Homeಬೆಂಗಳೂರುಬೆಂಗಳೂರಲ್ಲಿ ಮೊಬೈಲ್ ಕಳ್ಳರ ಹಾವಳಿ, ಒಂದೇ ದಿನ ಎರಡು ಪ್ರಕರಣ ದಾಖಲು

ಬೆಂಗಳೂರಲ್ಲಿ ಮೊಬೈಲ್ ಕಳ್ಳರ ಹಾವಳಿ, ಒಂದೇ ದಿನ ಎರಡು ಪ್ರಕರಣ ದಾಖಲು

ಬೆಂಗಳೂರು,ಸೆ.13- ಕಳೆದ ರಾತ್ರಿ ನಗರದಲ್ಲಿ ಎರಡು ಕಡೆ ಮೊಬೈಲ್‌ ದರೋಡೆ ಪ್ರಕರಣಗಳು ನಡೆದಿವೆ. ಅಶೋಕ ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಒಂದು, ಮತ್ತೊಂದು ಹಲಸೂರು ಗೇಟ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.

ರಾತ್ರಿ 12.30 ರ ಸಂದರ್ಭದಲ್ಲಿ ವಿದ್ಯಾರ್ಥಿ ಭೀಷ ಎಂಬಾತ ವುಡ್‌ಸ್ಟ್ರೀಟ್‌ನಲ್ಲಿ ಕ್ಯಾಬ್‌ಗಾಗಿ ಬುಕ್‌ ಮಾಡುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದರೋಡೆಕೋರರು ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಬಗ್ಗೆ ಅವರು ಅಶೋಕ ನಗರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ ರಸ್ತೆಯಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ನಗರದ ಹಡ್ಸನ್‌ವೃತ್ತದಲ್ಲಿ ವ್ಯಕ್ತಿಯೊಬ್ಬರು ರಾತ್ರಿ 10.30ರ ಸಮಯದಲ್ಲಿ ನಡೆದುಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಅವರ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮೊಬೈಲ್‌ ಅನ್ನು ಕಳೆದುಕೊಂಡ ವ್ಯಕ್ತಿ ದೂರು ನೀಡಿಲ್ಲ ಎಂದು ಹಲಸೂರು ಗೇಟ್‌ ಠಾಣೆ ಇನ್‌್ಸಪೆಕ್ಟರ್‌ ಅವರು ಈ ಸಂಜೆಗೆ ತಿಳಿಸಿದ್ದಾರೆ.

RELATED ARTICLES
spot_img

Latest News