Homeರಾಜ್ಯಮನೋ ವಿಕಲಾಂಗರ ನೂತನ ವೈದ್ಯಕೀಯ ಕೇಂದ್ರಕ್ಕೆ ರಾಜ್ಯಪಾಲರಿಂದ ಚಾಲನೆ

ಮನೋ ವಿಕಲಾಂಗರ ನೂತನ ವೈದ್ಯಕೀಯ ಕೇಂದ್ರಕ್ಕೆ ರಾಜ್ಯಪಾಲರಿಂದ ಚಾಲನೆ

ಬೆಂಗಳೂರು,ಸೆ.13- ದಿವ್ಯಾಂಗರೂ ಸಶಕ್ತರಾಗಬೇಕು ಅದಕ್ಕೆ ಪೂರಕವಾಗಿ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಹಾಯ ಹಸ್ತ ನೀಡಬೇಕಿದೆ,ಇದರಲ್ಲಿ ಭಾರತ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವ ದಾಖಲೆ ಮಾಡಿದೆ. ಈ ನಿಟ್ಟಿನಲ್ಲಿ ಕೊಡುಗೈ ದಾನಿಗಳು ಕೈ ಜೋಡಿಸಬೇಕೆಂದು ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಕರೆ ನೀಡಿದರು.

ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿಯ ಗೌಡನಹಳ್ಳಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಾತೃಶ್ರೀ ಮನೋ ವಿಕಾಸ ಕೇಂದ್ರದ ನೂತನ ವೈದ್ಯಕೀಯ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ವಿಕಲಾಂಗರು ದೇವರ ಮಕ್ಕಳಂತೆ, ಅವರ ಸೇವೆ ಮಾಡುವುದು ಪುಣ್ಯದ ಕೆಲಸ, ಅಂತಹ ಕೆಲಸವನ್ನು ಮಾತೃಶ್ರೀ ಮನೋವಿಕಾಸ ಕೇಂದ್ರ ಮುಂದಾಗಿದೆ,ಅದಕ್ಕೆ ಬೆನ್ನೆಲುಬಾಗಿ ನಿಂತಿರುವ ಮಹಾದಾನಿಗಳಿಗೆ ಭಗವಂತನ ಸೇವೆಯನ್ನು ನೇರವಾಗಿ ಮಾಡುವಂತಹ ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದರು.

ಮನೋ ವಿಕಲಚೇತನ ಮಕ್ಕಳ ಆರೈಕೆ ಮಾಡಬೇಕಾದರೆ ಸೇವೆ,ಸಂವೇದನೆಯ ಮನೋಭಾವನೆ ಇರಬೇಕು. ಮಾನವ ಸೇವೆಗೆ ಸರ್ವೋಚ್ಚ ಸ್ಥಾನಮಾನವಿದೆ ಎಂದು ಅಭಿಪ್ರಾಯಪಟ್ಟರು. ಸಂವಿಧಾನದಲ್ಲಿ ಪ್ರತಿ ನಾಗರಿಕನಿಗೂ ಸಮಾನ ಸ್ಥಾನವಿದ್ದು ವಿಕಲಾಂಗರಿಗೆ ಪ್ರತ್ಯೇಕ ಸ್ಥಾನ ಮಾನ ದೊರೆಯುವಂತಾಗಬೇಕು ಎಂದು ಕರೆ ನೀಡಿದ ಥಾವರ್‌ ಚಂದ್‌ ಗೆಹ್ಲೋಟ್‌‍, ದಾನಿಗಳು ಅವಶ್ಯಕತೆ ಇದೆಯೇ ಅದರಿಂದ ಯಾವುದಾದರೂ ರೀತಿಯಲ್ಲಿ ಸಮಾಜಕ್ಕೆ ಸಹಾಯವಾಗುತ್ತಿದೆಯೇ ಎಂಬುದನ್ನು ಮನಗಂಡು ದಾನ ನೀಡಬೇಕೆಂದು ಕಿವಿ ಮಾತು ಹೇಳಿದರು.

ವಾರ್ತಾ ಇಲಾಖೆ ಆಯುಕ್ತ, ಐಪಿಎಸ್‌‍ ಅಧಿಕಾರಿ ಹಾಗೂ ಮಾತೃಶ್ರೀ ಮನೋ ವಿಕಾಸ ಕೇಂದ್ರದ ಮುಖ್ಯಸ್ಥ ಎಂ.ಎನ್‌ .ಅನುಚೇತ್‌, ಡೇ ಕೇರ್‌ ಸೆಂಟರ್‌ ಆರಂಭಿಸುತ್ತಿದ್ದೇವೆ. ರಾಜ್ಯದ 5 ಕಡೆ ಶಾಖೆಗಳನ್ನು ಅರಂಭಿಸಲು ನಿರ್ಧರಿಸಿದ್ದೇವೆ ಹಾಗೆಯೇ ಇನ್ನೊಂದು ವರ್ಷದಲ್ಲಿ 121 ಇರುವ ಮಕ್ಕಳ ಸಂಖ್ಯೆಯನ್ನು 200 ಮಕ್ಕಳಿಗೆ ವಿಸ್ತರಿಸಲಾಗುವುದು ತಿಳಿಸಿದರು.

ಪದಶ್ರೀ ಪ್ರಶಸ್ತಿ ಪುರಸ್ಕೃತರು, ಸಮಾಜ ಸೇವಕರಾದ ಡಾ.ಎಸ್‌‍ ಜಿ ಸುಶೀಲಮ್ಮ, ಪದಶ್ರೀ ಪ್ರಶಸ್ತಿ ಪುರಸ್ಕೃತರು, ಖ್ಯಾತ ವೈದ್ಯರಾದ ಡಾ.ಸುರೇಶ್‌ ಹನಗವಾಡಿ, ಮಹಾ ಪೋಷಕರಾದ ನಿವೃತ್ತ ಐಪಿಎಸ್‌‍ ಅಧಿಕಾರಿ ಗೋಪಾಲ್‌ ಹೊಸೂರ್‌, ನಿವೃತ್ತ ಎಸಿಪಿ ಲೋಕೇಶ್ವರ, ಪ್ರಧಾನ ಕಾರ್ಯದರ್ಶಿ ಎಸ್‌‍.ಬಸವರಾಜು ಅವರುಗಳು ವೇದಿಕೆಯಲ್ಲಿದ್ದರು.

25 ವರ್ಷಗಳ ಹಿಂದೆ ಮೂವರು ಮನೋ ವಿಕಲಚೇತನ ಮಕ್ಕಳಿಂದ ಆರಂಭವಾದ ಮಾತೃಶ್ರೀ ಮನೋ ವಿಕಾಸ ಕೇಂದ್ರದಲ್ಲೀಗ 121 ಮನೋ ವಿಕಲಚೇತನ ಮಕ್ಕಳಿದ್ದಾರೆ. ವರ್ಷವಿಡೀ ವೈದ್ಯಕೀಯ ಸೇವೆ ಇತ್ತು. ಈಗ ಆಸ್ಪತ್ರೆ ಆರಂಭಿಸಿರುವುದರಿಂದ ಮನೋ ವಿಕಲಾಂಗ ಚೇತನರಿಗೆ ಅನುಕೂಲವಾಗಲಿದೆ.

RELATED ARTICLES
spot_img

Latest News