿ. ಉಪಸ್ಥಾವರ ವ್ಯಾಪ್ತಿಯ ಅಂಜನಾಪುರ, ಅವಲಹಳ್ಳಿ, ರಾಘವನಪಾಳ್ಯ, ರಾಯಲ್ ಸಾರಥಿ ನಗರ, ನಾಗೇನಗೌಡಪಾಳ್ಯ, ಶೋಭಾ ಅಪಾರ್ಟ್ಮೆಂಟ್, ನಾರಾಯಣನಗರ 1 ಮತ್ತು 2ನೇ ಬ್ಲಾಕ್, ದೀಕ್ಷಾ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅಂಜನಾಪುರ ಉಪಸ್ಥಾವರದ ಕೆಎಸ್ಐಟಿ ಕಾಲೇಜು, ಅಂಜನಾಪುರ, 8ನೇ ಬ್ಲಾಕ್, ವೀವರ್ಸ್ ಕಾಲೋನಿ, ಪೂರ್ವಾಂಕರ್ ಅಪಾರ್ಟ್ಮೆಂಟ್, ಅಮೃತನಗರ, ಎಸ್.ಪಿ. ತೋಟ, ವಡ್ಡರಪಾಳ್ಯ, ಕೆಂಬತ್ತಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಫಾರೆಸ್ಟ್ ವ್ಯೂ ಉಪಸ್ಥಾವರ ವ್ಯಾಪ್ತಿಯ ಶೋಭಾ ಫಾರೆಸ್ಟ್ ಅಪಾರ್ಟ್ಮೆಂಟ್, ತಲಘಟ್ಟಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಸೌದೇಲಾ ವಿ.ವಿ. ಕೇಂದ್ರ ಉಪಸ್ಥಾವರ ವ್ಯಾಪ್ತಿಯ ವಿಶ್ವಪ್ರಿಯ ಲೇಔಟ್, ಬೇಗೂರು-ಕೊಪ್ಪ ರಸ್ತೆ, ದೇವರಚಿಕ್ಕನಹಳ್ಳಿ, ಅಕ್ಷಯನಗರ, ತೇಜಸ್ವಿನಿ ನಗರ, ಹಿರಾನಂದಿನಿ ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ.
ಬಿಟಿಎಂ ಲೇಔಟ್ ಉಪಸ್ಥಾವರ ವ್ಯಾಪ್ತಿಯ ಕಾವೇರಿ ನಗರ, ಹುಳಿಮಾವು, ಅಕ್ಷಯನಗರ, ಹೊಂಗಸಂದ್ರ, ಬಿ.ಟಿ.ಎಸ್. ಲೇಔಟ್, ಕೋಡಿಚಿಕ್ಕನಹಳ್ಳಿ, ವಿಜಯಾ ಬ್ಯಾಂಕ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ತಿಳಿಸಲಾಗಿದೆ.
ವಿದ್ಯುತ್ ವ್ಯತ್ಯಯದ ಅವಧಿಯಲ್ಲಿ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ. ಯಾವುದೇ ದೂರು ಅಥವಾ ಮಾಹಿತಿಗಾಗಿ 1912 ಸಹಾಯವಾಣಿಗೆ ಕರೆ ಮಾಡಬಹುದು ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
