Homeಬೆಂಗಳೂರುಕಬ್ಬನ್‌ ಪಾರ್ಕ್‌ನಲ್ಲಿ ನಾಳೆಯಿಂದ ಪುಷ್ಪ ಸಂಭ್ರಮ

ಕಬ್ಬನ್‌ ಪಾರ್ಕ್‌ನಲ್ಲಿ ನಾಳೆಯಿಂದ ಪುಷ್ಪ ಸಂಭ್ರಮ

ಬೆಂಗಳೂರು, ನ.24- ಸಿಲಿಕಾನ್‌ ಸಿಟಿಯ ಜನರಿಗೆ ಹೂವಿನ ಲೋಕದ ಸೊಬಗನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಿಬಂದಿದೆ. ನಾಳೆಯಿಂದ ಕಬ್ಬನ್‌ ಪಾರ್ಕಿನಲ್ಲಿ 13ದಿನಗಳ ಕಾಲ ಪುಷ್ಪ ಸಂಭ್ರಮ ಇರಲಿದೆ.ತೋಟಗಾರಿಕೆ ಇಲಾಖೆಯ ವತಿಯಿಂದ ಹೂವಿನ ಹಬ ್ಬ-2026 ಆಯೋಜಿ ಸಲಾಗಿದ್ದು, ನಾಳೆಯಿಂದ ಡಿ. 7ರವರೆಗೆ 13 ದಿನಗಳ ಕಾಲ ಪುಷ್ಪ ಸಂಭ್ರಮ ನಡೆಯಲಿದೆ.

ಜನರ ಜೀವನದಲ್ಲಿ ಹಸಿರು, ಪ್ರಕೃತಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಹೂವಿನ ಹಬ್ಬವನ್ನು ಆಯೋಜಿಸಲಾಗಿದೆ. ವಿವಿಧ ಬಗೆಯ ಹೂವುಗಳು, ಅಲಂಕಾರಿಕ ಸಸ್ಯಗಳು ಹಾಗೂ ಪುಷ್ಪ ವಿನ್ಯಾಸಗಳು ಈ ಬಾರಿಯ ಹಬ್ಬದ ಪ್ರಮುಖ ಆಕರ್ಷಣೆಯಾಗಲಿವೆ. ಪ್ರತಿದಿನ ಸಂಜೆ 4 ಗಂಟೆಯಿಂದ ಕಾರ್ಯಕ್ರಮಗಳು ನಡೆಯಲಿವೆ.

1.25 ಲಕ್ಷ ಹೂಗಿಡಗಳ ಆಕರ್ಷಣೆ:
ಹೂವಿನ ಹಬ್ಬದಲ್ಲಿ ಲಿಸಿಯಾಂಥಸ್‌‍, ಪೆಟೂನಿಯಾ, ಕ್ರೈಸಾಂಥಿಮಮ್‌‍, ಸೆಲೋಸಿಯಾ, ಕಾಕ್ಸ್ ಕಾಂಬ್‌‍, ಮಾರಿಗೋಲ್ಡ್‌‍, ಜೀನಿಯಾ, ಡಯಾಂಥಸ್‌‍, ಸಾಲ್ವಿಯಾ, ಸ್ನ್ಯಾಪ್‌ಡ್ರಾಗನ್‌‍, ಸೂರ್ಯಕಾಂತಿ ಸೇರಿದಂತೆ ವಿವಿಧ ಜಾತಿಯ ಹೂವುಗಳನ್ನು ಪ್ರದರ್ಶಿಸಲಾಗುತ್ತದೆ.

ಇಂಪೇಷಿಯನ್ಸ್‌‍, ಬಾಲ್ಸಮ್‌‍, ಟೊರೇನಿಯಾ, ಬಿಗೋನಿಯಾ, ಗಜಾನಿಯಾ ಹಾಗೂ ಪೆಂಟಾಸ್‌‍ ಸೇರಿದಂತೆ ಹಲವು ಬಗೆಯ ಹೂವಿನ ಗಿಡಗಳೂ ಇರಲಿವೆ.ಫಿಲೋಡೆಂಡ್ರಾನ್‌‍, ಕೋಲಿಯಸ್‌‍, ಶೆಫ್ಲೆರಾ, ರಾಫಿಸ್‌‍ ಪಾಮ್‌ ಹಾಗೂ ಬ್ರೊಮೆಲಿಯಾಡ್‌್ಸನಂತಹ ಅಲಂಕಾರಿಕ ಸಸ್ಯಗಳನ್ನೂ ಪ್ರದರ್ಶನದಲ್ಲಿ ಇರಿಸಲಾಗುತ್ತದೆ. ಒಟ್ಟು 1.25 ಲಕ್ಷ ಅಲಂಕಾರಿಕ ಹೂಗಿಡಗಳ ಆಕರ್ಷಕ ಜೋಡಣೆ ಹೂವಿನ ಹಬ್ಬಕ್ಕೆ ವಿಶೇಷ ಮೆರುಗು ನೀಡಲಿದೆ.

ಕಲೆ, ಸಂಸ್ಕೃತಿಗೂ ವೇದಿಕೆ:ಹೂವಿನ ಹಬ್ಬ ಕೇವಲ ಪುಷ್ಪ ಪ್ರದರ್ಶನಕ್ಕೆ ಸೀಮಿತವಾಗದೆ, ಕಲೆ ಮತ್ತು ಸಂಸ್ಕೃತಿಯ ಸಮಾಗಮಕ್ಕೂ ವೇದಿಕೆಯಾಗಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ನೃತ್ಯ, ಸ್ಥಳೀಯ ಕಲಾ ಪ್ರದರ್ಶನಗಳು ಹಾಗೂ ಸಾರ್ವಜನಿಕರ ಮನರಂಜನೆಗೆ ಪೂರಕವಾದ ಚಟುವಟಿಕೆಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ತೋಟಗಾರಿಕೆ, ಹೂವಿನ ಕೃಷಿ ಹಾಗೂ ಅಲಂಕಾರಿಕ ಸಸ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಬೆಳೆಸುವುದಕ್ಕೂ ಈ ಉತ್ಸವ ನೆರವಾಗಲಿದೆ.

ಹೂವಿನ ಹಬ್ಬಕ್ಕೆ ಆಗಮಿಸುವವರಿಗೆ ವಿವಿಧ ಆಹಾರ ಮಳಿಗೆಗಳು ಹಾಗೂ ಇತರ ಆಕರ್ಷಣೆಗಳ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಕುಟುಂಬ ಸಮೇತ ಭೇಟಿ ನೀಡುವವರಿಗೆ ಪ್ರಕೃತಿಯ ಸೊಬಗನ್ನು ಆಸ್ವಾದಿಸುವುದರ ಜತೆಗೆ ಮನರಂಜನೆ ಪಡೆಯಲು ಇದು ಉತ್ತಮ ಅವಕಾಶವಾಗಲಿದೆ.

ಪ್ರವೇಶ ಶುಲ್ಕ ಎಷ್ಟು..?
ಹೂವಿನ ಹಬ್ಬಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಾರದ ದಿನಗಳಲ್ಲಿ ವಯಸ್ಕರಿಗೆ 50 ರೂ. ಹಾಗೂ 12 ವರ್ಷದ ಮಕ್ಕಳಿಗೆ 20 ರೂ. ಶುಲ್ಕ ವಿಧಿಸಲಾಗುತ್ತದೆ. ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ 80 ರೂ. ಹಾಗೂ ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕ ಇರಲಿದೆ.

ನವೆಂಬರ್‌ 25ರಂದು ಆರಂಭವಾಗಲಿರುವ ಈ ಹೂವಿನ ಹಬ್ಬ ಡಿಸೆಂಬರ್‌ 7ರವರೆಗೆ ನಡೆಯಲಿದ್ದು, ಬೆಂಗಳೂರಿನ ನಿವಾಸಿಗಳು ಹಾಗೂ ಪ್ರವಾಸಿಗರು ನಗರದ ಹೃದಯಭಾಗದಲ್ಲಿರುವ ಕಬ್ಬನ್‌ ಉದ್ಯಾನವನದಲ್ಲಿ ಹೂವುಗಳ ವೈವಿಧ್ಯ ಮತ್ತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ.

RELATED ARTICLES

Latest News