Homeಬೆಂಗಳೂರುವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆಗಳ್ಳತನ ಮಾಡುತ್ತಿದ್ದ ತೆಲಂಗಾಣದ ಚೋರನ ಬಂಧನ

ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆಗಳ್ಳತನ ಮಾಡುತ್ತಿದ್ದ ತೆಲಂಗಾಣದ ಚೋರನ ಬಂಧನ

ಬೆಂಗಳೂರು,ಸೆ.23- ತೆಲಂಗಾಣದಿಂದ ವಿಮಾನ ದಲ್ಲಿ ನಗರಕ್ಕೆ ಬಂದು ಮನೆಗಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ ಕುಖ್ಯಾತ ಮನೆಗಳ್ಳನೊಬ್ಬನನ್ನು ವಿಲ್ಸನ್‌ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿ ವಿದೇಶಿ ಕರೆನ್ಸಿ ಸೇರಿದಂತೆ 42 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ತೆಲಂಗಾಣದ ನಲ್ಲೂರು ನಿವಾಸಿ ವಿನೋದ್‌ಕುಮಾರ್‌ (32) ಬಂಧಿತ ಕುಖ್ಯಾತ ಮನೆಗಳ್ಳ. ಈತನ ಮೇಲೆ ತೆಲಂಗಾಣದಲ್ಲಿ 28 ಪ್ರಕರಣ ಗಳು, ಉತ್ತರ ಪ್ರದೇಶದಲ್ಲಿ ಒಂದು ಹಾಗೂ ಬೆಂಗಳೂರು ನಗರದಲ್ಲಿ ಒಂದು ಪ್ರಕರಣ ಸೇರಿದಂತೆ ಒಟ್ಟು 30 ಪ್ರಕರಣಗಳು ದಾಖಲಾಗಿವೆ.

ವಿಲ್ಸನ್‌ಗಾರ್ಡ್‌ನ 10ನೇ ಕ್ರಾಸ್‌‍ ನಿವಾಸಿಯೊಬ್ಬರು ಮನೆಯ ಮುಂಬಾಗಿಲಿಗೆ ಬೀಗ ಹಾಕಿ ನಿದ್ರೆಗೆ ಜಾರಿದ್ದಾರೆ. ಆ ಸಂದರ್ಭದಲ್ಲಿ ಕಳ್ಳ ಕಿಟಕಿಯ ಸರಳನ್ನು ಮುರಿದು ಒಳನುಗ್ಗಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣಗಳು,ವಿದೇಶಿ ಕರೆನ್ಸಿ ಹಾಗೂ ಐ ಪ್ಯಾಡ್‌ ಕಳವು ಮಾಡಿಕೊಂಡು ಪರಾರಿ ಯಾಗಿದ್ದಾನೆ.ಬೆಳಗ್ಗೆ ಎದ್ದಾಗ ಮನೆಯಲ್ಲಿ ಕಳ್ಳತನವಾಗಿ ರುವುದು ಕಂಡು ಬಂದಿದ್ದು, ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿಯನ್ನು ಠಾಣೆಗೆ ಕರೆದೊಯ್ದು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಈತ ತೆಲಂಗಾಣ ರಾಜ್ಯದವ ನೆಂದು ಗೊತ್ತಾಗಿದೆ.ಆರೋಪಿಯು ಕಳವು ಮಾಡಿದ್ದ ಚಿನ್ನಾಭರಣಗಳನ್ನು ಹೊಸೂರು ಮುಖ್ಯ ರಸ್ತೆಯ ಬಡಾ ಮಕಾನ್‌ ಸಶಾನದ ಬಳಿ ಇರುವ ಪಾಳುಬಿದ್ದ ಕಟ್ಟಡದಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಹೋಗಿ 271 ಗ್ರಾಂ ಚಿನ್ನಾಭರಣ, ವಿದೇಶಿ ಕರೆನ್ಸಿ ಹಾಗೂ ಒಂದು ಐಪ್ಯಾಡ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಪ್ರಕಾಶ್‌ ಹಾಗೂ ಸಿಬ್ಬಂದಿ ತಂಡ ಬೇಧಿಸಿದೆ.

RELATED ARTICLES
spot_img

Latest News