Saturday, April 18, 2026
Homeರಾಜ್ಯಜ್ಯೂವೆಲರಿ ಅಂಗಡಿಗೆ ನುಗ್ಗಿ ಗನ್‌ ತೋರಿಸಿ ಆಭರಣ ದೋಚಿದ ದರೋಡೆಕೋರರ ಸುಳಿವು ಪತ್ತೆ

ಜ್ಯೂವೆಲರಿ ಅಂಗಡಿಗೆ ನುಗ್ಗಿ ಗನ್‌ ತೋರಿಸಿ ಆಭರಣ ದೋಚಿದ ದರೋಡೆಕೋರರ ಸುಳಿವು ಪತ್ತೆ

jewelry store Robbery at gunpoint in Bengaluru

ಬೆಂಗಳೂರು,ಜ.28-ದಾಸನಪುರದ ಜ್ಯೂವೆಲರಿ ಅಂಗಡಿಗೆ ನುಗ್ಗಿ ಗನ್‌ ತೋರಿಸಿ ಹಣ, ಆಭರಣ ದೋಚಿ ಪರಾರಿಯಾಗಿರುವ ದರೋಡೆಕೋರರ ಸುಳಿವು ಸಿಕ್ಕಿದೆ. ಆದಷ್ಟು ಶೀಘ್ರದಲ್ಲಿ ಬಂಧಿಸುತ್ತೇವೆಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಗರದ ಎಲ್ಲಾ ಜ್ಯೂವೆಲರಿ ಶಾಪ್‌ಗಳಲ್ಲೂ ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲು ಈಗಾಗಲೇ ಸೂಚಿಸಲಾಗಿದೆ. ನಮ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲಿದ್ದಾರೆ ಎಂದರು.
ಮಾರತಹಳ್ಳಿಯ ಬಿಲ್ಡರ್‌ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿ 18 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಬಗ್ಗೆ ವಿವರ ನೀಡಿ, ನಾವು ಈಗಾಗಲೇ ಸಾರ್ವಜನಿಕರಲ್ಲಿ ಮನವಿ ಮಾಡಿದ್ದೇವೆ.

ಕೆಲಸಗಾರರ ವಿವರಗಳನ್ನು ಪಡೆದು ಕೆಲಸಕ್ಕೆ ಇಟ್ಟುಕೊಳ್ಳಬೇಕು. ಅವರುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು. ಅವರ ಪೂರ್ವಾಪರ ವಿಚಾರಿಸಬೇಕು, ಹೊರ ರಾಜ್ಯದವರಾಗಿದ್ದರೆ ಪೊಲೀಸ್‌‍ ವೇರಿಫಿಕೇಷನ್‌ ಆಗಬೇಕು ಎಂದು ಹೇಳಿದರು.

ಮನೆ ಕೆಲಸಗಾರರನ್ನು ನಂಬಿ ಕುಟುಂಬದವರು ಹೊರಗೆ ಹೋಗಬಾರದು. ತಾವು ಎಲ್ಲಿಗೆ ಹೋಗುತ್ತೇವೆ, ಯಾವಾಗ ಬರುತ್ತೇವೆ ಎಂಬ ವಿವರಗಳನ್ನು ಕೆಲಸಗಾರರಿಗೆ ನೀಡಬಾರದು ಎಂದು ಅವರು ಸಾರ್ವಜನಿಕರಿಗೆ ಸಲಹೆ ಮಾಡಿದ್ದಾರೆ.ಮನೆಗೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಬಗ್ಗೆ ವಿಚಾರಿಸಬೇಕು.ಅವರ ಚಲನವಲನಗಳನ್ನು ಗಮನಿಸಬೇಕು ಎಂದು ಅವರು ಇದೇ ವೇಳೆ ತಿಳಿಸಿದರು.

RELATED ARTICLES

Latest News